ಮುಸುರಿ ಬ್ಯಾನರ್‌ನಲ್ಲಿ ನಿಗರ್ವ

ವಿಭಿನ್ನ ಕಥೆಯುಳ್ಳ ಚಿತ್ರಕ್ಕೆ ಚಾಲನೆ

Team Udayavani, Apr 24, 2019, 3:16 AM IST

ಮುಸುರಿ ಕೃಷ್ಣ ಮೂರ್ತಿ ಕನ್ನಡ ಚಿತ್ರರಂಗ ಕಂಡ ಅಪರೂಪದ ಹಾಸ್ಯ ನಟರು. ಅವರ ಪುತ್ರ ಜಯಸಿಂಹ ಮುಸುರಿ ಅವರು ಮುಸುರಿ ಕೃಷ್ಣಮೂರ್ತಿ ಫಿಲಂಸ್‌ ಬ್ಯಾನರ್‌ನಲ್ಲಿ ಈಗಾಗಲೇ ಸಿನಿಮಾ ನಿರ್ಮಾಣ, ನಿರ್ದೇಶನ ಮಾಡಿದ್ದಾರೆ. ಈಗ ಹೊಸ ಚಿತ್ರವೊಂದಕ್ಕೆ ಮುಹೂರ್ತವನ್ನೂ ನೆರವೇರಿಸಿದ್ದಾರೆ.

ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ಆ ಚಿತ್ರಕ್ಕೆ “ನಿಗರ್ವ’ ಎಂದು ನಾಮಕರಣ ಮಾಡಲಾಗಿದೆ. ಇತ್ತೀಚೆಗೆ ಆರ್‌.ಎಸ್‌.ಗೌಡ ಸ್ಟುಡಿಯೋದಲ್ಲಿ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಚಿತ್ರದ ಪ್ರಥಮ ಸನ್ನಿವೇಶಕ್ಕೆ ನಂದಿಹಾಳ್‌ ಅವರು ಆರಂಭ ಫ‌ಲಕ ತೋರಿದರೆ, ಡ್ಯಾನ್ಸ್‌ ಕಿಟ್ಟಿ ಅವರು ಕ್ಯಾಮೆರಾ ಚಾಲನೆ ಮಾಡಿದ್ದಾರೆ.

ಇನ್ನು, ಈ ಚಿತ್ರದಲ್ಲಿ ಕೃಷ್ಣೇಗೌಡ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ “ಅರಬ್ಬೀ ಕಡಲ ತೀರದಲ್ಲಿ’ ಚಿತ್ರದಲ್ಲಿ ನಟಿಸಿದ್ದ ಕೃಷ್ಣೇಗೌಡ ಅವರಿಗಿಲ್ಲಿ ವಿಶೇಷ ಪಾತ್ರ ನೀಡಿದ್ದಾರೆ ನಿರ್ದೇಶಕ ಜಯಸಿಂಹ ಮುಸುರಿ. ಈಗಾಗಲೇ ಕೃಷ್ಣೇಗೌಡ ಅವರ ಗೆಟಪ್‌ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರದು ನೆಗೆಟಿವ್‌ ಶೇಡ್‌ ಇರಬಹುದಾ ಎಂಬ ಪ್ರಶ್ನೆ ಕಾಡುತ್ತದೆ.

ಅಷ್ಟೇ ಅಲ್ಲ, ಬುಡಬುಡಕೆ ಆಡಿಸುವ ವ್ಯಕ್ತಿಯಾಗಿಯೂ ಗಮನಸೆಳೆಯುತ್ತಾರೆ. ಒಟ್ಟಾರೆ, ಚಿತ್ರದಲ್ಲಿ ವಿಶೇಷ ಪಾತ್ರ ಮಾಡುತ್ತಿರುವ ಕೃಷ್ಣೇಗೌಡ ಅವರು, ಚಿತ್ರದ ಬಗ್ಗೆ ಯಾವ ಮಾಹಿತಿಯನ್ನೂ ಹಂಚಿಕೊಂಡಿಲ್ಲ. ಚಿತ್ರಕ್ಕೆ ಗುರುದತ್‌ ಮುಸುರಿ ಅವರ ಛಾಯಾಗ್ರಹಣವಿದೆ.

ಉಳಿದಂತೆ ಚಿತ್ರದಲ್ಲಿ ಭಾರತಿ ಹೆಗಡೆ, ಅರ್ಹತಾ ಗೌಡ, ರತ್ನಕುಮಾರಿ, ರಂಜಿತಾರಾವ್‌, ಅಶ್ವಿ‌ನಿರಾವ್‌, ಆರ್ಯನ್‌ ಸೂರ್ಯ ಇತರರು ನಟಿಸುತ್ತಿದ್ದಾರೆ. ಚಿತ್ರದ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ್ದ ನಿರ್ಮಾಪಕ ರಾಜೇಶ್‌, ದಿಲ್‌ ಸತ್ಯ, ಆರ್‌.ಎಸ್‌.ಗೌಡ, ನಾಗೇಂದ್ರ ಅರಸ್‌ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

  • "ಡಾಟರ್‌ ಆಫ್ ಪಾರ್ವತಮ್ಮ', ಕಳೆದ ಎರಡು-ಮೂರು ತಿಂಗಳಿನಿಂದ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸತತವಾಗಿ ಸೌಂಡ್‌ ಮಾಡುತ್ತಿರುವ ಹೆಸರು. ಕನ್ನಡ ಚಿತ್ರರಂಗಕ್ಕೂ ಪಾರ್ವತಮ್ಮ...

  • ಸಾಮಾನ್ಯವಾಗಿ ಚಿತ್ರರಂಗದಲ್ಲಿ ತಾರೆಯರು, ಅದರಲ್ಲೂ ನಾಯಕ ನಟಿಯರು ಯಾವಾಗಲೂ ಫಿಟ್‌ ಆ್ಯಂಡ್‌ ಫೈನ್‌ ಆಗಿ ಕಾಣಲು ಬಯಸುತ್ತಾರೆ. ಅದಕ್ಕಾಗಿ ಪ್ರತಿದಿನ ಯೋಗ, ಜಿಮ್‌,...

  • ಇತ್ತೀಚೆಗಷ್ಟೇ "99' ಚಿತ್ರದಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದ ನಟ ಗೋಲ್ಡನ್‌ ಸ್ಟಾrರ್‌ ಗಣೇಶ್‌ ಈಗ ಮತ್ತೆ ಥಿಯೇಟರ್‌ನಲ್ಲಿ 'ಗಿಮಿಕ್‌' ಮಾಡೋದಕ್ಕೆ ರೆಡಿಯಾಗುತ್ತಿದ್ದಾರೆ....

  • ಪ್ರಿಯಾಂಕ ಅಭಿನಯದ "ದೇವಕಿ' ಚಿತ್ರ ಬಹುತೇಕ ಪೂರ್ಣಗೊಂಡಿದ್ದು, ಈಗ ಬಿಡುಗಡೆಗೆ ಸಜ್ಜಾಗುತ್ತಿದೆ. "ದೇವಕಿ' ಬಹುತೇಕ ಕೊಲ್ಕತ್ತಾದಲ್ಲೇ ಚಿತ್ರೀಕರಣಗೊಂಡಿದೆ....

  • "ಆಗಸ್ಟ್‌ 9'... ಕನ್ನಡ ಚಿತ್ರರಂಗದ ಮಟ್ಟಿಗೆ ಹಬ್ಬ. ಅದರಲ್ಲೂ ಅಭಿಮಾನಿಗಳ ಪಾಲಿಗಂತೂ ಎಲ್ಲಿಲ್ಲದ ಸಡಗರ, ಸಂಭ್ರಮ. ಹಾಗಂತ, ಆಗಸ್ಟ್‌ 9 ರಂದು ಯಾವುದೇ ಚಿತ್ರೋತ್ಸವ ನಡೆಯುತ್ತಿಲ್ಲ....

ಹೊಸ ಸೇರ್ಪಡೆ