ಪಿಸುಮಾತಿನಲ್ಲಿ ʼಲವ್‌ ಬರ್ಡ್ಸ್‌ʼ

Team Udayavani, Jan 18, 2023, 1:36 PM IST

tdy-12

“ಲವ್‌ ಮಾಕ್ಟೇಲ್‌’ ಸಿನಿಮಾದ ಸಕ್ಸಸ್‌ ಬಳಿಕ ನಟ ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ನಾಗರಾಜ್‌ ಜೋಡಿಯ ಸಿನಿಮಾಗಳು ಬ್ಯಾಕ್‌ ಟು ಬ್ಯಾಕ್‌ ತೆರೆಗೆ ಬರುತ್ತಿದೆ. ಈ ವರ್ಷದ ಆರಂಭದಲ್ಲಿಯೇ “ಮಿ. ಬ್ಯಾಚುಲರ್‌’ ಸಿನಿಮಾದ ಮೂಲಕ ಒಟ್ಟಾಗಿ ಪ್ರೇಕ್ಷಕರ ಮುಂದೆ ಬಂದಿದ್ದ ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ನಾಗರಾಜ್‌ ದಂಪತಿ, ಶೀಘ್ರದಲ್ಲಿಯೇ “ಲವ್‌ ಬರ್ಡ್ಸ್‌’ ಮೂಲಕ ಮತ್ತೂಮ್ಮೆ ಬಿಗ್‌ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳಲು ತಯಾರಾಗುತ್ತಿದ್ದಾರೆ.

ಹೌದು, ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ನಾಗರಾಜ್‌ ಜೋಡಿಯಾಗಿ ಅಭಿನಯಿಸಿರುವ ಮತ್ತೂಂದು ಚಿತ್ರ “ಲವ್‌ ಬರ್ಡ್ಸ್‌’ ತೆರೆಗೆ ಬರಲು ಸಿದ್ಧವಾಗುತ್ತಿದೆ. ಪಿ. ಸಿ ಶೇಖರ್‌ ನಿರ್ದೇಶನದಲ್ಲಿ ಮತ್ತು ಕಡ್ಡಿಪುಡಿ ಚಂದ್ರು ನಿರ್ಮಾಣದಲ್ಲಿ ಮೂಡಿಬರುತ್ತಿರುವ “ಲವ್‌ ಬರ್ಡ್ಸ್‌’ ಸಿನಿಮಾ ಸದ್ಯ ಚಿತ್ರೀಕರಣ ಮುಗಿಸಿ, ಪೋಸ್ಟ್‌ ಪ್ರೊಡಕ್ಷನ್‌ ಅಂತಿಮ ಹಂತದಲ್ಲಿದ್ದು, ಇತ್ತೀಚೆಗೆ “ಲವ್‌ ಬರ್ಡ್ಸ್‌’ ಸಿನಿಮಾದ ಮೊದಲ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿದೆ.

ಇನ್ನು “ಲವ್‌ ಬರ್ಡ್ಸ್‌’ ಸಿನಿಮಾದ ಬಗ್ಗೆ ಕೃಷ್ಣ ಮತ್ತು ಮಿಲನಾ ಇಬ್ಬರೂ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ತಮ್ಮ ಹೊಸ ಸಿನಿಮಾದ ಬಗ್ಗೆ ಮಾತನಾಡುವ ಕೃಷ್ಣ ಮತ್ತು ಮಿಲನಾ ಜೋಡಿ, “ನಾವಿಬ್ಬರೂ ತೆರೆಯ ಮೇಲೆ ಮತ್ತೆ ಜತೆಯಾಗಿ ಕಾಣಿಸಿಕೊಳ್ಳಬೇಕು, ಅದಕ್ಕೆ ಸ್ಕ್ರಿಪ್ಟ್ ಬರೆಯಬೇಕು ಎಂದು ಯೋಚಿಸಿದ್ದೆವು. ಆಗ ಈ ಸಿನಿಮಾದ ಆಫ‌ರ್‌ ಬಂದಿತು. ಸಿನಿಮಾದ ಸ್ಕ್ರಿಪ್ಟ್ ಕೇಳಿದಾಗ ನಮ್ಮಿಬ್ಬರಿಗೂ ಕನೆಕ್ಟ್ ಆಯಿತು. “ಲವ್‌ ಮಾಕ್ಟೇಲ್‌’ಗಿಂತ ವಿಭಿನ್ನವಾಗಿರುವ ಈ ಸಿನಿಮಾ ಆಡಿಯನ್ಸ್‌ಗೆ ಹೊಸ ಅನುಭವ ತರಲಿದೆ’ ಎನ್ನುತ್ತದೆ.

“ಹೊಸದಾಗಿ ಮದುವೆಯಾದ ಆಧುನಿಕ ಕಾಲಘಟ್ಟದ ದಂಪತಿಯ ಕತೆಯನ್ನು ಚಿತ್ರ ಒಳಗೊಂಡಿದೆ. ಕಳೆದ ಒಂದೆರಡು ದಶಕಗಳಲ್ಲಿ ಮದುವೆಯ ಬಗೆಗಿನ ದೃಷ್ಟಿಕೋನಗಳು ಬದಲಾಗಿವೆ. ಈಗ ಮಹಿಳೆ ಪುರುಷನ ಮೇಲೆ ಅವಲಂಬಿತವಾಗಿಲ್ಲ. ಆರ್ಥಿಕವಾಗಿ ಸ್ವತಂತ್ರವಾಗಿರುವುದು ಮನೆಯಲ್ಲಿನ ಅಧಿಕಾರದ ದೃಷ್ಟಿಕೋನವನ್ನು ಬದಲಾಯಿಸಿದೆ. ಇದೆಲ್ಲವನ್ನು ಚಿತ್ರ ಒಳಗೊಂಡಿರಲಿದೆ’ ಎನ್ನುವುದು ಚಿತ್ರದ ಬಗ್ಗೆ ನಿರ್ದೇಶಕ ಪಿ. ಸಿ ಶೇಖರ್‌ ಮಾತು.

ಮ್ಯೂಸಿಕಲ್‌ ಲವ್‌ ಸ್ಟೋ ರಿಯಾಗಿರುವ “ಲವ್‌ ಬರ್ಡ್ಸ್‌’ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡುತ್ತಿದ್ದಾರೆ. ಕೃಷ್ಣ, ಮಿಲನಾ ಅವರೊಂದಿಗೆ ಚಿತ್ರದಲ್ಲಿ ರಂಗಾಯಣ ರಘು, ಸಾಧು ಕೋಕಿಲ, ವೀಣಾ ಸುಂದರ್‌, ಅವಿನಾಶ್‌ ಮತ್ತಿತರರು ಇತರ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ “ಲವ್‌ ಬರ್ಡ್ಸ್‌’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೇ ಫೆಬ್ರವರಿ ವೇಳೆಗೆ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.

ಟಾಪ್ ನ್ಯೂಸ್

ಬಸ್‌ಗಳ ಮೇಲಾಟ: ವಿದ್ಯಾರ್ಥಿ ಸಾವು; ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಬಸ್‌ಗಳ ಮೇಲಾಟ: ವಿದ್ಯಾರ್ಥಿ ಸಾವು; ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಹನಗೋಡಿನಲ್ಲಿ ಮತ್ತೆ ಕಾಣಿಸಿಕೊಂಡ ಹುಲಿ ಹೆಜ್ಜೆ; ಗ್ರಾಮಸ್ಥರಲ್ಲಿ ಆತಂಕ

ಹನಗೋಡಿನಲ್ಲಿ ಮತ್ತೆ ಕಾಣಿಸಿಕೊಂಡ ಹುಲಿ ಹೆಜ್ಜೆ; ಗ್ರಾಮಸ್ಥರಲ್ಲಿ ಆತಂಕ

Basangouda Patil Yatnal ಟ್ವೀಟ್ ಗೆ ಸಚಿವ ಎಂ.ಬಿ.ಪಾಟೀಲ ತಿರುಗೇಟು

Basangouda Patil Yatnal ಟ್ವೀಟ್ ಗೆ ಸಚಿವ ಎಂ.ಬಿ.ಪಾಟೀಲ ತಿರುಗೇಟು

Amarnath Yatra ವೇಳೆ ದಾಳಿ ನಡೆಸಲು ಉಗ್ರರ ಸಂಚು

Amarnath Yatra ವೇಳೆ ದಾಳಿ ನಡೆಸಲು ಉಗ್ರರ ಸಂಚು

beer lorry over turn

Viral Video: ಪಲ್ಟಿಯಾದ ಮದ್ಯ ತುಂಬಿದ ಲಾರಿ- ಬಾಟ್ಲಿಗಾಗಿ ಮುಗಿಬಿದ್ದ ಜನ!

sharan pumpwell

ಆ್ಯಂಟಿ ಕಮ್ಯುನಲ್ ವಿಂಗ್ ರಚನೆ: ವಿಎಚ್‌ಪಿ ಸ್ವಾಗತ

Rohit Sharma has got stuck in his left thumb while practice

WTC Final: ಅಭ್ಯಾಸದ ವೇಳೆ ಬೆರಳಿಗೆ ಗಾಯ ಮಾಡಿಕೊಂಡ ನಾಯಕ ರೋಹಿತ್ ಶರ್ಮಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rayaru bandaru mavana manege

‘ರಾಯರು ಬಂದರು ಮಾವನ ಮನೆಗೆ…’: ಕನ್ನಡಕ್ಕೆ ಬಂತು ಗುಜರಾತಿ ಸಿನಿಮಾ

Rakshit Shetty: “ಸಪ್ತ ಸಾಗರದಾಚೆ ಎಲ್ಲೋ”; ಎರಡು ಭಾಗವಾಗಿ ಬರಲಿದೆ ʼಮನು-ಸುರಭಿʼ ಪ್ರೇಮಯಾನ

Rakshit Shetty: “ಸಪ್ತ ಸಾಗರದಾಚೆ ಎಲ್ಲೋ”; ಎರಡು ಭಾಗವಾಗಿ ಬರಲಿದೆ ʼಮನು-ಸುರಭಿʼ ಪ್ರೇಮಯಾನ

‘ಹಿರಣ್ಯ’ ನಾಯಕಿಗೆ ಪೋಸ್ಟರ್ ಗಿಫ್ಟ್

‘ಹಿರಣ್ಯ’ ನಾಯಕಿಗೆ ಪೋಸ್ಟರ್ ಗಿಫ್ಟ್

pavitra lokesh and naresh starer matte maduve releasing on June 9

ಮದುವೆ ಓಡಾಟದಲ್ಲಿ ಪವಿತ್ರ-ನರೇಶ್‌

bera kannada movie

ಧರ್ಮ ಸಂಘರ್ಷದ ಸುತ್ತ ‘ಬೇರ’

MUST WATCH

udayavani youtube

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಹೊಸ ಸೇರ್ಪಡೆ