ಮೇ 3 ರಿಂದ ಲೋಫ‌ರ್ಸ್ ಆಟ

ಅಲೆಮಾರಿ ಜೀವನದ ಸುತ್ತ ...

Team Udayavani, May 1, 2019, 3:00 AM IST

Loafers

ಸೆಟ್ಟೇರುತ್ತಿದ್ದಂತೆ ತನ್ನ ಟೈಟಲ್‌ ಮೂಲಕವೇ ಒಂದಷ್ಟು ಸುದ್ದಿಯಾಗಿದ್ದ, ನಟ ಕಂ ನಿರ್ದೇಶಕ ಮೋಹನ್‌ ನಿರ್ದೇಶನದ “ಲೋಫ‌ರ್ಸ್ ‘ಚಿತ್ರದ ಬಗ್ಗೆ ನಿಮಗೆ ಗೊತ್ತೇ ಇದೆ. ಆರಂಭದಲ್ಲಿ ಲೋಫ‌ರ್ಸ್ ಟೈಟಲ್‌ ಕೊಡಲು ಹಿಂದೇಟು ಹಾಕಿದ್ದ ವಾಣಿಜ್ಯ ಮಂಡಳಿ ಜೊತೆ ಗುದ್ದಾಡಿ, ನಂತರ ಅದೇ ಟೈಟಲ್‌ ಪಡೆದುಕೊಳ್ಳುವಲ್ಲಿ ಲೋಫ‌ರ್ಸ್ ಟೀಮ್‌ ಯಶಸ್ವಿಯಾಗಿತ್ತು.

ಈಗ ಈ ಲೋಫ‌ರ್ಸ್ ಸದ್ಯ ತನ್ನೆಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ ತೆರೆಗೆ ಬರೋದಕ್ಕೆ ರೆಡಿಯಾಗಿದೆ. ಅಂದಹಾಗೆ, ಲೋಫ‌ರ್ಸ್ ಇದೇ ಶುಕ್ರವಾರ (ಮಾ. 3) ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಇನ್ನು ಈ ಚಿತ್ರದ ಕಥೆ ಪ್ರಮುಖವಾಗಿ ಏಳು ಜನ ಅಲೆಮಾರಿಗಳ ಸುತ್ತ ನಡೆಯಲಿದೆಯಂತೆ.

ಚಿತ್ರದಲ್ಲಿ ಲೋಫ‌ರ್ಸ್ ಗಳಾಗಿ ಚೇತನ್‌, ಅರ್ಜುನ್‌ ಆರ್ಯ, ಮನು, ಕೆಂಪೇಗೌಡ, ಸುಷ್ಮಾ, ಸಾಕ್ಷಿ, ಶ್ರಾವ್ಯಾ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಟೆನ್ನಿಸ್‌ ಕೃಷ್ಣ, ಉಮೇಶ್‌ ಮೊದಲಾದವರು ಇತರೆ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಲೋಫ‌ರ್ಸ್ ‘ಚಿತ್ರದ ಟೈಟಲ್‌ ಮತ್ತು ಸಬ್ಜೆಕ್ಟ್ ಬಗ್ಗೆ ಮಾತನಾಡುವ ನಿರ್ದೇಶಕ ಮೋಹನ್‌, ಲೋಫ‌ರ್ಸ್ ಅಂದ ತಕ್ಷಣ ಅದೊಂದು ಕೆಟ್ಟ ಪದ ಅಥವಾ ಬೈಗುಳ ಎಂದು ಹಲವರು ಭಾವಿಸುವುದುಂಟು.

ಆದರೆ, ಲೋಫ‌ರ್ಸ್ ಎಂಬ ಪದಕ್ಕೆ ಅಲೆಮಾರಿ ಎನ್ನುವುದು ನಿಜವಾದ ಅರ್ಥ. ಅದನ್ನ ನಾವುಗಳು ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದೇವೆ ಅಷ್ಟೇ. ನಾಲ್ವರು ಹುಡುಗರು ಮತ್ತು ಮೂವರು ಹುಡುಗಿಯರ ಅಲೆಮಾರಿ ಜೀವನದ ಚಿತ್ರಣ ಈ ಚಿತ್ರದಲ್ಲಿದೆ. ಚಿತ್ರದ ಕಥೆ ಮತ್ತು ಪಾತ್ರಗಳಿಗೆ ಹೊಂದಾಣಿಕೆ ಆಗುತ್ತದೆ ಎನ್ನುವ ಕಾರಣಕ್ಕೆ ಚಿತ್ರಕ್ಕೆ ಲೋಫ‌ರ್ಸ್ ಎಂದು ಹೆಸರಿಟ್ಟಿದ್ದೇವೆ.

ಈಗಾಗಲೇ ಬೇರೆ ಬೇರೆ ಭಾಷೆಗಳಲ್ಲಿ ಲೋಫ‌ರ್ಸ್ ಎನ್ನುವ ಹೆಸರಿನಲ್ಲಿ ಹಲವು ಚಿತ್ರಗಳು ಬಂದು ಸೂಪರ್‌ ಹಿಟ್‌ ಆದ ಉದಾಹರಣೆ ಸಾಕಷ್ಟಿದೆ. ನಾವು ಕೂಡ ಅಂಥದ್ದೇ ಒಂದು ಒಳ್ಳೆಯ ಕಥೆ, ಸಂದೇಶವನ್ನು ಇಟ್ಟುಕೊಂಡು ಈ ಚಿತ್ರವನ್ನು ಮಾಡಿದ್ದೇವೆ ಎನ್ನುತ್ತಾರೆ.

ಇನ್ನು “ಲೋಫ‌ರ್ಸ್’ ಚಿತ್ರವನ್ನು ಹಿರಿಯ ನಿರ್ಮಾಪಕ ಬಿ.ಎನ್‌ ಗಂಗಾಧರ್‌ ತಮ್ಮ ಎಎನ್‌ಎಸ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ನಿರ್ಮಿಸುತ್ತಿದ್ದಾರೆ. ಲೋಫ‌ರ್ಸ್ ನಮ್ಮ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ 26ನೇ ಚಿತ್ರ ಎನ್ನುವ ಬಿ.ಎನ್‌ ಗಂಗಾಧರ್‌, ಇಂದಿನ ಯುವಜನತೆಗೆ ಮತ್ತು ಇಂದಿನ ಜನರೇಷನ್‌ಗೆ ಅತ್ಯಂತ ಹತ್ತಿರವಾದ ಕಥೆ ಈ ಚಿತ್ರದಲ್ಲಿದೆ.

ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ನೀಡುವ ಚಿತ್ರ ಇದು. ಬಹುತೇಕ ಹೊಸ ಪ್ರತಿಭೆಗಳು ಚಿತ್ರದಲ್ಲಿ ಚೆನ್ನಾಗಿ ಅಭಿನಯಿಸಿದ್ದಾರೆ. ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುವುದು ಎಂಬ ನಂಬಿಕೆಯಲ್ಲಿ ಲೋಫ‌ರ್ಸ್ ಚಿತ್ರವನ್ನು ಇದೇ ಶುಕ್ರವಾರ (ಮೇ. 3)ದಂದು ರಾಜ್ಯದ್ಯಾಂತ ಬಿಡುಗಡೆ ಮಾಡುತ್ತಿದ್ದೇವೆ ಎನ್ನುತ್ತಾರೆ.

“ಲೋಫ‌ರ್ಸ್ ‘ಚಿತ್ರಕ್ಕೆ ಡಿ. ಪ್ರಸಾದ್‌ ಬಾಬು ಛಾಯಾಗ್ರಹಣ, ಶಿವಪ್ರಸಾದ್‌ ಯಾದವ್‌ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಒಟ್ಟು ಎರಡು ಹಾಡುಗಳಿದ್ದು, ದಿನೇಶ್‌ ಕುಮಾರ್‌ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಹಾಡುಗಳಿಗೆ ಮೋಹನ್‌, ಹರ್ಷ ಸಾಹಿತ್ಯ ರಚಿಸಿದ್ದಾರೆ. ತ್ರಿಭುವನ್‌ ನೃತ್ಯ ಮತ್ತು ಕೌರವ ವೆಂಕಟೇಶ್‌ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ನಿರ್ದೇಶಕ ಮೋಹನ್‌ ಲೋಫ‌ರ್ಸ್ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಪ್ರಗತಿ ತೃಪ್ತಿಕರ

32

Actor Darshan: ರೇಣುಕಾಸ್ವಾಮಿ ಹತ್ಯೆ ಕೇಸ್‌; ದರ್ಶನ್‌ ರಕ್ಷಣೆಗೆ ಸದ್ದಿಲ್ಲದೇ ಕಸರತ್ತು?

36

ಫೇಸ್‌ಬುಕ್‌ನಲ್ಲಿ ಕೊರಗಜ್ಜ ಭಕ್ತರಿಂದ ದೇಣಿಗೆ ಸಂಗ್ರಹ: ಆಡಳಿತ ಮಂಡಳಿಯಿಂದ ದೂರು ದಾಖಲು

31

ರೇಣುಕಾಸ್ವಾಮಿ ದೇಹದ 15 ಕಡೆ ಗಂಭೀರ ಗಾಯ ಪೊಲೀಸರ ಕೈ ಸೇರಿದ ಮರಣೋತ್ತರ ವರದಿ

1-asdsads

T20 World Cup; ಸೂಪರ್‌-8 ಕನಸಿನಲ್ಲಿರುವ ಅಮೆರಿಕಕ್ಕೆ ಐರ್ಲೆಂಡ್‌ ಸವಾಲು

27

Renukaswamy Case Follwup: ರೇಣುಕಾಸ್ವಾಮಿ ಮರ್ಮಾಂಗಕ್ಕೆ ತೀವ್ರ ಹಲ್ಲೆ?

1-wqewewq

Kerala ಕಾಲೇಜಿನಲ್ಲಿ ನಟಿ ಸನ್ನಿ ಲಿಯೋನ್‌ ನೃತ್ಯ ಪ್ರದರ್ಶನ ರದ್ದು: ಕಾರಣ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

32

Actor Darshan: ರೇಣುಕಾಸ್ವಾಮಿ ಹತ್ಯೆ ಕೇಸ್‌; ದರ್ಶನ್‌ ರಕ್ಷಣೆಗೆ ಸದ್ದಿಲ್ಲದೇ ಕಸರತ್ತು?

31

ರೇಣುಕಾಸ್ವಾಮಿ ದೇಹದ 15 ಕಡೆ ಗಂಭೀರ ಗಾಯ ಪೊಲೀಸರ ಕೈ ಸೇರಿದ ಮರಣೋತ್ತರ ವರದಿ

27

Renukaswamy Case Follwup: ರೇಣುಕಾಸ್ವಾಮಿ ಮರ್ಮಾಂಗಕ್ಕೆ ತೀವ್ರ ಹಲ್ಲೆ?

20

ಮೈಸೂರಿನಲ್ಲಿ “ಡೆವಿಲ್‌’ʼ ಚಿತ್ರದ ಶೂಟಿಂಗ್‌ ಪ್ಯಾಕಪ್‌

Police station: ನಟ ದರ್ಶನ್‌ ಇರುವ ಠಾಣೆಗೆ ಶಾಮಿಯಾನ ಹಾಕಿಸಿದ ಪೊಲೀಸರು

Police station: ನಟ ದರ್ಶನ್‌ ಇರುವ ಠಾಣೆಗೆ ಶಾಮಿಯಾನ ಹಾಕಿಸಿದ ಪೊಲೀಸರು

MUST WATCH

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

udayavani youtube

ಲಾಭದಾಯಕ ಮಲ್ಲಿಗೆ ಕೃಷಿ ಮಾಡುವುದು ಹೇಗೆ? | ಶಂಕರಪುರ ಮಲ್ಲಿಗೆ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಪ್ರಗತಿ ತೃಪ್ತಿಕರ

32

Actor Darshan: ರೇಣುಕಾಸ್ವಾಮಿ ಹತ್ಯೆ ಕೇಸ್‌; ದರ್ಶನ್‌ ರಕ್ಷಣೆಗೆ ಸದ್ದಿಲ್ಲದೇ ಕಸರತ್ತು?

36

ಫೇಸ್‌ಬುಕ್‌ನಲ್ಲಿ ಕೊರಗಜ್ಜ ಭಕ್ತರಿಂದ ದೇಣಿಗೆ ಸಂಗ್ರಹ: ಆಡಳಿತ ಮಂಡಳಿಯಿಂದ ದೂರು ದಾಖಲು

31

ರೇಣುಕಾಸ್ವಾಮಿ ದೇಹದ 15 ಕಡೆ ಗಂಭೀರ ಗಾಯ ಪೊಲೀಸರ ಕೈ ಸೇರಿದ ಮರಣೋತ್ತರ ವರದಿ

Uppinangady: “ಮೀಶೋ’ ಹಸರಲ್ಲಿ ವಂಚನಾ ಜಾಲ: ಎಚ್ಚರಿಕೆ

Uppinangady: “ಮೀಶೋ’ ಹಸರಲ್ಲಿ ವಂಚನಾ ಜಾಲ: ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.