ಮಾಮ ತಂದ ಖುಷಿ: ಸೇಫ್ ಆದ್ರಂತೆ ಮೋಹನ್‌


Team Udayavani, Apr 21, 2018, 11:29 AM IST

hello-mama.jpg

ನಿರ್ದೇಶಕ, ನಟ ಮೋಹನ್‌ ಖುಷಿಯಾಗಿದ್ದಾರೆ. ಅವರ ಖುಷಿಗೆ ಕಾರಣ ಮಾಮ ಎಂದರೆ ನೀವು ನಂಬಲೇಬೇಕು. ಯಾವ ಮಾಮ ಎಂದರೆ “ಹಲೋ ಮಾಮ’ ಎನ್ನಬೇಕು. “ಬಿಗ್‌ಬಾಸ್‌’ಗೆ  ಹೋಗಿ ಬಂದ ನಂತರ ಮೋಹನ್‌ “ಹಲೋ ಮಾಮ’ ಎಂಬ ಸಿನಿಮಾ ಆರಂಭಿಸಿದ್ದರು. ಈಗ ಆ ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಬಾರಿ ಚಿತ್ರ ಮೋಹನ್‌ ಮುಖದಲ್ಲಿ ನಗುಮೂಡಿಸಿದೆ.

ಚಿತ್ರ ಬಿಡುಗಡೆಗೆ ಮುನ್ನವೇ ಬಳ್ಳಾರಿ ಹಾಗೂ ಚಿತ್ರದುರ್ಗದ ವಿತರಣೆ ಮಾಡಲು ವಿತರಕರೊಬ್ಬರು ಮುಂದೆ ಬಂದರೆ, ಇತ್ತೀಚೆಗೆ ಸಿನಿಮಾದ ನೋಡಿದ ಭೋಗೇಂದ್ರ ಅವರು ಕೂಡಾ ಸಿನಿಮಾ ವಿತರಣೆ ಮಾಡಲು ಮುಂದಾಗಿದ್ದಾರೆ. “ನಾನು ಈ ಹಿಂದೆ “ಮಳೆ ನಿಲ್ಲುವವರೆಗೆ’ ಎಂಬ ಸಿನಿಮಾ ಮಾಡಿದ್ದೆ. ಆ ಸಿನಿಮಾದ ಬಗ್ಗೆ ಒಳ್ಳೆಯ ವಿಮರ್ಶೆ ಬಂದರೂ ಚಿತ್ರ ಜನರಿಗೆ ತಲುಪದೇ ಸೋತು ಹೋಯಿತು.

ಸಿನಿಮಾ ಯಾಕ್‌ ಸೋತಿತು ಎಂದು ಅನೇಕರು ಕೇಳಿದಾಗ, ಆ ಸಿನಿಮಾದ ಹಿಂದೆ ಒಬ್ಬ ಕೆಟ್ಟ ನಿರ್ಮಾಪಕನಿದ್ದ ಎಂದಿದ್ದೆ. ಏಕೆಂದರೆ ಆ ಕೆಟ್ಟ ನಿರ್ಮಾಪಕನೇ ನಾನು. ಆದರೆ ಈ ಬಾರಿ “ಹಲೋ ಮಾಮ’ ವಿಷಯದಲ್ಲಿ ಖುಷಿಯಾಗಿದ್ದೇನೆ. ಭೋಗೇಂದ್ರ ಅವರು ಸಿನಿಮಾ ನೋಡಿ ವಿತರಣೆ ಮಾಡಲು ಮುಂದೆ ಬಂದಿದ್ದಾರೆ. ನನ್ನ ಗಾಡ್‌ಫಾದರ್‌ ಬಿ.ಎನ್‌.ಗಂಗಾಧರ್‌ ಅವರಿಗೆ ಸಿನಿಮಾ ತೋರಿಸಿದ್ದಾರೆ.

ಈ ಸಿನಿಮಾದಿಂದ ಕಳೆದುಕೊಳ್ಳುವುದಿಲ್ಲ ಎಂಬ ನಂಬಿಕೆ ಇದೆ’ ಎಂದು ಖುಷಿಯಿಂದ ಹೇಳುತ್ತಾರೆ ಮೋಹನ್‌. ಮೋಹನ್‌ “ಬಿಗ್‌ ಬಾಸ್‌’ಗೆ ಹೋಗಿ ಬಂದ ನಂತರ ಅನೇಕರು, “ನಿಮ್ಮನ್ನು ಸೀರಿಯಸ್‌ ಪಾತ್ರಗಳಲ್ಲಿ ನೋಡೋಕೆ ನಮಗೆ ಇಷ್ಟವಿಲ್ಲ, ಏನಾದರೂ ಕಾಮಿಡಿ ಪ್ರಯತ್ನಿಸಿ ಎಂದರಂತೆ. ಅದರ ಪರಿಣಾಮವಾಗಿಯೇ ಅವರು ಮಾಡಿದ್ದು “ಹಲೋ ಮಾಮ’.

“ಇಲ್ಲಿ ನವಿರಾದ ಹಾಸ್ಯ, ತುಂಟತನ ಹಾಗೂ ಸ್ವಲ್ಪ ಮಟ್ಟಿನ ಡಬಲ್‌ ಮೀನಿಂಗ್‌ ಕೂಡಾ ಇದೆ. ಇಂದಿನ ಯೂತ್ಸ್ಗೆ ಇಷ್ಟವಾಗುವಂತಹ ಸಿನಿಮಾ ಮಾಡಿದ್ದೇನೆ’ ಎಂಬುದು ಮೋಹನ್‌ ಮಾತು. ಚಿತ್ರದಲ್ಲಿ ಅರವಿಂದ್‌ ಕೂಡಾ ನಟಿಸಿದ್ದು, ಸೀರಿಯಸ್‌ ಪಾತ್ರಗಳನ್ನು ಮಾಡುತ್ತಿದ್ದ ಅರವಿಂದ್‌, ಮೊದಲ ಬಾರಿಗೆ ಈ ಸಿನಿಮಾದಲ್ಲಿ ಕಾಮಿಡಿ ಮಾಡಿದ್ದಾರಂತೆ.

ಚಿತ್ರದಲ್ಲಿ ನಟಿಸಿರುವ ಸಾಂಪ್ರತ ಕೂಡಾ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಚಿತ್ರವನ್ನು ಚಂದ್ರಶೇಖರ್‌ ನಿರ್ಮಿಸಿದ್ದಾರೆ. ಸಿನಿಮಾ ನಿರ್ಮಾಣ ಮಾಡಬೇಕೆಂದು ಬ್ಯಾನರ್‌ ಹುಟ್ಟುಹಾಕಿ ಕಾಯುತ್ತಿದ್ದ ಅವರ ಆಸೆ “ಹಲೋ ಮಾಮ’ ಮೂಲಕ ಈಡೇರಿದೆ. ಚಿತ್ರ ಮೇ 11 ರಂದು ತೆರೆಕಾಣುವ ಸಾಧ್ಯತೆ ಇದೆ. 

ಟಾಪ್ ನ್ಯೂಸ್

2-udupi

Udupi: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು

State Govt ಎಂಜಿನಿಯರಿಂಗ್‌ ಕೋರ್ಸ್‌ ಶುಲ್ಕ ಶೇ. 10 ಹೆಚ್ಚಳ

State Govt ಎಂಜಿನಿಯರಿಂಗ್‌ ಕೋರ್ಸ್‌ ಶುಲ್ಕ ಶೇ. 10 ಹೆಚ್ಚಳ

Mangaluru ಹಲವು ರೈಲುಗಳ ಸೇವೆಯಲ್ಲಿ ಕೆಲ ತಾಸು ವ್ಯತ್ಯಯ

Mangaluru ಹಲವು ರೈಲುಗಳ ಸೇವೆಯಲ್ಲಿ ಕೆಲ ತಾಸು ವ್ಯತ್ಯಯ

1-24-saturday

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ, ಅಧ್ಯಯನಾಸಕ್ತಿ ವೃದ್ಧಿ

ದೇವೇಗೌಡರ ಬಳಿಕ, ಈಗ ಬಿಎಸ್‌ವೈ ಕುಟುಂಬ ನಾಶಕ್ಕೆ ಕೈ ಯತ್ನ: ಎಚ್‌ಡಿಕೆ

ದೇವೇಗೌಡರ ಬಳಿಕ, ಈಗ ಬಿಎಸ್‌ವೈ ಕುಟುಂಬ ನಾಶಕ್ಕೆ ಕೈ ಯತ್ನ: ಎಚ್‌ಡಿಕೆ

ಎಚ್ಚರಿಕೆ ಕೊಟ್ಟಿದ್ದೆ ಅಷ್ಟೇ, ಕೊಲೆ ಮಾಡಿಲ್ಲ: ದರ್ಶನ್‌

ಎಚ್ಚರಿಕೆ ಕೊಟ್ಟಿದ್ದೆ ಅಷ್ಟೇ, ಕೊಲೆ ಮಾಡಿಲ್ಲ: ದರ್ಶನ್‌

ಖಾಸಗಿಯಲ್ಲಿ ಕನ್ನಡಿಗರಿಗೆ ನೂರಕ್ಕೆ ನೂರು ಮೀಸಲು?

ಖಾಸಗಿಯಲ್ಲಿ ಕನ್ನಡಿಗರಿಗೆ ನೂರಕ್ಕೆ ನೂರು ಮೀಸಲು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Renuka Swamy case: ಕನ್ನಡ ಚಿತ್ರರಂಗಕ್ಕೆ ದರ್ಶನ್‌ ದೇವಮಾನವ ಇದ್ದಂತೆ: ನಟಿ ಸಂಜನಾ

Renuka Swamy case: ಕನ್ನಡ ಚಿತ್ರರಂಗಕ್ಕೆ ದರ್ಶನ್‌ ದೇವಮಾನವ ಇದ್ದಂತೆ: ನಟಿ ಸಂಜನಾ

Kannada Cinema; ಭ್ರಮೆ ಬಿಟ್ಟು ಬದುಕಿದರು.. ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ ಡಾ.ರಾಜ್‌

Sandalwood: ಭ್ರಮೆ ಬಿಟ್ಟು ಬದುಕಿದರು.. ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ ಡಾ.ರಾಜ್‌

love li kannada movie

Love Li; ತೆರೆಗೆ ಬಂತು ವಸಿಷ್ಠ ನಟನೆಯ ‘ಲವ್ ಲೀ’

kotee movie

Kotee movie: ನೈಜತೆಯೇ ಕೋಟಿಯ ಜೀವಾಳ

32

Actor Darshan: ರೇಣುಕಾಸ್ವಾಮಿ ಹತ್ಯೆ ಕೇಸ್‌; ದರ್ಶನ್‌ ರಕ್ಷಣೆಗೆ ಸದ್ದಿಲ್ಲದೇ ಕಸರತ್ತು?

MUST WATCH

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

ಹೊಸ ಸೇರ್ಪಡೆ

2-udupi

Udupi: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು

State Govt ಎಂಜಿನಿಯರಿಂಗ್‌ ಕೋರ್ಸ್‌ ಶುಲ್ಕ ಶೇ. 10 ಹೆಚ್ಚಳ

State Govt ಎಂಜಿನಿಯರಿಂಗ್‌ ಕೋರ್ಸ್‌ ಶುಲ್ಕ ಶೇ. 10 ಹೆಚ್ಚಳ

Mangaluru ಹಲವು ರೈಲುಗಳ ಸೇವೆಯಲ್ಲಿ ಕೆಲ ತಾಸು ವ್ಯತ್ಯಯ

Mangaluru ಹಲವು ರೈಲುಗಳ ಸೇವೆಯಲ್ಲಿ ಕೆಲ ತಾಸು ವ್ಯತ್ಯಯ

1-24-saturday

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ, ಅಧ್ಯಯನಾಸಕ್ತಿ ವೃದ್ಧಿ

ದೇವೇಗೌಡರ ಬಳಿಕ, ಈಗ ಬಿಎಸ್‌ವೈ ಕುಟುಂಬ ನಾಶಕ್ಕೆ ಕೈ ಯತ್ನ: ಎಚ್‌ಡಿಕೆ

ದೇವೇಗೌಡರ ಬಳಿಕ, ಈಗ ಬಿಎಸ್‌ವೈ ಕುಟುಂಬ ನಾಶಕ್ಕೆ ಕೈ ಯತ್ನ: ಎಚ್‌ಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.