‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರಕ್ಕೆ ಎಂಟ್ರಿ ಕೊಟ್ಟ ಮಯೂರಿ ನಟರಾಜ್
Team Udayavani, Apr 16, 2023, 2:56 PM IST
ರಕ್ಷಿತ್ ಶೆಟ್ಟಿ ನಿರ್ಮಾಣದಲ್ಲಿ “ಇಬ್ಬನಿ ತಬ್ಬಿದ ಇಳೆಯಲಿ’ ಎಂಬ ಸಿನಿಮಾ ಆರಂಭವಾಗಿದ್ದು ನಿಮಗೆ ಗೊತ್ತೇ ಇದೆ. ಚಿತ್ರದಲ್ಲಿ ವಿಹಾನ್, ಅಂಕಿತಾ ಅಮರ್ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಚಿತ್ರಕ್ಕೆ ಮತ್ತೂಬ್ಬ ನಾಯಕಿಯ ಎಂಟ್ರಿಯಾಗಿದೆ. ಆಕೆ ಮಯೂರಿ ನಟರಾಜ್.
ಕನ್ನಡ ಚಿತ್ರರಂಗದಲ್ಲಿ ನವನಟಿಯಾಗಿ ಗುರುತಿಸಿಕೊಳ್ಳುತ್ತಿರುವ ಮಯೂರಿಗೆ ಈಗ “ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದಿಂದ ಒಳ್ಳೆಯ ಪಾತ್ರ ಸಿಕ್ಕಿದೆ. ಈಗಾಗಲೇ ಮಯೂರಿ “ಗುರುದೇವ ಹೊಯ್ಸಳ’, “ಮ್ಯಾನ್ ಆಫ್ ದಿ ಮ್ಯಾಚ್’, “ಜಮಾಲಿ ಗುಡ್ಡ’ ಚಿತ್ರಗಳಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.
ಇನ್ನು, ಕಾವ್ಯಾತ್ಮಕ ಪ್ರೇಮಕಥೆಯ “ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರಕ್ಕೆ ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಶ್ರೀವಾತ್ಸನ್ ಸೆಲ್ವರಾಜನ್ ಛಾಯಾಗ್ರಹಣ, ರಕ್ಷಿತ್ ಕೌ ಸಂಕಲನವಿದೆ. ಗಗನ್ ಬಡೇರಿಯಾ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ.