‘ರಾಘವೇಂದ್ರ ಸ್ಟೋರ್ಸ್’ ವಿಮರ್ಶೆ: ಹೊಸ ಪಾತ್ರೆ ಹಳೆ ರುಚಿ

Team Udayavani, Apr 29, 2023, 12:01 PM IST

‘ರಾಘವೇಂದ್ರ ಸ್ಟೋರ್ಸ್’ ವಿಮರ್ಶೆ: ಹೊಸ ಪಾತ್ರೆ ಹಳೆ ರುಚಿ

ಜಗ್ಗೇಶ್‌ ಸಿನಿಮಾಗಳೆಂದರೆ, ಅಲ್ಲೊಂದಿಷ್ಟು ಕಾಮಿಡಿ ದೃಶ್ಯಗಳು, ಕಚಗುಳಿಯಿಡುವ ಡೈಲಾಗ್ಸ್ ಇರುತ್ತದೆ ಮತ್ತು ಇರಲೇಬೇಕು ಎಂಬುದು ನೋಡುಗರ ನಿರೀಕ್ಷೆ ಮತ್ತು ಒತ್ತಾಯ! ‌

ಜಗ್ಗೇಶ್‌ ಕೂಡ ಪ್ರೇಕ್ಷಕರ ಈ ನಾಡಿ ಮಿಡಿತವನ್ನು ಅಪ್ಪಿಕೊಂಡು, ಒಪ್ಪಿಕೊಂಡೇ ಬಂದವರು. ಇನ್ನು “ಮಠ’ ಮತ್ತು “ಎದ್ದೇಳು ಮಂಜುನಾಥ’ ಸಿನಿಮಾಗಳ ನಂತರ ಜಗ್ಗೇಶ್‌ ಅವರ ಬದಲಾದ ಕಾಮಿಡಿ ಶೈಲಿ ಬಹು ಜನಪ್ರಿಯವಾಗಿದ್ದರಿಂದ, ಆನಂತರ ಬಂದ ಜಗ್ಗೇಶ್‌ ಅಭಿನಯದ ಬಹುತೇಕ ಸಿನಿಮಾಗಳ ನಿರ್ದೇಶಕರು ಅದೇ ಶೈಲಿ, ಪರಂಪರೆಗೆ ಕಿಂಚಿತ್ತೂ ಚ್ಯುತಿಯಾಗದಂತೆ ಮುಂದುವರೆಸಿ ಕೊಂಡು ಹೋಗಿದ್ದಾರೆ.

ಈ ವಾರ ತೆರೆಗೆ ಬಂದಿರುವ  ʼರಾಘವೇಂದ್ರ ಸ್ಟೋರ್ಸ್ʼ ಸಿನಿಮಾ ಕೂಡ ಅಂಥದ್ದೇ ಸಾಲಿಗೆ ಸೇರುವ ಮತ್ತೂಂದು ಸಿನಿಮಾ. ನಲವತ್ತರ ಆಸುಪಾಸಿನಲ್ಲಿ ಮದುವೆಯಾದ ನಾಯಕ ಹಾಗೂ ಆತನ ಮೊದಲ ರಾತ್ರಿಯ ತವಕ, ಅದಕ್ಕೆ ಅಡ್ಡಬರುವ ಹಲವು ಘಟನೆಗಳು ಈ ಸಿನಿಮಾದ ಮೂಲ ಅಂಶ. ಸಿನಿಮಾ ಮುಗಿಯಲು 20 ನಿಮಿಷವರೆಗೂ “ನಾಯಕ ಚಡಪಡಿಕೆಯೇ’ ಸಿನಿಮಾದ ಜೀವಾಳ.

ಇಲ್ಲಿಯವರೆಗೆ ಹಲವು ಸ್ಟಾರ್ ಜೊತೆ ಔಟ್‌ ಆ್ಯಂಡ್‌ ಔಟ್‌ ಮಾಸ್‌ ಸಿನಿಮಾಗಳನ್ನು ಮಾಡಿ ಗೆದ್ದಿದ್ದ ನಿರ್ದೇಶಕ ಸಂತೋಷ್‌ ಆನಂದರಾಮ್, ಅದರ ಹೊರತಾಗಿ ಬೇರೆ ಸಿನಿಮಾಗಳನ್ನು ಮಾಡಬಲ್ಲರು ಎಂಬ ಪ್ರಯತ್ನವಾಗಿ ಮೂಡಿಬಂದ ಸಿನಿಮಾ ರಾಘವೇಂದ್ರ ಸ್ಟೋರ್ಸ್.

ಆದರೆ, ಅವರ ಈ ಪ್ರಯತ್ನ ಪೂರ್ಣವಾಗಿ ಕೈ ಹಿಡಿದಂತಿಲ್ಲ. ಹಿಂದಿನ ಸಿನಿಮಾಗಳ ಛಾಯೆಯಿಂದ ಹೊರತಂದು ಜಗ್ಗೇಶ್‌ ಅವರನ್ನು ಹೊಸರೀತಿಯಾಗಿ ತೋರಿಸಬಹುದಾದ ಸಾಧ್ಯತೆಯನ್ನು ಬಳಸಿಕೊಳ್ಳುವಲ್ಲಿ ನಿರ್ದೇಶಕರು ಮತ್ತಷ್ಟು ಪ್ರಯತ್ನ ಮಾಡಬಹುದಿತ್ತು. ‌

ಆದರೆ, “ಸ್ಟೋರ್’ನಲ್ಲಿ ಜಗ್ಗೇಶ್‌ ಅವರ ಮ್ಯಾನರಿಸಂ ಮಾತ್ರ ಖುಷಿಕೊಡುತ್ತದೆ. ಅದರಾಚೆ “ಫ‌ಸ್ಟ್‌ನೈಟ್‌’ ಆಸೆಯ ಹುಡುಗನಿಗೆ “ಗ್ರಹಗತಿ’ ಗಳು ಅಡ್ಡಬಂದಾಗ ಪರದಾಡುವ ಹಲವು ಕಥೆಗಳು ನೆನಪಾಗುತ್ತವೆ. ಇನ್ನು ಅನೇಕ ಕಡೆಗಳಲ್ಲಿ ಬರುವ ಅನಗತ್ಯ ದೃಶ್ಯಗಳು, ಕೆಲ ಪಾತ್ರಗಳು, ಅತಿಯಾದ ಮಾತು.. ಸ್ವಲ್ಪ ಅತಿ ಎನಿಸುವ ಫ‌ಸ್ಟನೈಟ್‌ಗೆ ಆಸ್ಪತ್ರೆಯ ವಾರ್ಡ್‌ ಆದರೂ ಸರಿ ಎಂದು ಹುಡುಕುವ ದೃಶ್ಯಗಳು …. “ರಾಘವೇಂದ್ರ ಸ್ಟೋರ್’ನ ರುಚಿಯನ್ನು ಕೊಂಚ ತಗ್ಗಿಸಿವೆ. ಇನ್ನು ನಿರ್ದೇಶಕರ ಆಶಯದಂತೆ ಜಗ್ಗೇಶ್‌ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಹಯವದನನಾಗಿ ಜಗ್ಗೇಶ್‌ ಹಾವಭಾವ ಎಲ್ಲವೂ ಅಲ್ಲಲ್ಲಿ ನಗುತರಿಸುತ್ತದೆ. ನಾಯಕಿ ಶ್ವೇತಾ ಶ್ರೀವಾತ್ಸವ್‌ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಉಳಿದಂತೆ ದತ್ತಣ್ಣ, ಚಿತ್ಕಲಾ ಬಿರಾದಾರ್‌ ಅವರದ್ದು ಎಂದಿನಂತೆ ಲವಲವಿಕೆಯ ಅಭಿನಯ. ಅಚ್ಯುತ ಕುಮಾರ್‌ ಮತ್ತಿತ್ತರ ಕೆಲ ಪಾತ್ರಗಳು ಹಾಗೆ ಬಂದು ಹೀಗೆ ಹೋಗುವುದರಿಂದ ಅವುಗಳ ಬಗ್ಗೆ ಹೆಚ್ಚೇನು ಹೇಳುವಂತಿಲ್ಲ. ಒಟ್ಟಾರೆ ಜಗ್ಗೇಶ್‌ ಪಾತ್ರ, ನಿರೂಪಣೆ ಮತ್ತು ಸಂಭಾಷಣೆಗಳನ್ನು ನೋಡಿದರೆ “ರಾಘವೇಂದ್ರ ಸ್ಟೋರ್’ ಜಗ್ಗೇಶ್‌ ಅವರ ಹಿಂದಿನ ಸಿನಿಮಾಗಳ ಮುಂದುವರೆದ ಭಾಗ ಎಂದುಕೊಳ್ಳಬಹುದು. ಅಲ್ಲಿಗೆ ನಗುವಿಗೆ ಕೊರತೆಯಿಲ್ಲ ಎಂಬುದು ಸ್ಪಷ್ಟ.

-ಜಿ.ಎಸ್‌.ಕಾರ್ತಿಕ ಸುಧನ್

ಟಾಪ್ ನ್ಯೂಸ್

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

arvind kejriwal aap

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

ramarasa kannada movie

Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್‌ ಟೀಂ

ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ

ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

arvind kejriwal aap

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.