Udayavni Special

Act 1978 : ಹೋರಾಟದ ಹಾದಿಯಲ್ಲಿ ಕಣ್ಣೀರ ಕಹಾನಿ


Team Udayavani, Nov 21, 2020, 12:59 PM IST

ಹೋರಾಟದ ಹಾದಿಯಲ್ಲಿ ಕಣ್ಣೀರ ಕಹಾನಿ

ಚಿತ್ರ: ಆಕ್ಟ್ 1978

ನಿರ್ಮಾಣ: ದೇವರಾಜ್‌ ಆರ್‌

ನಿರ್ದೇಶನ: ಮಂಸೋರೆ

ತಾರಾಗಣ: ಯಜ್ಞಾ ಶೆಟ್ಟಿ, ಬಿ.ಸುರೇಶ್‌, ಅಚ್ಯುತ್‌ ಕುಮಾರ್‌, ಪ್ರಮೋದ್‌ ಶೆಟ್ಟಿ, ಅವಿನಾಶ್‌, ಶ್ರುತಿ, ಶೋಭರಾಜ್‌ ಮತ್ತಿತರರು.

ಅಸಹಾಯಕತೆ, ನೋವು, ಜಿದ್ದು, ವ್ಯವಸ್ಥೆಯ ವಿರುದ್ಧ ಆಕ್ರೋಶ, ಬದಲಾವಣೆ ತರುವಕನಸು- ಇವೆಲ್ಲವನ್ನು ಒಟ್ಟು ಸೇರಿಸಿದರೆ ನಿಮಗೆ ಆಕ್ಟ್ 1978 ಸಿಗುತ್ತದೆ. ಲಾಕ್‌ಡೌನ್‌ ನಂತರ ಬಿಡುಗಡೆಯಾದ ಮೊದಲ ಹೊಸ ಚಿತ್ರ “ಆಕ್ಟ್ 1978′. ಒಂದು ವಿಭಿನ್ನ ಕಥಾ ವಸ್ತುವಿನೊಂದಿಗೆ ಹೊಸ ಸಿನಿಮಾಗಳ ಬಿಡುಗಡೆಯಾಗಬೇಕೆಂಬುದು ಸಿನಿಮಾ ಮಂದಿಯ ಹಾಗೂ ಪ್ರೇಕ್ಷಕರ ಕನಸಾಗಿತ್ತು. ಆ ಕನಸು ಈಡೇರಿದೆ ಎನ್ನಬಹುದು. ಆ ಮಟ್ಟಿಗೆ “ಆಕ್ಟ್ 1978′ ಒಂದು ವಿಭಿನ್ನ ಕಥಾಹಂದರ ಹೊಂದಿರುವಚಿ ತ್ರವಾಗಿ ಗಮನ ಸೆಳೆಯುತ್ತದೆ.

ಈ ಚಿತ್ರದ ಬಗ್ಗೆ ಒಂದೇ ಮಾತಲ್ಲಿ ಹೇಳುವುದಾದರೆ ವ್ಯವಸ್ಥೆಯ ವಿರುದ್ಧದ ಹೋರಾಟ ಎನ್ನಬಹುದು. ಸಿನಿಮಾ ಪ್ರೇಕ್ಷಕನಿಗೆ ಹೆಚ್ಚು ಹತ್ತಿರವಾಗಲು ಕಾರಣ ಸರಳ ಕಥೆ ಮತ್ತು ಪ್ರೇಕ್ಷಕನೇ ಚಿತ್ರದ ಪ್ರಮುಖ ಪಾತ್ರಧಾರಿಯಾಗಿದ್ದಾನೋ ಎಂಬ ಭಾವ. ಆ ಕಾರಣದಿಂದ ಚಿತ್ರ ತುಂಬಾ ಸಲೀಸಾಗಿ ನೋಡಿಸಿಕೊಂಡು ಹೋಗುತ್ತದೆ. ಈ ಮೂಲಕ ನಿರ್ದೇಶಕ ಮಂಸೋರೆ ಮತ್ತೂಮ್ಮೆ ಹೊಸ ಬಗೆಯ ಚಿತ್ರ ನೀಡಿದ್ದಾರೆ. ಮೊದಲೇ ಹೇಳಿದಂತೆ ಚಿತ್ರದ ಕಥೆ ತುಂಬಾ ಸರಳ. ಸರ್ಕಾರಿ ಕಚೇರಿಗೆ ಅಲೆದಾಡಿ, ಅಧಿಕಾರಿಗಳ ಲಂಚಾವತಾರದಿಂದ ಬೇಸತ್ತ ಹೆಣ್ಣು ಮಗಳೊಬ್ಬಳು ಯಾವ ರೀತಿ ಸಿಡಿದೇಳುತ್ತಾಳೆ, ಅಧಿಕಾರಿಗಳಿಗೆ ಶಿಕ್ಷೆ ಕೊಡಲು ಆಕೆ ಹುಡುಕುವ ಮಾರ್ಗವೇನು ಎಂಬುದು ಚಿತ್ರದ ಒನ್‌ಲೈನ್‌.

ಚಿತ್ರದ ಕಥೆ ಅದೆಷ್ಟೋ ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಘಟನೆಗಳಿಗೆ ಕನ್ನಡಿ ಹಿಡಿದಂತಿರುವುದರಿಂದ ಪ್ರೇಕ್ಷಕರಿಗೆ ಚಿತ್ರ ಹೆಚ್ಚು ಹತ್ತಿರವಾಗುತ್ತದೆ. ಚಿತ್ರದ ಪ್ರಮುಖ ಪಾತ್ರಧಾರಿ ಗೀತಾ ಪಟ್ಟಂತಹ ಕಷ್ಟವನ್ನು ಇವತ್ತಿಗೂ ಅನೇಕರು, ಅದರಲ್ಲೂ ಗ್ರಾಮೀಣ ಭಾಗದ ಮಂದಿ ಎದುರಿಸುತ್ತಿದ್ದಾರೆ. ಆದರೆ, ವ್ಯವಸ್ಥೆಯ ವಿರುದ್ಧ ಹೋಗುವ ಧೈರ್ಯದ ಕೊರತೆಯಿಂದ ಎಲ್ಲವನ್ನು ಸಹಿಸಿಕೊಂಡ, ಆ ವ್ಯವಸ್ಥೆಗೆ ಅನಿವಾರ್ಯವಾಗಿ ಒಗ್ಗಿಕೊಂಡಿದ್ದಾರೆ. ಆದರೆ, “ಆಕ್ಟ್ 1978′ ಅದೆಲ್ಲದರ ಪ್ರತಿನಿಧಿಯಾಗಿದೆ.

ಈ ಸಿನಿಮಾದಲ್ಲಿ ಹೆಚ್ಚು ಮಾತಿಲ್ಲ. ಮೌನದಲ್ಲೇ ಎಲ್ಲವನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಅದರಲ್ಲೂ ಚಿತ್ರದ ಪ್ರಮುಖ ಪಾತ್ರವೊಂದು ಸಿನಿಮಾದುದ್ದಕ್ಕೆ ಸಾಗಿಬಂದರೂ ಒಂದೇ ಒಂದು ಸಂಭಾಷಣೆ ಇಲ್ಲ. ಅದಕ್ಕೊಂದು ಕಾರಣವೂ ಇದೆ.ಅದನ್ನು ಸಿನಿಮಾದಲ್ಲೇ ನೋಡಬೇಕು. ಇನ್ನು, ಅನವಶ್ಯಕ ರೋಚಕತೆಯಿಂದ ಮುಕ್ತವಾಗಿರುವ ಚಿತ್ರಕ್ಷಣ ಕ್ಷಣವೂ ಕುತೂಹಲ ಕೆರಳಿಸುತ್ತಾ ಸಾಗುತ್ತದೆ. ಕಥೆಯ ಆಶಯಕ್ಕೆ ಎಲ್ಲೂ ಧಕ್ಕೆಯಾಗದಂತೆ ಇಡೀ ಸಿನಿಮಾವನ್ನುಕಟ್ಟಿಕೊಟ್ಟಿರೋದು ಮಂಸೋರೆ ಜಾಣ್ಮೆ.

ಇದನ್ನೂ ಓದಿ : ಬೈಪಾಸ್‌ ರೋಡ್‌ನ‌ಲ್ಲಿ ನಿಂತ ನೇಹಾ ಸಕ್ಸೇನಾ

ಇಲ್ಲಿ ಸರ್ಕಾರಿ ಅಧಿಕಾರಿಗಳ ಜೊತೆ ಸರ್ಕಾರದ ನಿರ್ಲಕ್ಷ ತನವನ್ನು ಸೂಕ್ಷ್ಮವಾಗಿ ಹೇಳಲಾಗಿದೆ. ಒಂದು ಉತ್ತಮ ಸಂದೇಶದೊಂದಿಗೆ ಚಿತ್ರ ತಾರ್ಕಿಕ ಅಂತ್ಯ ಕಾಣುತ್ತದೆ. ಸಿನಿಮಾ ಮುಗಿದು ಹೊರಬರುವ ಪ್ರೇಕ್ಷಕನ ಕಣ್ಣಂಚಲ್ಲಿ ಒಂದನಿ …. ಇಡೀ ಸಿನಿಮಾವನ್ನು ಆವರಿಸಿ ಕೊಂಡಿರೋದು ನಟಿ ಯಜ್ಞಾ ಶೆಟ್ಟಿ.

ಪಾತ್ರದ ಆಶಯದಿಂದ ತುಂಬಾ ನೈಜವಾಗಿ ಕಾಣಿಸಿಕೊಂಡು, ನಟಿಸಿದ್ದಾರೆ. ಹೆಚ್ಚು ಮಾತಿಲ್ಲದ ಹಾಗೂ ತೂಕವಿರುವ ಕೆಲವೇ ಕೆಲವು ಮಾತುಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಾರೆ. ಗರ್ಭಿಣಿಯೊಬ್ಬಳ ಅಸಹಾಯಕತೆ, ಭವಿಷ್ಯದ ಕನಸು, ವ್ಯವಸ್ಥೆ ಬದಲಾಗಬೇಕೆಂಬ ಆಶಯವನ್ನು ಪ್ರತಿನಿಧಿಸುವ ಗೀತಾಳ ಪಾತ್ರದಲ್ಲಿ ಯಜ್ಞಾ ಮಿಂಚಿದ್ದಾರೆ. ಉಳಿದಂತೆ ಬಿ.ಸುರೇಶ್‌ ಮಾತೇ ಇಲ್ಲದ, ಆದರೂ “ಪ್ರೇಕ್ಷಕರ ಜೊತೆ ಮಾತನಾಡುವ’ ಪಾತ್ರದ ಮೂಲಕ ಗಮನ ಸೆಳೆಯುತ್ತಾರೆ.

ಪ್ರಮೋದ್‌ ಶೆಟ್ಟಿ, ಸಂಚಾರಿ ವಿಜಯ್‌, ರಾಘು ಶಿವಮೊಗ್ಗ, ಅವಿನಾಶ್‌, ದತ್ತಣ್ಣ, ಶ್ರುತಿ ಸೇರಿದಂತೆ ಇತರರು ತಮ್ಮ ತಮ್ಮ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಟಿ.ಕೆ.ದಯಾನಂದ್‌, ವೀರೇಂದ್ರ ಮಲ್ಲಣ್ಣ ಅವರ ಚಿತ್ರಕಥೆ, ಸಂಭಾಷಣೆ ಚಿತ್ರದ ತೂಕ ಹೆಚ್ಚಿಸಿದೆ. ಚಿತ್ರದ ಹಿನ್ನೆಲೆ ಸಂಗೀತ ಕಥೆಯ ಆಶಯಕ್ಕೆ ಪೂರಕವಾಗಿದೆ. ಸತ್ಯಹೆಗಡೆಯವರ ಛಾಯಾಗ್ರಹಣದಲ್ಲಿ “ಆಕ್ಟ್’ ಸುಂದರ

 

ರವಿಪ್ರಕಾಶ್‌ ರೈ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಗೆಳೆಯರನ್ನು ಆಗಾಗ ಮಾತಾಡಿಸ್ತಾ ಇದೀರಾ?

ಗೆಳೆಯರನ್ನು ಆಗಾಗ ಮಾತಾಡಿಸ್ತಾ ಇದೀರಾ?

ದೇಶದೊಳಗಿನ ಸೈನಿಕರೇ ಗೃಹ ರಕ್ಷಕರು

ದೇಶದೊಳಗಿನ ಸೈನಿಕರೇ ಗೃಹ ರಕ್ಷಕರು

ಕಾಂಗ್ರೆಸ್‌ ಸಖ್ಯದಿಂದ ನನ್ನ ಹೆಸರು ಸರ್ವನಾಶ

ಕಾಂಗ್ರೆಸ್‌ ಸಖ್ಯದಿಂದ ನನ್ನ ಹೆಸರು ಸರ್ವನಾಶ

ಹೂಡಿಕೆದಾರರಾಗಲು ಈ ಅಂಶಗಳ ಅರಿವಿರಲಿ

ಹೂಡಿಕೆದಾರರಾಗಲು ಈ ಅಂಶಗಳ ಅರಿವಿರಲಿ

Village

ವ್ಯಾಜ್ಯಮುಕ್ತ, ಭಯಮುಕ್ತ ರಾಜ್ಯ ನಮ್ಮದಾಗಲಿ…

Sportsಟಿ20: ಸರಣಿ ಗೆಲುವಿನತ್ತ ಭಾರತದ ದಿಟ್ಟ ಹೆಜ್ಜೆ

ಟಿ20: ಸರಣಿ ಗೆಲುವಿನತ್ತ ಭಾರತದ ದಿಟ್ಟ ಹೆಜ್ಜೆ

ಡಿ.10ಕ್ಕೆ ಹೊಸ ಸಂಸತ್‌ ಭವನಕ್ಕೆ ಮೋದಿ ಶಂಕು

ಡಿ.10ಕ್ಕೆ ಹೊಸ ಸಂಸತ್‌ ಭವನಕ್ಕೆ ಮೋದಿ ಶಂಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಾರರ್‌ ಚಿತ್ರದಲ್ಲಿ ನಟಿಸಲಿದ್ದಾರೆ ನಿಧಿ ಸುಬ್ಬಯ್ಯ!

ಹಾರರ್‌ ಚಿತ್ರದಲ್ಲಿ ನಟಿಸಲಿದ್ದಾರೆ ನಿಧಿ ಸುಬ್ಬಯ್ಯ!

ಡ್ರಗ್ಸ್‌ ಪ್ರಕರಣ: ಸಂಜನಾ, ರಾಗಿಣಿ ತಲೆಕೂದಲು ಪರೀಕ್ಷೆಗೆ ಹೈಕೋರ್ಟ್‌ ಅನುಮತಿ

ಡ್ರಗ್ಸ್‌ ಪ್ರಕರಣ: ಸಂಜನಾ, ರಾಗಿಣಿ ತಲೆಕೂದಲು ಪರೀಕ್ಷೆಗೆ ಹೈಕೋರ್ಟ್‌ ಅನುಮತಿ

chethan

ತೆಲುಗಿಗೆ ಎಂಟ್ರಿ ಕೊಟ್ಟ ಸ್ಯಾಂಡಲ್ ವುಡ್ ನಟ ಚೇತನ್

abbakka

ಮಂಸೋರೆ ನಿರ್ದೇಶನದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಘರ್ಜಿಸಲಿದ್ದಾಳೆ ‘ಅಬ್ಬಕ್ಕ’

ಹೊಸಬರ ಲವ್‌ ಇನ್‌ ಲಾಕ್‌ಡೌನ್ :‌ ತೆರೆಮೇಲೆ ಪ್ರೇಮಕಥೆ

ಹೊಸಬರ ಲವ್‌ ಇನ್‌ ಲಾಕ್‌ಡೌನ್ :‌ ತೆರೆಮೇಲೆ ಪ್ರೇಮಕಥೆ

MUST WATCH

udayavani youtube

ಮಂಗಳೂರು: ಉಗ್ರರ ಪರ ಗೋಡೆ ಬರಹ ಪ್ರಕರಣ; ಇಬ್ಬರ ಬಂಧನ

udayavani youtube

ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಬಂದ್ | Udayavani

udayavani youtube

ಮಂಗಳೂರು ದೋಣಿ ದುರಂತದಲ್ಲಿ ಮೃತಪಟ್ಟವರಲ್ಲಿ ಅನ್ಸಾರ್ ಎಂಬಾತನ ಮೃತ ದೇಹಕ್ಕಾಗಿ ಹುಡುಕಾಟ

udayavani youtube

ಕುಂದಾಪುರ: ಬಾವಿಗೆ ಬಿದ್ದ ಜಿಂಕೆಯ ರಕ್ಷಣೆ

udayavani youtube

ಅನಾರೋಗ್ಯಕ್ಕೆ ಕುಗ್ಗದೆ ಕೃಷಿಯಲ್ಲಿ ಬದುಕು ಬದಲಿಸಿಕೊಂಡ ಸಾಧಕ

ಹೊಸ ಸೇರ್ಪಡೆ

ಗೆಳೆಯರನ್ನು ಆಗಾಗ ಮಾತಾಡಿಸ್ತಾ ಇದೀರಾ?

ಗೆಳೆಯರನ್ನು ಆಗಾಗ ಮಾತಾಡಿಸ್ತಾ ಇದೀರಾ?

ದೇಶದೊಳಗಿನ ಸೈನಿಕರೇ ಗೃಹ ರಕ್ಷಕರು

ದೇಶದೊಳಗಿನ ಸೈನಿಕರೇ ಗೃಹ ರಕ್ಷಕರು

ಕಾಂಗ್ರೆಸ್‌ ಸಖ್ಯದಿಂದ ನನ್ನ ಹೆಸರು ಸರ್ವನಾಶ

ಕಾಂಗ್ರೆಸ್‌ ಸಖ್ಯದಿಂದ ನನ್ನ ಹೆಸರು ಸರ್ವನಾಶ

ಹೂಡಿಕೆದಾರರಾಗಲು ಈ ಅಂಶಗಳ ಅರಿವಿರಲಿ

ಹೂಡಿಕೆದಾರರಾಗಲು ಈ ಅಂಶಗಳ ಅರಿವಿರಲಿ

Village

ವ್ಯಾಜ್ಯಮುಕ್ತ, ಭಯಮುಕ್ತ ರಾಜ್ಯ ನಮ್ಮದಾಗಲಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.