ಸ್ಫೂಕಿ ಕಾಲೇಜ್ನಲ್ಲಿ ಮೆಲ್ಲುಸಿರ ಸವಿಗಾನ…
Team Udayavani, Nov 10, 2022, 1:30 PM IST
ಡಾ. ರಾಜಕುಮಾರ್ ಅಭಿನಯದ “ವೀರ ಕೇಸರಿ’ ಸಿನಿಮಾದ “ಮೆಲ್ಲುಸಿರೇ ಸವಿಗಾನ…’ ಎಂಬ ಜನಪ್ರಿಯ ಗೀತೆಯನ್ನು ಬಹುತೇಕ ಎಲ್ಲರೂ ಕೇಳಿರುತ್ತೀರಿ. ಈಗ ಇದೇ ಗೀತೆ “ಸ್ಫೂಕಿ ಕಾಲೇಜ್’ ಸಿನಿಮಾದಲ್ಲಿ ಹೊಸ ರೀತಿಯಲ್ಲಿ ಮತ್ತೂಮ್ಮೆ ತೆರೆಮೇಲೆ ಬರುತ್ತಿದೆ.
ಹೌದು, ಭರತ್ ಜಿ. ಕಥೆ, ಚಿತ್ರಕಥೆ ನಿರ್ದೇಶನದಲ್ಲಿ, ಹೆಚ್. ಕೆ. ಪ್ರಕಾಶ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ “ಸ್ಫೂಕಿ ಕಾಲೇಜ್’ ಸಿನಿಮಾದಲ್ಲಿ ಈ ಗೀತೆಯನ್ನು ಮರುಬಳಕೆ ಮಾಡಿಕೊಳ್ಳಲಾಗಿದ್ದು, ಹೊಸರೀತಿಯಲ್ಲಿ ಮೂಡಿಬಂದಿರುವ ಈ ಗೀತೆಗೆ ನಟಿ ರೀಷ್ಮಾ ನಾಣಯ್ಯ ಗ್ಲಾಮರಸ್ ಲುಕ್ನಲ್ಲಿ ಹೆಜ್ಜೆ ಹಾಕಿದ್ದಾರೆ. ಇದೇ ನವೆಂಬರ್ 14ರಂದು ಈ ಹಾಡು ಬಿಡುಗಡೆಯಾಗಲಿದೆ.