
Sandalwoodl ಗ್ರಾಮಾಯಣಕ್ಕೆ ಮೇಘಾ ಶೆಟ್ಟಿ ಎಂಟ್ರಿ; ಜೊತೆ ಜೊತೆಯಲಿ ಹುಡುಗಿಯ ಹೊಸ ಸಿನಿಮಾ
Team Udayavani, Sep 22, 2023, 2:47 PM IST

ನಟ ವಿನಯ್ ರಾಜಕುಮಾರ್ “ಗ್ರಾಮಾಯಣ’ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ನಿಮಗೆ ಗೊತ್ತಿರಬಹುದು. ದೇವನೂರು ಚಂದ್ರು ನಿರ್ದೇಶನದ ಪಕ್ಕಾ ಗ್ರಾಮೀಣ ಸೊಗಡಿನ ಕಥಾಹಂದರ ಹೊಂದಿದ್ದ ಈ ಸಿನಿಮಾದ ಒಂದಷ್ಟು ಚಿತ್ರೀಕರಣ ಕೂಡಾ ಮುಗಿದಿತ್ತು. ಆದರೆ, ಕೋವಿಡ್ ಲಾಕ್‌ಡೌನ್ ಮತ್ತು ಅದೇ ಸಮಯದಲ್ಲಿ ಈ ಸಿನಿಮಾದ ನಿರ್ಮಾಪಕರು ತೀರಿಕೊಂಡಿದ್ದರಿಂದ ಸಿನಿಮಾದ ಚಿತ್ರೀಕರಣ ಕೂಡ ಅರ್ಧಕ್ಕೆ ನಿಂತಿತು. ಮತ್ತೆ “ಗ್ರಾಮಾಯಣ’ ಸಿನಿಮಾ ಮುಂದುವರೆಯುತ್ತದೆಯಾ?, ಇಲ್ಲವಾ ಎಂಬ ಅನುಮಾನ ದಟ್ಟವಾಗಿರುವಾಗಲೇ, “ಲಹರಿ ಫಿಲಂಸ್’ ಹಾಗೂ “ವೀನಸ್ ಎಂಟರ್‌ಟೈನರ್’ ಜಂಟಿಯಾಗಿ ಈ ಸಿನಿಮಾವನ್ನು ಕೈಗೆತ್ತಿಕೊಂಡು ಹೊಸದಾಗಿ ಮತ್ತೆ ಶುರು ಮಾಡಿದ್ದವು.
ಈಗಾಗಲೇ ರಿಯಲ್ ಸ್ಟಾರ್ ಉಪೇಂದ್ರ ನಟನೆ ಮತ್ತು ನಿರ್ದೆಶನದ “ಯು-ಐ’ ಸಿನಿಮಾವನ್ನು ನಿರ್ಮಿಸುತ್ತಿರುವ “ಲಹರಿ ಫಿಲಂಸ್’ ಹಾಗೂ “ವೀನಸ್ ಎಂಟರ್‌ಟೈನರ್’ ಸಂಸ್ಥೆಯ ಎರಡನೇ ಸಿನಿಮಾ ಇದಾಗಿದ್ದು, ಆರಂಭದಲ್ಲಿ “ಗ್ರಾಮಾಯಣ’ ಸಿನಿಮಾದಲ್ಲಿದ್ದ ಬಹುತೇಕ ಎಲ್ಲ ಕಲಾವಿದರು ಮತ್ತು ತಂತ್ರಜ್ಞರು ಈ ಸಿನಿಮಾದಲ್ಲೂ ಮುಂದುವರೆಯಲಿದ್ದಾರೆ. ಸದ್ಯ “ಗ್ರಾಮಾಯಣ’ ಸಿನಿಮಾದ ಚಿತ್ರೀಕರಣ ಕೆಲಸಗಳು ಭರದಿಂದ ನಡೆಯುತ್ತಿರುವಂತೆಯೇ, ಚಿತ್ರತಂಡದ ಕಡೆಯಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ, “ಗ್ರಾಮಾಯಣ’ ಸಿನಿಮಾಕ್ಕೆ ನಾಯಕ ನಟಿಯಾಗಿ ಮೇಘಾ ಶೆಟ್ಟಿ ಎಂಟ್ರಿಯಾಗಿದ್ದಾರೆ.
ಹೌದು, ಕಿರುತೆರೆಯ “ಜೊತೆ ಜೊತೆಯಲಿ…’ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಈಗ “ಗ್ರಾಮಾಯಣ’ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ “ಗ್ರಾಮಾಯಣ’ ಸಿನಿಮಾದಲ್ಲಿ ತಮ್ಮ ಪಾತ್ರವನ್ನು ಕೇಳಿ ಮೆಚ್ಚಿಕೊಂಡಿರುವ ಮೇಘಾ ಶೆಟ್ಟಿ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಶೀಘ್ರದಲ್ಲಿಯೇ ಮೇಘಾ ಶೆಟ್ಟಿ, ಚಿತ್ರೀಕರಣದಲ್ಲೂ ಭಾಗಿಯಾಗಲಿದ್ದಾರೆ ಎಂಬುದು ಚಿತ್ರತಂಡದ ಮೂಲಗಳ ಮಾಹಿತಿ.
ಇನ್ನು “ಜೊತೆ ಜೊತೆಯಲಿ…’ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾದ ಮೇಘಾ ಶೆಟ್ಟಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ತ್ರಿಬಲ್ ರೈಡಿಂಗ್’ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಹಿರಿತೆರೆಗೆ ಎಂಟ್ರಿಯಾಗಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳ್ತಂಗಡಿ ಟು ಸ್ಯಾಂಡಲ್ ವುಡ್: ಮನೆ ಕೆಲಸದಲ್ಲಿದ್ದಾಕೆ ಖ್ಯಾತ ನಟಿಯಾಗಿ ಮಿಂಚಿದ ಲೀಲಾವತಿ

Kannada Cinema; ‘ಪ್ರೇತ’- ಹರೀಶ್ ರಾಜ್ ಸಿನಿಮಾ ರಿಲೀಸ್ ಗೆ ರೆಡಿ

Kannada Cinema: ‘ಐ ಲವ್ ಯೂ ಕಣೇ.. ‘; ಭೀಮನ ಸೈಕ್ ಡ್ಯುಯೆಟ್ ಬಂತು

Joram; ಕನ್ನಡದ ಸಾಕಷ್ಟು ಸಿನಿಮಾಗಳು ನನ್ನನ್ನು ತುಂಬ ಕಾಡಿದೆ: ಮನೋಜ್ ಬಾಜಪಾಯಿ

Kaiva ಅಮರಪ್ರೇಮಿಯ ರಕ್ತಚರಿತ್ರೆ; ಬಜಾರಿಗೆ ಬಂತು ಧನ್ವೀರ್ ಚಿತ್ರ