ಇದು ಮೂಗಜ್ಜನ ಕೋಳಿ: ಮೊದಲ ಅರೆಭಾಷೆ ಚಿತ್ರ


Team Udayavani, Mar 10, 2023, 2:53 PM IST

tdy-20

ಅರೆಭಾಷೆಯಲ್ಲಿ ನಿರ್ಮಾಣವಾದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ “ಮೂಗಜ್ಜನ ಕೋಳಿ’ ತೆರೆಗೆ ಬರಲು ಸಿದ್ಧವಾಗುತ್ತಿದೆ.

ಈ ಹಿಂದೆ “ಜೀಟಿಗೆ’, ತುಳುವಿನಲ್ಲಿ “ಲಕ್ಕಿಬಾಬು’ ಸಿನಿಮಾಗಳನ್ನು ನಿರ್ದೇಶಿಸಿದ್ದ ಸಂತೋಷ್‌ ಮಾಡ “ಮೂಗಜ್ಜನ ಕೋಳಿ’ ಅರೆಭಾಷೆ ಸಿನಿಮಾವನ್ನು ನಿರ್ದೇಶಿಸಿದ್ದು, “ಕನಸು ಪ್ರೊಡಕ್ಷನ್ಸ್‌’ ಬ್ಯಾನರಿನಲ್ಲಿ ಕೆ. ಸುರೇಶ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಇತ್ತೀಚೆಗೆ “ಮೂಗಜ್ಜನ ಕೋಳಿ’ಯ ಬಗ್ಗೆ ಮಾಹಿತಿ ನೀಡಲು ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ಸಿನಿಮಾದ ಒಂದಷ್ಟು ವಿಶೇಷತೆಗಳನ್ನು ಹಂಚಿಕೊಂಡಿತು. “ಇಲ್ಲಿಯವರೆಗೆ ಕನ್ನಡದ ಇತರೆ ಪ್ರಾದೇಶಿಕ ಭಾಷೆಗಳಾದ ತುಳು, ಕೊಂಕಣಿ, ಕೊಡವ, ಬ್ಯಾರಿ, ಬಂಜಾರ ಭಾಷೆಗಳಲ್ಲಿ ಸಿನಿಮಾಗಳು ಬಂದಿವೆ. ಆದರೆ ಇದೇ ಮೊದಲ ಬಾರಿಗೆ ಸುಳ್ಯ, ಪುತ್ತೂರು ಭಾಗಗಳಲ್ಲಿ ಪ್ರಚಲಿತದಲ್ಲಿರುವ ಅರೆಭಾಷೆಯಲ್ಲಿ “ಮೂಗಜ್ಜನ ಕೋಳಿ’ ಸಿನಿಮಾ ನಿರ್ಮಾಣವಾಗಿದೆ.

ದಕ್ಷಿಣ ಕನ್ನಡದ ಸುಳ್ಯ, ಪುತ್ತೂರು ಭಾಗದ ಪ್ರಾದೇಶಿಕತೆಯನ್ನು ಸಿನಿಮಾದಲ್ಲಿ ಚಿತ್ರಿಸಿದ್ದೇವೆ. ಇದೊಂದು ಮಕ್ಕಳ ಚಿತ್ರ. ಒಬ್ಬ ಮುದುಕ (ಅಜ್ಜ) ಮತ್ತು ಬಾಲಕಿಯೊಬ್ಬಳ ಸುತ್ತ ಇಡೀ ಚಿತ್ರದ ಕಥೆ ಸಾಗುತ್ತದೆ’ ಎಂಬುದು ಚಿತ್ರತಂಡದ ವಿವರಣೆ.

“ಗಲ್ಫಿನ ಮರಳುಗಾಡಿನಲ್ಲಿ ಬೆಳೆದ ಬಾಲಕಿ ಕನಸು ಮೊದಲ ಬಾರಿಗೆ ತನ್ನ ಹೆತ್ತವರ ಊರು ಸುಳ್ಯಕ್ಕೆ ಬರುತ್ತಾಳೆ. ಅವಳಿಗೆ ಅಲ್ಲಿನ ಸುಂದರ ಹಸಿರು ಪರಿಸರ ಎಲ್ಲವೂ ಹೊಸದಾಗಿರುತ್ತದೆ. ಎಲ್ಲವನ್ನೂ ತನ್ನದೇ ದೃಷ್ಟಿಕೋನದಲ್ಲಿ ನೋಡುವ ಬಾಲಕಿ ಮುಗ್ಧಳಾಗಿ ಅನೇಕ ಪ್ರಶ್ನೆಗಳನ್ನು ಕೇಳುತ್ತಾಳೆ. ಅವಳ ನೆರೆಮನೆಯಲ್ಲಿ ಗೋವಿಂದ (ಮೂಕಜ್ಜ) ಯಾರಲ್ಲೂ ಮಾತನಾಡದ ಒರಟು ಸ್ವಭಾವದ ಮುದುಕ. ಮುಗ್ಧ ಹುಡುಗಿ ಮತ್ತು ಕೋಳಿ ಸಾಕಿಕೊಂಡಿರುವ ಮೂಗಜ್ಜನ ನಡುವೆ ನಡೆಯುವ ಸಂಘರ್ಷ ಮತ್ತು ಸಂಬಂಧದ ಕಥೆಯೇ “ಮೂಗಜ್ಜನ ಕೋಳಿ’ ಸಿನಿಮಾ’ ಎಂದು ಸಿನಿಮಾದ ಕಥಾಹಂದರ ಬಿಚ್ಚಿಟ್ಟರು ನಿರ್ದೇಶಕ ಸಂತೋಷ್‌ ಮಾಡ.

ಇನ್ನು “ಮೂಗಜ್ಜನ ಕೋಳಿ’ ಸಿನಿಮಾದಲ್ಲಿ ನವೀನ್‌ ಪಡೀಲ್‌, ಗೌರಿಕಾ ದೀಪುಲಾಲ್‌ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಕಾಶ್‌ ತುಮ್ಮಿನಾಡು, ದೀಪಕ್‌ ರೈ ಪಾಣಾಜೆ, ರೂಪಶ್ರೀ ವರ್ಕಾಡಿ, ಸುಕನ್ಯಾ, ರಾಘವೇಂದ್ರ ಭಟ್‌, ಡಾ. ಜೀವನ ರಾಮ್‌ ಸುಳ್ಯ, ಕುಮಾರಿ ಸಾನಿಧ್ಯ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸುರೇಶ್‌ ಅರಸ್‌ ಸಂಕಲನ, ಸುಬ್ರಾಯ ಚೊಕ್ಕಾಡಿ ಸಾಹಿತ್ಯ, ವಿನೀತ್‌ ಕಥೆ, ರಮೇಶ್‌ ಶೆಟ್ಟಿಗಾರ್‌ ಚಿತ್ರಕಥೆ, ಸಂಭಾಷಣೆ “ಮೂಕಜ್ಜನ ಕೋಳಿ’ ಚಿತ್ರಕ್ಕಿದೆ.

ಟಾಪ್ ನ್ಯೂಸ್

Udupi ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Udupi ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Belthangady ಆಟೋ ರಿಕ್ಷಾ ಪಲ್ಟಿ: ಮಗು ಗಂಭೀರ

Belthangady ಆಟೋ ರಿಕ್ಷಾ ಪಲ್ಟಿ: ಮಗು ಗಂಭೀರ

Mangaluru ರೈಲು ಹತ್ತುವಾಗ ಆಯತಪ್ಪಿ ಬಿದ್ದ ಮಹಿಳೆಯ ರಕ್ಷಣೆ

Mangaluru ರೈಲು ಹತ್ತುವಾಗ ಆಯತಪ್ಪಿ ಬಿದ್ದ ಮಹಿಳೆಯ ರಕ್ಷಣೆ

Mangaluru ಪೊಲೀಸರ ಎದುರೇ ಮಗುವನ್ನು ಕೊಲ್ಲಲು ತಂದೆಯಿಂದ ಯತ್ನ

Mangaluru ಪೊಲೀಸರ ಎದುರೇ ಮಗುವನ್ನು ಕೊಲ್ಲಲು ತಂದೆಯಿಂದ ಯತ್ನ

Mangaluru ಆಸ್ಪತ್ರೆಯಲ್ಲಿ ಹಲ್ಲೆ: ಆರೋಪಿಯ ಬಂಧನ

Mangaluru ಆಸ್ಪತ್ರೆಯಲ್ಲಿ ಹಲ್ಲೆ: ಆರೋಪಿಯ ಬಂಧನ

Online ಉದ್ಯೋಗ ಆಮಿಷ : ಇಬ್ಬರು ಮಹಿಳೆಯರ 4.70 ಲಕ್ಷ ರೂ. ನಷ್ಟ

Online ಉದ್ಯೋಗ ಆಮಿಷ : ಇಬ್ಬರು ಮಹಿಳೆಯರ 4.70 ಲಕ್ಷ ರೂ. ನಷ್ಟ

COWSindhanur ಬಿಡಾಡಿ ದನಗಳನ್ನು ರಕ್ಷಿಸಿದ ಕಮಿಷನರ್: ಬೆದರಿಕೆ ಹಾಕಿದ ಕಿಡಿಗೇಡಿಗಳು

Sindhanur ಬಿಡಾಡಿ ದನಗಳನ್ನು ರಕ್ಷಿಸಿದ ಕಮಿಷನರ್: ಬೆದರಿಕೆ ಹಾಕಿದ ಕಿಡಿಗೇಡಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

puttakkana makkalu team outing

ಪುಟ್ಟಕ್ಕನ ಮಕ್ಕಳ ಔಟಿಂಗ್

Actress Rajini; ಸೀರಿಯಲ್‌ ಜರ್ನಿ ಖುಷಿ ಕೊಟ್ಟಿದೆ.. ನಟಿ ರಜಿನಿ ಮಾತು

Actress Rajini; ಸೀರಿಯಲ್‌ ಜರ್ನಿ ಖುಷಿ ಕೊಟ್ಟಿದೆ.. ನಟಿ ರಜಿನಿ ಮಾತು

tdy-9

Cauvery water: ಕಾವೇರಿ ಹೋರಾಟ; ಎಲ್ಲಾ ಪಕ್ಷದ ನಾಯಕರ ಒಗ್ಗಟ್ಟಿಗೆ ಕಿಚ್ಚ ಸುದೀಪ್ ಮನವಿ

bank-janardhan

Sandalwood: ಹಿರಿಯ ನಟ ಬ್ಯಾಂಕ್‌ ಜನಾರ್ದನ್ ಅವರಿಗೆ ಹೃದಯಾಘಾತ

Actor jaggesh spoke about thothapuri 2

Thothapuri 2; ಇದು ಎಲ್ಲರಿಗೂ ರುಚಿಸುವ ತೋತಾಪುರಿ: ನಟ ಜಗ್ಗೇಶ್‌ ಮಾತು

MUST WATCH

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

udayavani youtube

ಪೆಂಡಾಲ್ ಹಾಕುವ ವಿಚಾರಕ್ಕೆ ಗಲಾಟೆ; ನೆರೆಮನೆಯಾತನ ರಿಕ್ಷಾಕ್ಕೆ ಬೆಂಕಿಯಿಟ್ಟ ವ್ಯಕ್ತಿ

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

ಹೊಸ ಸೇರ್ಪಡೆ

Udupi ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Udupi ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

hdk

Congress: ಕಾಂಗ್ರೆಸ್‌ ಪಕ್ಷ ಡಿಎಂಕೆಯ ಬಿ ಟೀಮ್‌: ಎಚ್‌ಡಿಕೆ

kBadiyadka ಪಳ್ಳತ್ತಡ್ಕ ಅಪಘಾತ ಪ್ರಕರಣ: ಶಾಲಾ ಬಸ್‌ ಚಾಲಕನ ಸೆರೆ

Badiyadka ಪಳ್ಳತ್ತಡ್ಕ ಅಪಘಾತ ಪ್ರಕರಣ: ಶಾಲಾ ಬಸ್‌ ಚಾಲಕನ ಸೆರೆ

lok adalat

Karnataka: “ಗ್ಯಾರಂಟಿ” ಮೇಲೆ ಸಿಎಂ, ಡಿಸಿಎಂ, ಸಚಿವರ ಫೋಟೋ ಬೇಡ ಎಂದ ಅರ್ಜಿ ವಜಾ

m b patil

Investment: ಹೂಡಿಕೆ ಅರಸಿ ಅಮೆರಿಕಕ್ಕೆ ತೆರಳಿದ ಕೈಗಾರಿಕ ಸಚಿವ ಎಂ.ಬಿ. ಪಾಟೀಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.