
ಲಾಂಗ್ ಬ್ರೇಕ್ ಬಳಿಕ 3 ಸ್ಕ್ರಿಪ್ಟ್ ಗಳನ್ನು ಫೈನಲ್ ಮಾಡಿದ ಕಿಚ್ಚ: ಅಭಿಮಾನಿಗಳು ಖುಷ್
Team Udayavani, Apr 2, 2023, 3:08 PM IST

ಬೆಂಗಳೂರು: ʼವಿಕ್ರಾಂತ್ ರೋಣʼ ಬಳಿಕ ಕಿಚ್ಚ ಸುದೀಪ್ ನಾಯಕ ನಟನಾಗಿ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದರ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಇದ್ದೇ ಇದೆ. ಈ ಬಗ್ಗೆ ಮೊದಲ ಬಾರಿ ಕಿಚ್ಚ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಕಿಚ್ಚ ಸುದೀಪ್ ʼಕಬ್ಜʼದಲ್ಲಿ ಭಾರ್ಗವ ಭಕ್ಷಿಯಾಗಿ ಕಾಣಿಸಿಕೊಂಡಿದ್ದರು. ಕಿಚ್ಚ ಅವರ 46ನೇ ಸಿನಿಮಾ ಯಾವುದು ಹಾಗೂ ನಿರ್ದೇಶಕರು ಯಾರು ಎನ್ನುವುದರ ಬಗ್ಗೆ ಅಭಿಮಾನಿಗಳು ಕೆಲ ಸಮಯದಿಂದ ಸೋಶಿಯಲ್ ಮೀಡಿಯಾ ಟ್ರೆಂಡ್ ಸೃಷ್ಟಿಸಿ ನಾನಾ ಬಗೆಯಲ್ಲಿ ಗಾಸಿಪ್ ಹಬ್ಬಿಸಿದ್ದಾರೆ. ಆದರೆ ಇದೇ ಮೊದಲ ಬಾರಿ ಕಿಚ್ಚ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕಿಚ್ಚ46 ಬಗ್ಗೆ ಕೆಲ ಸಮಯದಿಂದ ಟ್ವೀಟ್, ಮಿಮ್ಸ್ ಗಳು ಹರಿದಾಡುತ್ತಿದೆ.ಇದು ನನಗೆ ತುಂಬಾ ಸ್ಪೆಷೆಲ್. ಆದರೆ ಈ ಬಗ್ಗೆ ನಾನೊಂದು ಸ್ಪಷ್ಟನೆ ನೀಡಲು ಇಚ್ಚೀಸಿದ್ದೇನೆ. ನಾನು ಬ್ರೇಕ್ ಪಡೆದುಕೊಂಡಿದ್ದೇನೆ. ಇದು ವಿಕ್ರಾಂತ್ ರೋಣ ಹಾಗೂ ಬಿಗ್ ಬಾಸ್ ಕಾರ್ಯಕ್ರಮದ ದೊಡ್ಡ ಶೆಡ್ಯೂಲ್ ನಂತರ ಅಗತ್ಯವಾಗಿತ್ತು. ಈ ಸಮಯವನ್ನು ನಾನು ಸೂಕ್ತವಾಗಿ ಬಳಸಿಕೊಳ್ಳಬೇಕಿತ್ತು. ಕ್ರಿಕೆಟ್ ನನಗೆ ಹುಮ್ಮಸ್ಸನ್ನು ನೀಡುತ್ತದೆ. ನಾನು ಕರ್ನಾಟಕ ಬುಲ್ಡೋಜರ್ಸ್ ತಂಡದೊಂದಿಗೆ ಹಾಗೂ ಕೆಸಿಸಿಯಲ್ಲಿ ಭಾಗಿಯಾಗಿ ತುಂಬಾ ಚೆನ್ನಾಗಿ ನನ್ನ ಬ್ರೇಕ್ ಸಮಯವನ್ನು ಬಳಸಿಕೊಂಡೆ ಎಂದಿದ್ದಾರೆ.
ಸ್ಕ್ರಿಪ್ಟ್ ಬಗ್ಗೆ ಮಾತನಾಡುವುದು ಆ ಕುರಿತು ಚರ್ಚೆ ನಡೆಸುವುದು ನನ್ನ ಜೀವನದ ಒಂದು ಭಾಗ. ಸದ್ಯ ಮೂರು ಸ್ಕ್ರಿಪ್ಟ್ ಗಳನ್ನು ಅಂದರೆ ಮೂರು ಸಿನಿಮಾಗಳನ್ನು ಫೈನಲ್ ಮಾಡಿದ್ದೇನೆ. ಈ ಕುರಿತು ಸಿದ್ದತೆಗಳು ನಡೆಯುತ್ತಿದೆ. ಮೂರು ಸ್ಕ್ರಿಪ್ಟ್ ಗಳಿಗೆ ಸಾಕಷ್ಟು ಪರಿಶ್ರಮಬೇಕು. ಈ ಕುರಿತು ಆಯಾ ಸಿನಿಮಾ ತಂಡ ಸಿದ್ದತೆಗಳನ್ನು ನಡೆಸುತ್ತಿದೆ. ಶೀಘ್ರದಲ್ಲಿ ಹೊಸ ಪ್ರಾಜೆಕ್ಟ್ ಬಗ್ಗೆ ಘೋಷಣೆ ಮಾಡುತ್ತೇನೆ ಎಂದು ಕಿಚ್ಚ ಟ್ವೀಟ್ ನಲ್ಲಿ ಹೇಳಿದ್ದಾರೆ.
ಸುದೀಪ್ ಅನೂಪ್ ಭಂಡಾರಿ ಅವರ ʼ ಬಿಲ್ಲ ರಂಗ ಬಾಷಾʼ ಸಿನಿಮಾದಲ್ಲಿ ನಟಿಸಲಿದ್ದಾರೆ. ಇದರೊಂದಿಗೆ ಇನ್ನು ಟೈಟಲ್ ಅಂತಿಮವಾಗದ ವೆಂಕಟ್ ಪ್ರಭು ಅವರ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
About my Next
❤️🥂 pic.twitter.com/3vkCmS6FBF— Kichcha Sudeepa (@KicchaSudeep) April 2, 2023
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
