
‘ಕ್ಷೇತ್ರಪತಿ’ಯಾದ ನವೀನ್ ಶಂಕರ್
Team Udayavani, May 27, 2023, 5:17 PM IST

ನಟ ನವೀನ್ ಶಂಕರ್ ನಾಯಕರಾಗಿ ನಟಿಸಿರುವ ಹೊಸ ಚಿತ್ರ “ಕ್ಷೇತ್ರಪತಿ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಮೊದಲ ಹಂತವಾಗಿ ಚಿತ್ರದ ಮೋಶನ್ ಪೋಸ್ಟರ್ ರಿಲೀಸ್ ಆಗಿದೆ. ನವೀನ್ ಶಂಕ ಅವರಿಗೆ ಈಗ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡಿ ಶುಭಕೋರಿದೆ.
“ಕ್ಷೇತ್ರಪತಿ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿದೆ. ಜುಲೈನಲ್ಲಿ ಚಿತ್ರ ತೆರೆಗೆ ಬರಲಿದೆ. ಆಶ್ರಗ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಶ್ರೀಕಾಂತ್ ಕಟಗಿ ನಿರ್ದೇಶಿಸಿದ್ದಾರೆ. ಕ್ಷೇತ್ರಪತಿ ಸೋಶಿಯಲ್ ಪೊಲಿಟಿಕಲ್ ಡ್ರಾಮಾ ಕಥಾಹಂದರ ಹೊಂದಿದೆ ಎನ್ನುತ್ತಾರೆ ನಿರ್ದೇಶಕ ಶ್ರೀಕಾಂತ್.
ಇದು ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆಯಾಗಿದ್ದು, ಹೆಚ್ಚಿನ ಭಾಗದ ಚಿತ್ರೀಕರಣ ಉತ್ತರ ಕರ್ನಾಟಕದಲ್ಲೇ ನಡೆದಿದೆ. ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ಶಿವಸಾಗರ್ ಛಾಯಾಗ್ರಹಣ, ಮನು ಶೇಡಾರ್ ಸಂಕಲನ, ನರಸಿಂಹ ಸಾಹಸ ನಿರ್ದೇಶನ ಹಾಗೂ ಜೀವನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಇತ್ತೀಚೆಗೆ ಬಿಡುಗಡೆಯಾಗಿ ಜನಪ್ರಿಯವಾದ ಹೊಂದಿಸಿ ಬರೆಯಿರಿ ಚಿತ್ರದಲ್ಲಿ ನಾಯಕ – ನಾಯಕಿಯಾಗಿ ನಟಿಸಿದ್ದ ನವೀನ್ ಶಂಕರ್ ಹಾಗೂ ಅರ್ಚನಾ ಜೋಯಿಸ್ ಕ್ಷೇತ್ರಪತಿ ಚಿತ್ರದಲ್ಲೂ ನಾಯಕ – ನಾಯಕಿಯಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ರಾಹುಲ್ ಐನಾಪುರ, ಕೃಷ್ಣ ಹೆಬ್ಟಾಳೆ, ಶೈಲಶ್ರೀ ಅರಸ್, ನಾಟ್ಯ ರಂಗ, ಹರ್ಷ ಅರ್ಜುನ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vinod Prabhakar; ಅ.1ರಂದು ‘ಫೈಟರ್’ ಟ್ರೇಲರ್ ಬಿಡುಗಡೆ

Ronnie; ಸದ್ದು ಮಾಡುತ್ತಿದೆ ಧರ್ಮ ಕೀರ್ತಿರಾಜ್ ರ ‘ರೋನಿ’ ಟ್ರೇಲರ್

Sandalwood; ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದಲ್ಲಿ ನಿರೂಪ್ ಭಂಡಾರಿ

Sandalwood; ನನ್ನಪಾತ್ರ ತುಂಬಾ ಹೊಸದಾಗಿದೆ: ತೋತಾಪುರಿ 2 ಮೇಲೆ ಧನಂಜಯ್ ನಿರೀಕ್ಷೆ

Baana dariyalli ನೂತನ ಭಾವ ಲಹರಿ; ಗಣೇಶ್-ರುಕ್ಮಿಣಿ- ರೀಷ್ಮಾ ನಟನೆಯ ಸಿನಿಮಾ ರಿಲೀಸ್
MUST WATCH
ಹೊಸ ಸೇರ್ಪಡೆ

Karnataka Bandh; ಯಾದಗಿರಿಯಲ್ಲಿ ರೈಲು ತಡೆಯಲು ಯತ್ನ

Karnataka Bandh; ‘ನೀರು ನಿಲ್ಲಿಸದಿದ್ದರೆ ಡ್ಯಾಂ ಒಡೆಯುತ್ತೇವೆ’; ರಾಮನಗರದಲ್ಲಿ ಪ್ರತಿಭಟನೆ

Karnataka Bandh; ಚಿಕ್ಕಮಗಳೂರಿನಲ್ಲಿ ವ್ಯಾಪಕ ಬೆಂಬಲ; ಪ್ರತಿಕೃತಿ ದಹಿಸಿ ಪ್ರತಿಭಟನೆ

Canada; ಭಾರತದೊಂದಿಗೆ ಸ್ನೇಹಕ್ಕೆ ಸದಾ ಬದ್ಧ: ಬಿಕ್ಕಟ್ಟಿನ ನಡುವೆ ಟ್ರುಡೊ

Baana Daariyalli movie review; ಗಣೇಶ್- ಗುಬ್ಬಿ ಚಿತ್ರ ಹೇಗಿದೆ?