
ಮಗನ ಜೊತೆ ಯಶ್ ತುಂಟಾಟ ವಿಡಿಯೋ ವೈರಲ್
Team Udayavani, Feb 6, 2023, 10:58 AM IST

ಸದ್ಯ ನಟ ಯಶ್ ಅವರ ಹೊಸ ಸಿನಿಮಾದ ಘೋಷಣೆಯನ್ನು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಮತ್ತೂಂದೆಡೆ ಯಶ್ ಕೂಡ ಸದ್ದಿಲ್ಲದೆ, ತೆರೆಮರೆಯಲ್ಲಿಯೇ ತಮ್ಮ ಮುಂದಿನ ಸಿನಿಮಾಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇದರ ನಡುವೆ ಬಿಡುವು ಮಾಡಿಕೊಂಡು ತಮ್ಮ ಮಕ್ಕಳೊಂದಿಗೆ ಒಂದಷ್ಟು ಸಮಯ ಕಳೆಯುವ ಯಶ್ ಆಗಾಗ್ಗೆ ಈ ಪೋಟೊ ಮತ್ತು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ.
ಇದನ್ನೂ ಓದಿ:23 ವರ್ಷದ ಯುವತಿಯನ್ನು ಪ್ರೀತಿಸಿ ಮದುವೆಯಾದ 6 ಮಕ್ಕಳ ತಂದೆ, 65 ವರ್ಷದ ಮುದುಕ.!
ಇತ್ತೀಚೆಗೆ ಯಶ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿರುವ ಅಂಥದ್ದೇ ಒಂದು ಕ್ಯೂಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯಶ್ ಮತ್ತು ಅವರ ಮಗ ಯಥರ್ವ್ ಜೊತೆಗಿನ ಕ್ಯೂಟ್ ಸಂಭಾಷಣೆಯ ವಿಡಿಯೋ ಇದಾಗಿದೆ. ಸೋಫಾದಲ್ಲಿ ಕೂತು ಯಶ್ ಮಗ ಯಥರ್ವ್ ಜೊತೆ ಆಟ ಆಡುತ್ತಿರುವ ಈ ವಿಡಿಯೋದಲ್ಲಿ, ಯಶ್ ತನ್ನ ಬೈಸಿಪ್ಸ್ ತೋರಿಸಿ “ಹೇಗಿದೆ’ ಎಂದು ಕೇಳಿದ್ದಾರೆ, ಯಥರ್ವ್ “ಸಾಫ್ಟ್ ಆಗಿದೆ’ ಎಂದು ಹೇಳಿದ್ದಾನೆ. ಅದಕ್ಕೆ ಯಶ್, “ಹಾಗಾದರೆ ನಿನ್ನ ಬೈಸಿಪ್ಸ್ ತೋರಿಸು’, ಎಂದಾಗ ಮುಷ್ಠಿ ಬಿಗಿ ಹಿಡಿದು ಕೈ ಮಡಿಚಿ, “ನೋಡು ನನ್ನ ಬೈಸಿಪ್ಸ್ ಬಹಳ ಗಟ್ಟಿಯಾಗಿದೆ’ ಎನ್ನುತ್ತಾನೆ.
“ಹಾಗಾದರೆ ನನ್ನ ಬೈಸಿಪ್ಸ್ ಸ್ಟ್ರಾಂಗ್ ಇಲ್ವಾ’ ಅಂದ್ರೆ, “ನೋಡು ಬೇಕಿದ್ದರೆ ಸಾಫ್ಟ್ ಆಗಿದೆ. ನನ್ನದು ಗಟ್ಟಿಯಾಗಿದೆ’ ಎಂದು ಕ್ಯೂಟ್ ಆಗಿ ಹೇಳಿದ್ದಾನೆ. “ಸೂಪರ್ ಮಗನೇ ನೀನು ತುಂಬಾ ಸ್ಟ್ರಾಂಗ್’ ಎಂದು ಯಶ್ ಮಗನನ್ನು ಎತ್ತಿಕೊಂಡಿದ್ದಾರೆ. ಯಥರ್ವ್ ತಂದೆಯನ್ನು ನೋಡಿ ನಾನೇ ನಿನಗಿಂತ ಸ್ಟ್ರಾಂಗ್ ಎಂದು ಹೇಳುವ ವಿಡಿಯೋ ಯಶ್ ಅಭಿಮಾನಿಗಳಿಗೆ ಬಹಳ ಇಷ್ಟವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಖತ್ ವೈರಲ್ ಆಗಿದ್ದು, ಲೈಕ್ಸ್, ಕಾಮೆಂಟ್ಸ್ ಮೂಲಕ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.
View this post on Instagram
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ರಾಮ ಮೂರ್ತಿಯ ಮೇಲೆ ಕಾಲಿಟ್ಟ ವಿವಾದ; ಬಿಜೆಪಿ ಶಾಸಕ ಸಲಗರ ಶರಣು ಕ್ಷಮೆ

ಶಿರ್ವ: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿ ಓಡಾಡುತ್ತಿದ್ದವನ ಬಂಧನ

ವರುಣಾದಿಂದ ವಿಜಯೇಂದ್ರ ; ಊಹಾಪೋಹಗಳಿಗೆ ತೆರೆ ಎಳೆದ ಯಡಿಯೂರಪ್ಪ

ಐಪಿಎಲ್ 2023: ವರ್ಣರಂಜಿತ ಚಾಲನೆ; ಟಾಸ್ ಗೆದ್ದ ಗುಜರಾತ್ ಟೈಟಾನ್ಸ್

ಎ. 2ರಂದು ಪುತ್ತೂರಿನ ಪ್ರಥಮ ಸುಸಜ್ಜಿತ ಶಾಪಿಂಗ್ ಮಾಲ್ ಜಿ.ಎಲ್.ಒನ್ ಲೋಕಾರ್ಪಣೆ