‘ಆಗೋದೆಲ್ಲ ಒಳ್ಳೇದಕ್ಕೆ’ ಚಿತ್ರದ ಟ್ರೇಲರ್ ಬಂತು
Team Udayavani, Jan 13, 2023, 1:27 PM IST
“ಆಗೋದೆಲ್ಲ ಒಳ್ಳೇದಕ್ಕೆ’ ಹೀಗೊಂದು ಶೀರ್ಷಿಕೆಯ ಚಿತ್ರ ತಯಾರಾಗಿದ್ದು, ಇತ್ತೀಚೆಗೆ ಚಿತ್ರತಂಡ ತನ್ನ ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆಗೊಳಿಸಿದೆ. ಸಿ.ಎಸ್.ಲೋಹಿತ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ, ಸಂಕಲನವನ್ನು ಕೂಡಾ ಕಾರ್ತಿಕ್ ವೆಂಕಟೇಶ್ ಮಾಡಿದ್ದಾರೆ.
ಚಿತ್ರ ನಿರ್ದೇಶಕ ಕಾರ್ತಿಕ್ ವೆಂಕಟೇಶ್ ಮಾತನಾಡಿ, ಒಬ್ಬ ಶಕ್ತಿಯುತ ಗೃಹಮಂತ್ರಿ ಇಡೀ ನಗರದಲ್ಲಿರುವ ಕ್ರೈಂ, ಭ್ರಷ್ಟಾಚಾರ, ಉಗ್ರವಾದವನ್ನು ಬುಡ ಸಮೇತವಾಗಿ ತೆಗೆದು ಹಾಕುವ ಯೋಜನೆಯನ್ನು ಹೊಂದಿರುತ್ತಾರೆ. ಆ ಸಮಯದಲ್ಲಿ ಬೆಂಗಳೂರಿನ ಕೆಲ ಪ್ರದೇಶಗಳ ಮೇಲೆ ಉಗ್ರರ ಕಣ್ಣು ಬೀಳುತ್ತದೆ. ಇದನ್ನು ತಡೆಯುವಲ್ಲಿ ಗೃಹಮಂತ್ರಿ ಹೇಗೆ ಯಶಸ್ವಿಯಾಗುತ್ತಾರೆ. ನಂತರ ಅವರ ಜೀವನದಲ್ಲಿ ಸೃಷ್ಟಿಯಾಗುವ ಸಂದರ್ಭಗಳು ಏನು ಎಂಬುದೇ ಆಗೋದೆಲ್ಲ ಒಳ್ಳೇದಕ್ಕೆ ಚಿತ್ರದ ಕಥೆ ಎಂದು ಚಿತ್ರದ ಕುರಿತು ಹೇಳಿದರು.
ಚಿತ್ರದ ಪ್ರಮುಖ ಪಾತ್ರಧಾರಿ ಎಂ.ಡಿ ಕೌಶಿಕ್ ಮಾತನಾಡಿ, “ನಿರ್ಮಾಪಕರು ನನಗೆ 10-15 ವರ್ಷದ ಪರಿಚಯ. ಲೋಹಿತ್ ಚಿತ್ರ ನಿರ್ಮಿಸುವ ಆಸೆಯನ್ನು ಹೊಂದಿದ್ದರು. ಆ ಸಮಯದಲ್ಲಿ ನಾನು ನಿರ್ದೇಶಕರನ್ನು ಭೇಟಿ ಮಾಡಿಸಿದೆ. “ಆಗೋದೆಲ್ಲ ಒಳ್ಳೇದಕ್ಕೆ’ ಅಂತಲೇ ಚಿತ್ರ ಆರಂಭವಾಗಿ ಇಲ್ಲಿಯವರೆಗೆ ಬಂದಿದೆ. ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ’ ಎಂದರು.
ಯತಿರಾಜ್, ಭಾರ್ಗವ್, ಅರ್ಚನಾ, ಎಂ.ಡಿ. ಕೌಶಿಕ್, ಸಂದೀಪ್, ದುಬೈ ರಫೀಕ್, ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಸಿರಿ ಮ್ಯೂಸಿಕ್ ಚಿತ್ರದ ಆಡಿಯೋ ರೈಟ್ಸ್ ಪಡೆದಿದೆ. 15 ದಿನಗಳಲ್ಲಿ ಶೂಟಿಂಗ್ ಮುಗಿಸಿರುವ ಚಿತ್ರತಂಡ, ಸೆನ್ಸಾರ್ ಸಂಪೂರ್ಣ ಗೊಳಿಸಿ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು