ಮುಂಬೈ ಪಬ್‌ನಲ್ಲಿ “ಕೋಟಿಗೊಬ್ಬ 3′ ಸಾಂಗ್
ಸುದೀಪ ಜೊತೆ ಕೃಷ್ಣ-ಪ್ರದೀಪ
Team Udayavani, Dec 15, 2019, 7:01 AM IST
ಸುದೀಪ್ ಅಭಿನಯದ “ಕೋಟಿಗೊಬ್ಬ 3′ ಚಿತ್ರ ಇನ್ನೇನು ಮುಗಿಯೋ ಹಂತ ತಲುಪಿದೆ. ಇತ್ತೀಚೆಗೆ ಮುಂಬೈನ ಪಬ್‌ವೊಂದರಲ್ಲಿ ಚಿತ್ರದ ಟೈಟಲ್ ಟ್ರಾಕ್ ಸಾಂಗ್‌ಗೆ ಚಿತ್ರೀಕರಣ ನಡೆದಿದೆ. ಹೌದು, ಕಳೆದ ನಾಲ್ಕು ದಿನಗಳಿಂದಲೂ ಅಲ್ಲಿನ ಪಬ್‌ವೊಂದರಲ್ಲಿ ಚಿತ್ರದ ಶೀರ್ಷಿಕೆ ಗೀತೆಗೆ ಚಿತ್ರೀಕರಣ ನಡೆದಿದ್ದು, “ದ ಲಯನ್ ಈಸ್ ಬ್ಯಾಕ್…’ ಎಂದು ಶುರುವಾಗುವ ಹಾಡಿಗೆ ಸುದೀಪ್ ಹೆಜ್ಜೆ ಹಾಕಿದ್ದಾರೆ.
ಅಷ್ಟೇ ಅಲ್ಲ, ಈ ಹಾಡಲ್ಲಿ ಕನ್ನಡದ ಯುವ ನಟರಾದ “ಮದರಂಗಿ’ ಕೃಷ್ಣ ಮತ್ತು ಪ್ರದೀಪ್ ಕೂಡ ಸ್ಟೆಪ್ ಹಾಕಿದ್ದಾರೆ. ಶಿವ ಕಾರ್ತಿಕ್ ನಿರ್ದೇಶನದ ಈ ಚಿತ್ರವನ್ನು ಸೂರಪ್ಪ ಬಾಬು ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ಮಾಸ್ ಪ್ರಿಯರಿಗೊಂದು ವಿಶೇಷ ಪ್ಯಾಕೇಜ್ ಇರುವ ಚಿತ್ರ ಎಂಬುದು ಚಿತ್ರತಂಡದ ಮಾತು.
ಈ ಚಿತ್ರದಲ್ಲಿ ಮಡೋನ ಸೆಬಾಸ್ಟಿನ್ ಮತ್ತು ಶ್ರದ್ಧಾ ದಾಸ್ ಅವರು ನಾಯಕಿಯಾಗಿದ್ದಾರೆ. ಬಾಲಿವುಡ್‌ನ ಅಫ್ತಾಬ್ ಶಿವದಾಸನಿ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.ಉಳಿದಂತೆ ರವಿಶಂಕರ್ ಇತರರು ನಟಿಸಿದ್ದಾರೆ. ಅರ್ಜುನ್ ಜನ್ಯಾ ಚಿತ್ರಕ್ಕೆ ಸಂಗೀತ ನೀಡಿದ್ದು, ಶೇಖರ್‌ಚಂದ್ರ ಛಾಯಾಗ್ರಹಣವಿದೆ. ಅಂದಹಾಗೆ, ಜಾನಿ ಮಾಸ್ಟರ್ ಚಿತ್ರದ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ.