
ಬೆಳ್ಳಿತೆರೆಗೆ ನವ ಪ್ರತಿಭೆ ನೀತು ಗೌಡ ಎಂಟ್ರಿ: ಗ್ಲಾಮರಸ್ ಫೋಟೋಶೂಟ್
Team Udayavani, Mar 10, 2023, 2:59 PM IST

ಸ್ಯಾಂಡಲ್‌ವುಡ್‌ಗೆ ಪ್ರತಿವರ್ಷ ನೂರಾರು ನವ ತಾರೆಯರ ಆಗಮನವಾಗುತ್ತಲೇ ಇರುತ್ತದೆ. ಹೀಗೆ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟವರಲ್ಲಿ ಕೆಲವೇ ಕೆಲವು ನಟಿಯರು, ಮೊದಲ ನೋಟದಲ್ಲೇ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿ ಬಿಡುತ್ತಾರೆ. ಸದ್ಯ ಹೀಗೆ ಫಸ್ಟ್‌ಲುಕ್‌ನಲ್ಲಿಯೇ ಗಮನ ಸೆಳೆಯುತ್ತಿರುವ ನಟಿ ನೀತು ಗೌಡ.
ಕಮರ್ ನಿರ್ಮಾಣದಲ್ಲಿ ಕನ್ನಡ ಹಾಗು ತೆಲುಗಿನಲ್ಲಿ ತೆರೆಗೆ ಬರುತ್ತಿರುವ ಇನ್ನೂ ಹೆಸರಿಡದ ಥ್ರಿಲ್ಲರ್ ಸಿನಿಮಾದಲ್ಲಿ ನೀತು ನಾಯಕಿಯಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಚಿತ್ರತಂಡ ನೀತು ಅವರ ಫೋಟೋ ಶೂಟ್‌ನ ಗ್ಲಾಮರಸ್ ಫೋಟೋಗಳನ್ನು ಬಿಡುಗಡೆ ಮಾಡಿದೆ.
ಈ ಮೂಲಕ ಚಿತ್ರತಂಡ ಗ್ಲಾಮರಸ್ ಆಗಿ ಹೀರೊಯಿನ್ ಇಂಟ್ರೊಡಕ್ಷನ್ ಮಾಡಿದೆ. ಇನ್ನು ತಮ್ಮ ಹೊಸಚಿತ್ರಕ್ಕಾಗಿ ತೆರೆಮರೆಯಲ್ಲಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿರುವ ನೀತು, ಇದೇ ಏಪ್ರಿಲ್‌ನಿಂದ ಚಿತ್ರೀಕರಣಕ್ಕೆ ಹೊರಡಲು ರೆಡಿಯಾಗಿದ್ದಾರೆ. ಬೆಂಗಳೂರು, ಹೈದರಾಬಾದ್ ಸೇರಿದಂತೆ ಹಲವು ಕಡೆಗಳಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯಲಿದ್ದು, ದಕ್ಷಿಣ ಭಾರತದ ಹಲವು ತಾರೆಯರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಸದ್ಯ ಬಿಡುಗಡೆಯಾಗಿರುವ ನೀತು ಗ್ಲಾಮರಸ್ ಫೋಟೋ ಶೂಟ್‌ನ ಫೋಟೋಗಳು ಸ್ಯಾಂಡಲ್‌ವುಡ್ ಮಂದಿಯ ಕಣ್ಣರಳುವಂತೆ ಮಾಡಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ವರ್ಷದ ಅಂತ್ಯಕ್ಕೆ ನೀತು ನಾಯಕಿಯಾಗಿ ಅಭಿನಯಿ ಸುತ್ತಿರುವ ದ್ವಿಭಾಷಾ ಸಿನಿಮಾ ತೆರೆಗೆ ಬರಲಿದೆ.
ಟಾಪ್ ನ್ಯೂಸ್
