ಮಾಸ್‌ ಡೈಲಾಗ್ಸ್‌ನಲ್ಲಿ ಸ್ಟಾರ್‌ ಸಿನಿಮಾಗಳ ಅಬ್ಬರ


Team Udayavani, Feb 19, 2021, 8:34 AM IST

ಮಾಸ್‌ ಡೈಲಾಗ್ಸ್‌ನಲ್ಲಿ ಸ್ಟಾರ್‌ ಸಿನಿಮಾಗಳ ಅಬ್ಬರ

ಕನ್ನಡ ಚಿತ್ರರಂಗದಲ್ಲಿ ಇವತ್ತಿಗೂ ದೊಡ್ಡ ಮಾರುಕಟ್ಟೆ ಇರೋದು ಮಾಸ್‌ ಸಿನಿಮಾಗಳಿಗೆ ಎಂಬ ಮಾತಿದೆ. ಅದು ಸತ್ಯ ಕೂಡಾ. ಸಿನಿಮಾ ಪ್ರಿಯರನ್ನು ಮಾಸ್‌ ಸಿನಿಮಾಗಳು, ಅದರ ಡೈಲಾಗ್‌ಗಳು ಸೆಳೆಯುವಷ್ಟು ಬೇಗನೇ ಇತರ ಜಾನರ್‌ ಸಿನಿಮಾಗಳು ಸೆಳೆಯುವುದಿಲ್ಲ. ಅದರಲ್ಲೂ ಸ್ಟಾರ್‌ ನಟರಿಂದ ಬರುವ ಮಾಸ್‌ ಸಿನಿಮಾಗಳಲ್ಲಿನ ಮಾಸ್‌ ಡೈಲಾಗ್ಸ್‌ ಅವರ ಅಭಿಮಾನಿಗಳಲ್ಲಿ ಇನ್ನಿಲ್ಲದಂತೆ ಕ್ರೇಜ್‌ ಹುಟ್ಟಿಸುತ್ತದೆ.

ಅದೇ ಕಾರಣದಿಂದ ಸಿನಿಮಾಗಳ ನಿರ್ದೇಶಕರುಗಳು ಕೂಡಾ ಮೊದಲು ಮಾಸ್‌ ಆಡಿಯನ್ಸ್‌ನ ತೃಪ್ತಿಪಡಿಸುತ್ತಾರೆ. ಏಕೆಂದರೆ ಸಿನಿಮಾವನ್ನು ಮೊದಲು ಕೈ ಹಿಡಿಯೋರು ಅವರೇ. ಸಿನಿಮಾ ರಿಲೀಸ್‌ಗೆ ಕಾದು ಫ‌ಸ್ಟ್‌ ಡೇ ಫ‌ಸ್ಟ್‌ ಶೋ ನೋಡೋರು, ಹೀರೋಗೆ ಜೈಕಾರ ಹಾಕೋರು, ಕಟೌಟ್‌ಗೆ ಹಾಲಿನಾಭಿಷೇಕ ಮಾಡುವ ಮನಸ್ಸು ಮಾಸ್‌ ಸಿನಿಮಾ ಪ್ರಿಯರದ್ದು. ಹಾಗಾಗಿ, ಸಿನಿಮಾಗಳ ಟ್ರೇಲರ್‌, ಟೀಸರ್‌ನಲ್ಲಿ ಮಾಸ್‌ ಡೈಲಾಗ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ನಾಲ್ಕು ಸಿನಿಮಾಗಳು ತಮ್ಮ ಮಾಸ್‌ ಡೈಲಾಗ್‌ ಮೂಲಕ ಮಾಸ್‌ ಆಡಿಯನ್ಸ್‌ಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದೆ.

ಇಂದು ತೆರೆಕಾಣುತ್ತಿರುವ “ಪೊಗರು’, “ರಾಬರ್ಟ್‌’, “ಯುವರತ್ನ’ ಹಾಗೂ “ಸಲಗ’ ಚಿತ್ರಗಳ ಟೀಸರ್‌, ಟ್ರೇಲರ್‌ಗಳಲ್ಲಿರುವ ಮಾಸ್‌ ಡೈಲಾಗ್‌ಗಳು ಈಗ ಸಖತ್‌ ಹಿಟ್‌ ಆಗಿವೆ. ಈ ಮೂಲಕ 2021 ಮಾಸ್‌ ಆಡಿಯನ್ಸ್‌ಗೆ ಖುಷಿ ಕೊಡಲಿದೆ. ಇದು ಕೇವಲ ನಾಲ್ಕು ಸಿನಿಮಾಗಳಿಗೆ ಸೀಮಿತವಾಗಿಲ್ಲ. ಮುಂದೆ ಸರತಿಯಲ್ಲಿರುವ “ಕೆಜಿಎಫ್-2′, “ಭಜರಂಗಿ-2′, “ಕಬ್ಬ’, “ಕೋಟಿಗೊಬ್ಬ-3′, “ಜೇಮ್ಸ್‌’, “ಮದಗಜ’ … ಹೀಗೆ ಇನ್ನೂ ಅನೇಕ ಸಿನಿಮಾಗಳಲ್ಲಿ ಈ ತರಹದ ಮಾಸ್‌ ಡೈಲಾಗ್‌ಗಳಿವೆ. ಅವುಗಳು ಟೀಸರ್‌, ಟ್ರೇಲರ್‌ ಬಂದ ನಂತರವಷ್ಟೇ ಗೊತ್ತಾಗಲಿದೆ.

ಇದನ್ನೂ ಓದಿ: ಯಕ್ಷರಂಗದ ಸಿಡಿಲಮರಿ ಖ್ಯಾತಿಯ ಡಾ. ಶ್ರೀಧರ ಭಂಡಾರಿ ಪುತ್ತೂರು ಇನ್ನಿಲ್ಲ!

ಸದ್ಯ ಟೀಸರ್‌, ಟ್ರೇಲರ್‌ಗಳಲ್ಲಿ ಸದ್ದು ಮಾಡುತ್ತಿರುವ ಚಿತ್ರಗಳ ಪ್ರಮುಖ ಮಾಸ್‌ ಡೈಲಾಗ್‌ಗಳನ್ನು ಇಲ್ಲಿ ನೀಡಲಾಗಿದೆ.

ಪೊಗರು

*ಅಡ್ರೆಸ್‌ ತಿಳ್ಕೊಂಡು ಸರ್ವಿಸ್‌ ಮಾಡೋಕೆ ಕೊರಿಯರ್‌ ಹುಡುಗ ಅಂದ್ಕೊಂಡೇನೋ…. ಫೈಟರ್‌… ಹೊಡೆದ್ರೆ ಯಾವನೂ ಅಡ್ರೆಸ್‌ಗೆ ಇರಲ್ಲ.. ಹೋಗಿ ಅವನಿಗೆ ನನ್ನ ಅಡ್ರೆಸ್‌ ಹೇಳು, ಅವನು ಮಾಡ್ತಿರೋದನ್ನೆಲ್ಲಾ ನೋಡಿ ಸುಮ್ನೆ ಕೂರೋದಕ್ಕೆ ಆ ಶಿವನ ಮುಂದೆ ಕೂತಿರೋ ನಂದಿ ಅಲ್ಲ… ಆ ದುರ್ಗಿನಾ ಹೊತ್ಕೊಂಡು ತಿರುಗಾಡೋ ಸಿಂಹ ನಾನು ಅಂತ ಹೇಳು… ಅವನಿಗಿರೋ ಪವರ್‌ನೆಲ್ಲಾ ಯೂಸ್‌ ಮಾಡ್ಲಿ, ಅವನಿಗಿರೋ ಜನರನ್ನೆಲ್ಲಾ ಯೂಸ್‌ ಮಾಡ್ಲಿ, ಅವನಿಗೇನಾದ್ರು ಧಮ್‌ ಅನ್ನೋದು ಇದ್ರೆ ಅದನ್ನೂ ಯೂಸ್‌ ಮಾಡಿದ್ರು ಸರಿ… ಐಯಾಮ್‌ ರೆಡಿ ಟು ಫೇಸ್‌

* ಒಬ್ನೇ ಬರ್ತೀನಿ..ಏನಾಯ್ತು ಅಂತ ನೋಡಿ ತಲೆಗೆ ಹತ್ತೋಷ್ಟರಲ್ಲಿ ಎಲ್ಲಾ ಮುಗಿಸಿ ಹೋಗ್ತಾ ಇರ್ತೀನಿ… ಮಕ್ಳ, ಸಿಂಪಲ್ಲಾಗಿ ಮೂರ್‌ ಹೊಡೆದಿದ್ದಕ್ಕೇನೇ ಸೀರಿಯಸ್‌ ಆಗಿದ್ದೀರಾ.. ಇನ್ನು ಸೀರಿಯಸ್‌ ಆಗಿ ಹೊಡೆದ್ರೆ ಸೀದಾ ಸುಡುಗಾಡೇ

* ತೋಳ್‌ ತುಂಬಾ ತಾಕತ್‌ ಇದ್ರು ತಕರಾರು ಮಾಡಲ್ಲ.. ಎದೆ ತುಂಬಾ ನಿಯತ್ತು ಇದ್ರು ಗುಲಾಮ ಆಗಿರಲ್ಲ.. ಗೂಳಿ ಸೈಲೆಂಟ್‌ ಆಗಿದೆ ಅಂತ ಗಾಂಚಾಲಿ ಮಾಡೋಕೆ ಬಂದ್ರೆ ಗುಧ್ದೋ ಏಟಿಗೆ ಗೂಗಲ್‌ನಲ್ಲಿ ಹುಡುಕಿದ್ರು ಟ್ರೀಟ್‌ಮೆಂಟ್‌ ಸಿಗಲ್ಲ… ಐಯಾಮ್‌ ನಟೋರಿಯಸ್‌

ರಾಬರ್ಟ್‌

*ನನ್ನನ್ನು ಸಂಹಾರ ಮಾಡ್ತೀನಿ ಅಂತ ಬರೋನು ನನಿಗಿಂತ ದೊಡ್ಡ ಕ್ರಿಮಿನಲ್‌ ಆಗಿರ್ಬೇಕು, ನನಿಗಿಂತ ಟೆರರ್‌ ಆಗಿರ್ಬೇಕು, ನನಿಗಿಂತ ವೈಲೆಂಟ್‌ ಆಗಿರ್ಬೇಕು…ಆ ತರಹದೋನು ಈ ಭೂಮಿ ಮೇಲೆ ಇದ್ದಾನಾ

* ­ನಾವು ನೋಡೋಕ್‌ ಮಾತ್ರ ಕ್ಲಾಸು.. ವಾರ್‌ಗೆ ಇಳಿದ್ರೆ ಫ‌ುಲ್‌ ಮಾಸ್‌,

*ಏ ತುಕಾಲಿ, ನೀನು ಮಾಸ್‌ ಆದ್ರೆ ನಾನು ಆ ಮಾಸ್‌ಗೆ ಬಾಸ್‌..

* ಸಾಮಾನ್ಯವಾಗಿ ಮನುಷ್ಯ ನಡುಗೋದು 2 ಬಾರಿ ಮಾತ್ರ… ಒಂದು ಅತಿಯಾದ ಚಳಿ ಆದಾಗ, ಇನ್ನೊಂದು ಅತಿಯಾದ ಭಯ ಆದಾಗ

*  ಈ ಕೈಗೆ ಶಬರಿ ಮುಂದೆ ಸೋಲೋದೂ ಗೊತ್ತು, ರಾವಣನ ಮುಂದೆ ಗೆಲ್ಲೋದು ಗೊತ್ತು..!

ಇದನ್ನೂ ಓದಿ: ಯಾರಿಗುಂಟು ಯಾರಿಗಿಲ್ಲ…ಕೋವಿಡ್ ಫಾಸಿಟಿವ್ ಬಂದವರಿಗೆ ಈ ರೆಸಾರ್ಟ್ ಲ್ಲಿ ಉಚಿತ ರೂಂ

ಯುವರತ್ನ

*­ಈ ದುನಿಯಾದಲ್ಲಿ ಮೂರು ತರಹ ಗಂಡಸ್ರು ಇರ್ತಾರೆ. ರೂಲ್‌ನ ಫಾಲೋ ಮಾಡೋರು, ರೂಲ್‌ನ ಬ್ರೇಕ್‌ ಮಾಡೋರು, ಮೂರನೇಯವರು ನನ್ನ ತರಹ… ರೂಲ್‌ ಮಾಡೋರು

­*ಗಂಡಸ್ತನ, ಛರ್ಬಿ, ಮೀಟರ್‌, ಮಾರ್ಕೇಟ್‌ ಇವೆಲ್ಲ ಇರೋನೊಬ್ಬ ಬೇಕು? ಸಿಗ್ತಾನಾ

* ಸೀಟ್ಗಾಗಿ ಹೊಡೆದಾಡೋನು ಡಾನ್‌, ಅದರ ಮೇಲೆ ಕುಳಿತುಕೊಳ್ಳೋನು..

* ಬ್ಯಾಟು-ಬಾಲ್‌ ಇದೆ ಅಂಥ ಫೀಲ್ಡಿಗೆ ಇಳಿದೋನಲ್ಲ ನಾನು, ಹೊಡಿತೀವಿ ಅಂತ ಕಾನ್ಫಿಡೆನ್ಸ್ ಇರೋದ್ರಿಂದಲೇ ಫೀಲ್ಡಿಗೆ ಇಳಿತಿರೋದು…

ಸಲಗ

* ವರ್ಲ್ಡ್ ಯಾವುದೇ ಕಲರ್‌ನಲ್ಲಿದ್ರೂ ಈ ಅಂಡರ್‌ವರ್ಲ್ಡ್ ಮಾತ್ರ ಕೆಂಪು ಕಲರ್‌ನಲ್ಲೇ ಇರಬೇಕು..

* ನಾನು ಹೊಡಿಬೇಕು ಅಂತ ಡಿಸೈಡ್‌ ಮಾಡಿದ್ರೆ ಸೈನ್ಯ ಎಷ್ಟೇ ದೊಡ್ಡದಾಗಿರ್ಲಿ ನುಗ್ಗಿ ಒಬ್ನೇ ಹೊಡಿತೀನಿ…

 

ರವಿ ಪ್ರಕಾಶ್ ರೈ

ಟಾಪ್ ನ್ಯೂಸ್

accident

ಭೀಕರ ಅಪಘಾತ: ಅಂತ್ಯಕ್ರಿಯೆಗೆ ತೆರಳುತ್ತಿದ್ದ 15 ಮಂದಿ ದುರ್ಮರಣ

cm-bomm

ಹೊಸವರ್ಷ ಆಚರಣೆ ವಿಚಾರದ ಬಗ್ಗೆ ತೀರ್ಮಾನ ಮಾಡಿಲ್ಲ : ಸಿಎಂ

1-sadsa

ಮೆಕ್ಸಿಕೋ: ಡ್ರಗ್ಸ್ ಕಳ್ಳಸಾಗಣೆ ತಂಡಗಳ ಭಾರಿ ಗುಂಡಿನ ಚಕಮಕಿ; 8 ಸಾವು

covid 19

ದೇಶದಲ್ಲಿ ಮತ್ತೆ ಹೆಚ್ಚಿದ ಕೋವಿಡ್ 19 ಹೊಸ ಪ್ರಕರಣಗಳ ಸಂಖ್ಯೆ!

rashid khan

16 ಕೋಟಿ ರೂ.ಗಾಗಿ ಪಟ್ಟು ಹಿಡಿದ ರಶೀದ್ ಖಾನ್: ಇಕ್ಕಟ್ಟಲ್ಲಿ ಸಿಲುಕಿದ ಸನ್ ರೈಸರ್ಸ್ !

3clean

ದಾಂಡೇಲಿ: ಗಬ್ಬು ನಾರುತ್ತಿರುವ ಸಂಡೆ ಮಾರ್ಕೆಟ್ ಹೊರ ಆವರಣ

baba-ramdev

ಮೋದಿಯವರ ಉದ್ದೇಶ ಒಳ್ಳೆಯದು: ರೈತರಿಗೆ ಬಾಬಾ ರಾಮ್ ದೇವ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

akshi

ನೇತ್ರದಾನದ ಮಹತ್ವಸಾರುವ ಚಿತ್ರ :  ಡಿ.3ಕ್ಕೆ ಅಕ್ಷಿ ತೆರೆಗೆ

shivaji surathkal 2

ಡಿಸೆಂಬರ್‌ನಿಂದ ಶಿವಾಜಿ ಸುರತ್ಕಲ್‌ 2 ಶುರು

jhjhgfd

ಜಮಾಲಿಗುಡ್ಡದಲ್ಲಿ ಧನಂಜಯ್‌-ಅದಿತಿ ಪ್ರಭುದೇವ

gori kannada movie

ಉತ್ತರ ಕರ್ನಾಟಕ ಮಂದಿಯ ಸಿನಿಮಾ ‘ಗೋರಿ’ಯಲ್ಲಿ ಮಾನವೀಯತೆ ಪಾಠ

ಒಂದೇ ಚಿತ್ರದಲ್ಲಿ ಅಪ್ಪ-ಮಗಳು: ಲವ್‌ ಯು ರಚ್ಚು ಚಿತ್ರದಲ್ಲಿ ಅಜೇಯ್‌ ರಾವ್‌ ಪುತ್ರಿ ನಟನೆ

ಒಂದೇ ಚಿತ್ರದಲ್ಲಿ ಅಪ್ಪ-ಮಗಳು: ಲವ್‌ ಯು ರಚ್ಚು ಚಿತ್ರದಲ್ಲಿ ಅಜೇಯ್‌ ರಾವ್‌ ಪುತ್ರಿ ನಟನೆ

MUST WATCH

udayavani youtube

ಎರೆಹುಳು ಸಾಕಾಣಿಕೆ ಮಾಡಿ ಭೂಮಿಯ ಫಲವತ್ತತೆ ಹೆಚ್ಚಿಸಿ, ಕೈತುಂಬಾ ಆದಾಯವೂ ಗಳಿಸಿ

udayavani youtube

ಬೆಂಗಳೂರಿನಿಂದ ಪಾಟ್ನಾಕ್ಕೆ 139 ಪ್ರಯಾಣಿಕರನ್ನು ಹೊತ್ತ ವಿಮಾನ ತುರ್ತು ಭೂಸ್ಪರ್ಶ

udayavani youtube

Shree Chamundeshwari Kshetra Arikodi

udayavani youtube

ಮೈಮೇಲೆ ದೇವರು ಬಂದಿದ್ದಾರೆ ಎಂದು ಲಸಿಕೆ ಹಾಕಲು ಬಂದವರನ್ನೇ ಯಾಮಾರಿಸಿದ ವ್ಯಕ್ತಿ

udayavani youtube

ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ!

ಹೊಸ ಸೇರ್ಪಡೆ

6eye

ನೇತ್ರದಾನ ಎಲ್ಲಕ್ಕಿಂತ ಶ್ರೇಷ್ಠ ದಾನ: ಡಾ| ಕ್ರಾಂತಿಕಿರಣ

accident

ಭೀಕರ ಅಪಘಾತ: ಅಂತ್ಯಕ್ರಿಯೆಗೆ ತೆರಳುತ್ತಿದ್ದ 15 ಮಂದಿ ದುರ್ಮರಣ

5bjp

ಪರಿಷತ್ತು ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ

cm-bomm

ಹೊಸವರ್ಷ ಆಚರಣೆ ವಿಚಾರದ ಬಗ್ಗೆ ತೀರ್ಮಾನ ಮಾಡಿಲ್ಲ : ಸಿಎಂ

4kalajnana

‘ಕಾಲಜ್ಙಾನ’ ಆಡಿಯೋ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.