ಮುಂದಿನ ವಾರದಿಂದ ಶುರು “ಮುಂದುವರೆದ ಅಧ್ಯಾಯ”
Team Udayavani, Mar 13, 2021, 9:26 AM IST
“ಡೆಡ್ಲಿಸೋಮ’ ಖ್ಯಾತಿಯ ನಟ ಆದಿತ್ಯ ಈಗ ಪೊಲೀಸ್ ಆಫೀಸರ್ ಗೆಟಪ್‌ನಲ್ಲಿ ತೆರೆಮೇಲೆ ಬರೋದಕ್ಕೆ ರೆಡಿಯಾಗಿದ್ದಾರೆ. ಅದು “ಮುಂದುವರೆದ ಅಧ್ಯಾಯ’ ಚಿತ್ರದ ಮೂಲಕ. ಆದಿತ್ಯ ಅಭಿನಯದ “ಮುಂದುವರೆದ ಅಧ್ಯಾಯ’ ಚಿತ್ರ ಇದೇ ಮಾರ್ಚ್ 18ರಂದು ತೆರೆಗೆ ಬರಲು ರೆಡಿಯಾಗಿದ್ದು, “ಕಣಜ ಎಂಟರ್‌ಪ್ರೈಸಸ್’ ಬ್ಯಾನರ್ ಮೂಲಕ ನಿರ್ಮಾಣವಾಗಿರುವ, ಈ ಚಿತ್ರಕ್ಕೆ ಬಾಲು ಚಂದ್ರಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ಚಿತ್ರದ ವಿಶೇಷತೆಗಳ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದೆ.
“ಇದೊಂದು ಆ್ಯಕ್ಷನ್, ಥ್ರಿಲ್ಲರ್ ಶೈಲಿಯ ಸಿನಿಮಾ. ಅಂಡರ್‌ವರ್ಲ್ಡ್ ರೌಡಿಸಂನಂಥ ಯಾವುದೇ ಚಟುವಟಿಕೆಗಳಿಗೆ ಕೊನೆಯೆಂಬುದೇ ಇಲ್ಲ. ಆದರೆ ಜನ ಬದಲಾಗಬೇಕಿದೆ, ನಾವೆಲ್ಲ ಬದಲಾದರೆ ಸಮಾಜದಲ್ಲಿ ಖಂಡಿತ ಬದಲಾವಣೆ ತರಲು ಸಾಧ್ಯ ಎಂಬ ವಿಷಯವನ್ನು ಈ ಸಿನಿಮಾದ ಮೂಲಕ ಹೇಳುತ್ತಿದ್ದೇವೆ. ನಾವು ಹೇಗಿರುತ್ತವೋ ಹಾಗೇ ಸಮಾಜವೂ ಇರುತ್ತದೆ ಎನ್ನುವುದು ಸಿನಿಮಾದ ಕಥೆಯ ಒಂದು ಎಳೆ. ಆ್ಯಕ್ಷನ್, ಕಾಮಿಡಿ, ಸೆಂಟಿಮೆಂಟ್ ಜೊತೆಗೆ ಮನರಂಜನೆಗೆ ಬೇಕಾದಂಥ ಎಲ್ಲ ಎಲಿಮೆಂಟ್ಸ್ ಇದರಲ್ಲಿದೆ’ ಎನ್ನುತ್ತಾರೆ ನಿರ್ದೇಶಕ ಬಾಲು ಚಂದ್ರಶೇಖರ್.
ಇದನ್ನೂ ಓದಿ:ರಕ್ಷಿತ್ ಶೆಟ್ಟಿ ಪ್ರೇಮ ಪುರಾಣ: ಸಪ್ತಸಾಗರದಾಚೆ ಇಂಟೆನ್ಸ್ ಲವ್‌ಸ್ಟೋರಿ!
ಚಿತ್ರದಲ್ಲಿ ಆದಿತ್ಯ ಪೊಲೀಸ್ ಅಧಿಕಾರಿಯಾಗಿ ತುಂಬ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇಡೀ ಚಿತ್ರದಲ್ಲಿ ನಾಯಕಿಯ ಪಾತ್ರವಿಲ್ಲ. ಉಳಿದಂತೆ ಮುಖ್ಯಮಂತ್ರಿ ಚಂದ್ರು, ಜೈ ಜಗದೀಶ್, ವಿನಯ್ ಕೃಷ್ಣಸ್ವಾಮಿ, ವಿನೋದ್, ಆಶಿಕಾ ಸೋಮಶೇರ್ಖ, ಚಂದನಾ ಗೌಡ, ಸಂದೀಪ್ ಕುಮಾರ್, ಅಜಯ್ ರಾಜ್, ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರದಲ್ಲಿ ಮೂರು ಹಾಡುಗಳಿದ್ದು, ಜಾನಿ – ನಿತಿನ್ ಸಂಗೀತ ನಿರ್ದೇಶನವಿದೆ. ಚಿತ್ರಕ್ಕೆ ಛಾಯಾಗ್ರಾಹಕ ದಿಲೀಪ್ ಚಕ್ರವರ್ತಿ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ವಿನೋದ್ ಸಾಹಸವಿದೆ. ಸದ್ಯ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ “ಮುಂದುವರೆದ ಅಧ್ಯಾಯ’ ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಅನ್ನೋದು ಮುಂದಿನವಾರ ಗೊತ್ತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ
ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು
ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ
ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು
ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್
ಹೊಸ ಸೇರ್ಪಡೆ
ಉದ್ಯಮಿ ಕಟ್ಟೆ ಭೋಜಣ್ಣ ಸಾವು ಪ್ರಕರಣ; ಆತ್ಮಹತ್ಯೆಗೆ ಪ್ರಚೋದನೆ: ಗಣೇಶ್ ಶೆಟ್ಟಿ ಬಂಧನ
ನೆಲ್ಯಾಡಿ: ಕಾರು – ಟಿಪ್ಪರ್ ಢಿಕ್ಕಿ; ಓರ್ವ ಸಾವು
ಅತಿಕ್ರಮಣ ವಿರುದ್ಧ ಕಟ್ಟು ನಿಟ್ಟಿನ ಕ್ರಮ; ಅಧಿಕಾರಿಗಳಿಗೆ ಡಾ| ಕೆ.ವಿ. ರಾಜೇಂದ್ರ ಸೂಚನೆ
ಜನರ ಸಮಸ್ಯೆಗೆ ತತ್ಕ್ಷಣ ಸ್ಪಂದನೆ: ಸ್ಥಳೀಯ ಅಧಿಕಾರಿಗಳಿಗೆ ಕೂರ್ಮಾರಾವ್ ಸೂಚನೆ
ಕುಂದಾಪುರ:ಕೊನೆಗೂ ಬಂತು ತಾ.ಪಂ. ಅನುದಾನದ ಕಂತು