ಧನಂಜಯ್ ಹೊಸಚಿತ್ರ ‘ಜಮಾಲಿಗುಡ್ಡ’ ರಿಲೀಸ್ ಡೇಟ್ ಫಿಕ್ಸ್
Team Udayavani, May 29, 2022, 2:18 PM IST
ಸದ್ಯ ಕನ್ನಡ ಚಿತ್ರರಂಗದ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬಿಝಿಯಾಗಿರುವ ನಟರ ಪೈಕಿ ಡಾಲಿ ಧನಂಜಯ್ ಕೂಡಾ ಒಬ್ಬರು. ಒಂದರ ಮೆಲೊಂದು ಸಿನಿಮಾ ಮಾಡುತ್ತಿರುವ ಧನಂಜಯ್ ಇದೀಗ “ಜಮಾಲಿಗುಡ್ಡ’ದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.
ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ “ಜಮಾಲಿಗುಡ್ಡ’ ಸಿನಿಮಾದ ಧನಂಜಯ್ ಅವರ ಪಾತ್ರದ ಫಸ್ಟ್‌ಲುಕ್ ಪೋಸ್ಟರ್‌ಗೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಡಾಲಿಯ ಹೊಸ ಅವತಾರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ಕೂಡಾ ವ್ಯಕ್ತವಾಗಿತ್ತು. ಇದೀಗ ಧನಂಜಯ್ ಡಿಫರೆಂಟ್ ಗೆಟಪ್ ನೋಡಿ ಕುತೂಹಲದಿಂದ ಸಿನಿಮಾದ ಬಿಡುಗಡೆಯನ್ನು ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಚಿತ್ರತಂಡ ಸಂತಸದ ಸುದ್ದಿಯೊಂದನ್ನು ನೀಡಿದೆ. ಅದೇನೆಂದರೆ “ಜಮಾಲಿಗುಡ್ಡ’ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ.
ಹೌದು, “ಜಮಾಲಿಗುಡ್ಡ’ ಚಿತ್ರದ ಬಿಡುಗಡೆಯ ದಿನವನ್ನು ಅಧಿಕೃತವಾಗಿ ಘೋಷಿಸಿರುವ ಚಿತ್ರತಂಡ, ಇದೇ ಸೆಪ್ಟೆಂಬರ್ 9ರಂದು ಚಿತ್ರವನ್ನು ತೆರೆಗೆ ತರುವುದಾಗಿ ಹೇಳಿದೆ. ಕುಶಾಲ್ ಗೌಡ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ “ಒನ್ಸ್ ಅಪಾನ ಟೈಂ ಇನ್ ಜಮಾಲಿ ಗುಡ್ಡ’ 80-90 ರ ದಶಕದ ಕಥೆಯನ್ನು ಆಧರಿಸಿದ್ದು, ಚಿತ್ರದಲ್ಲಿ ಬಾರ್ ಸಪ್ಲಾಯರ್ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಂಡಿದ್ದಾರೆ. ಅದಿತಿ ಪ್ರಭುದೇವಾ ನಾಯಕಿಯಾಗಿದ್ದು, ಮಸಾಜ್ ಪಾರ್ಲರ್‌ನಲ್ಲಿ ಕೆಲಸ ಮಾಡುವ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ಬರ್ತ್ ಡೇ ಗೆ ‘ಸಾರಿ’ ಗಿಫ್ಟ್; ಹೊಸಬರ ಜೊತೆ ರಾಗಿಣಿ ಚಿತ್ರ…
ಉಳಿದಂತೆ ಪ್ರಕಾಶ್ ಬೆಳವಾಡಿ, ಭಾವನಾ ರಾಮಣ್ಣ, ತ್ರಿವೇಣಿ ರಾವ್, ನಂದಗೋಪಾಲ್, ಯಶ್ ಶೆಟ್ಟಿ ಮುಂತಾದವರು “ಜಮಾಲಿಗುಡ್ಡ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ನಿಹಾರಿಕಾ ಮೂವೀಸ್’ ಬ್ಯಾನರ್ ಅಡಿಯಲ್ಲಿ ಶ್ರೀಹರಿ ನಿರ್ಮಿಸುತ್ತಿರುವ “ಜಮಾಲಿಗುಡ್ಡ’ ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಗೀತ ಸಂಯೋಜನೆಯಿದ್ದು, ಚಿತ್ರಕ್ಕೆ ಕಾರ್ತಿಕ್ ಎಸ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನವಿದೆ.
ಒಟ್ಟಾರೆ ತನ್ನ ಟೈಟಲ್, ಪೋಸ್ಟರ್‌ನಿಂದ ಸೌಂಡ್ ಮಾಡುತ್ತಿರುವ “ಜಮಾಲಿಗುಡ್ಡ’ ತೆರೆಮೇಲೆ ಹೇಗಿರಲಿದೆ ಎಂಬ ಕುತೂಹಲಕ್ಕೆ ಸೆಪ್ಟೆಂಬರ್‌ನಲ್ಲಿ ತೆರೆ ಬೀಳಲಿದೆ.