ಪ್ರೇಕ್ಷಕರಿಗೆ ಆಪ್ತವಾಗುವ ಸಿನಿಮಾವಿದು… ರಚ್ಚು ಮೇಲೆ ಹೆಚ್ಚು ವಿಶ್ವಾಸ
Team Udayavani, Dec 31, 2021, 12:19 PM IST
ಈಗಾಗಲೇ ಫಸ್ಟ್‌ಲುಕ್ ಪೋಸ್ಟರ್, ಟ್ರೇಲರ್ ಮತ್ತು ಸಾಂಗ್ಸ್ ಮೂಲಕ ಸೌಂಡ್ ಮಾಡುತ್ತಿರುವ “ಲವ್ ಯು ರಚ್ಚು’ ಚಿತ್ರ ಇಂದು ತೆರೆಗೆ ಬರುತ್ತಿದೆ. ಮೊದಲ ಬಾರಿಗೆ ನಟ ಅಜೇಯ್ ರಾವ್ ಮತ್ತು ರಚಿತಾ ರಾಮ್ ಚಿತ್ರದಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದು, “ಜಿ ಸಿನಿಮಾಸ್’ ಬ್ಯಾನರ್‌ನಲ್ಲಿ ಗುರುದೇಶಪಾಂಡೆ ನಿರ್ಮಾಣದ ಈ ಚಿತ್ರಕ್ಕೆ ಶಂಕರ್ ಎಸ್. ರಾಜ್ ನಿರ್ದೇಶನವಿದೆ.
“ಲವ್ ಯು ರಚ್ಚು’ ಚಿತ್ರದ ಬಗ್ಗೆ ನಿರ್ಮಾಪಕ ಗುರು ದೇಶಪಾಂಡೆ, “ಮೇಲ್ನೋಟಕ್ಕೆ ಇದೊಂದು ಲವ್, ರೊಮ್ಯಾಂಟಿಕ್ ಸಿನಿಮಾ ಅನಿಸಿದರೂ, ಸಿನಿಮಾದಲ್ಲಿ ಬೇರೆಯದೇ ವಿಷಯವನ್ನು ಹೇಳಿದ್ದೇವೆ. ಇಲ್ಲಿ ಲವ್, ರೊಮ್ಯಾನ್ಸ್ ಜೊತೆಗೆ ಆ್ಯಕ್ಷನ್, ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಹೀಗೆ ಎಲ್ಲಾ ಥರದ ಎಲಿಮೆಂಟ್ಸ್ ಇದೆ. ನಮ್ಮ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್ “ಲವ್ ಯು ರಚ್ಚು’ ಸಿನಿಮಾಕ್ಕೆ ಸಿಗುತ್ತಿದೆ. ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವಂತ ಕಥೆ ಇದರಲ್ಲಿದೆ. ಅದರಲ್ಲೂ ಮದುವೆಯಾದವರು, ಮದುವೆಯಾಗುವವರು ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ. ಈಗಾಗಲೇ ಟ್ರೇಲರ್, ಸಾಂಗ್ಸ್ ಇಷ್ಟವಾದಂತೆ, ಥಿಯೇಟರ್‌ನಲ್ಲೂ ಆಡಿಯನ್ಸ್‌ಗೆ ಸಿನಿಮಾ ಇಷ್ಟವಾಗಲಿದೆ’ ಎಂಬ ಭರವಸೆಯ ಮಾತುಗಳನ್ನಾಡುತ್ತಾರೆ.
ಇದನ್ನೂ ಓದಿ:ರಾಮು ಕನಸಿಗೆ ಜೀವ ತುಂಬಿದ್ದೇನೆ…: ಅರ್ಜುನ್ ಗೌಡ ಬಗ್ಗೆ ಪ್ರಜ್ವಲ್ ಮಾತು
ಇನ್ನು “ಲವ್ ಯು ರಚ್ಚು’ ನಾಯಕಿ ರಚಿತಾ ರಾಮ್ ಕೂಡ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. “ಇಲ್ಲಿಯವರೆಗಿನ ಸಿನಿಮಾಗಳಲ್ಲಿ ನೋಡಿದ ರಚಿತಾನೇ ಬೇರೆ, “ಲವ್ ಯು ರಚ್ಚು’ ಸಿನಿಮಾದಲ್ಲಿ ನೋಡುವ ರಚಿತಾನೇ ಬೇರೆ. ತುಂಬ ಡಿಫರೆಂಟ್ ಆಗಿರುವಂಥ, ಕೊನೆಯವರೆಗೂ ಕ್ಯೂರಿಯಾಸಿಟಿ ಉಳಿಸಿಕೊಂಡು ಹೋಗುವಂಥ ಕ್ಯಾರೆಕ್ಟರ್ ಇದರಲ್ಲಿದೆ. ಈಗಾಗಲೇ ಟ್ರೇಲರ್, ಸಾಂಗ್ಸ್‌ನಲ್ಲಿ ನೋಡಿರುವುದಕ್ಕಿಂತ ಬೇರೆ ಥರಲ್ಲಿಯೇ ಸಿನಿಮಾ ಇದೆ. ಇಯರ್ ಎಂಡ್‌ಗೆ ಆಡಿಯನ್ಸ್‌ಗೆ ಇಷ್ಟವಾಗುವಂಥ ಒಂದೊಳ್ಳೆ ಸಿನಿಮಾ ಕೊಡುತ್ತಿದ್ದೇವೆ ಅನ್ನೋ ಕಾನ್ಫಿಡೆನ್ಸ್ ಇದೆ. ನನಗೂ ಕೂಡ “ಲವ್ ಯು ರಚ್ಚು’ ಮೇಲೆ ಅದರ ಪಾತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ’ ಎನ್ನುವುದು ರಚಿತಾ ರಾಮ್ ಮಾತು.
ಒಟ್ಟಾರೆ ವರ್ಷಾಂತ್ಯದಲ್ಲಿ ತೆರೆಗೆ ಬರುತ್ತಿರುವ “ಲವ್ ಯು ರಚ್ಚು’ವನ್ನು ಪ್ರೇಕ್ಷಕರು ಎಷ್ಟರ ಮಟ್ಟಿಗೆ ಮೆಚ್ಚಿಕೊಳ್ಳುತ್ತಾರೆ ಅನ್ನೋದು ಈ ವಾರಾಂತ್ಯದಲ್ಲಿ ಗೊತ್ತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸುಳ್ಯ : ವ್ಯಾಪಾರಕ್ಕೆ ತೆರಳಿದ್ದ ಯುವಕನ ದರೋಡೆ!
ವೈಟ್ ಬಾಲ್ ಸರಣಿ: ನವೆಂಬರ್ನಲ್ಲಿ ಟೀಂ ಇಂಡಿಯಾ ನ್ಯೂಜಿಲ್ಯಾಂಡ್ ಪ್ರವಾಸ
ವೇಗದ ಚಾಲನೆ; ಪಾಕಿಸ್ಥಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಗೆ ದಂಡ
ಉದ್ಧವ್ ಠಾಕ್ರೆಗೆ ಅಗ್ನಿಪರೀಕ್ಷೆ: ಜೂ. 30ರಂದು ವಿಶ್ವಾಸಮತ ಸಾಬೀತುಪಡಿಸಲು ಸೂಚನೆ
ಮುಂದಿನ ವಿಧಾನಸಭೆ ಚುನಾವಣೆ: ಸಿದ್ದು-ಡಿಕೆ ಜತೆ ರಾಹುಲ್ ಮಹತ್ವದ ಮಾತುಕತೆ