
ಪಾರ್ಟ್-2 ಆಯ್ತು ಈಗ ಪಾರ್ಟ್-3 ಟ್ರೆಂಡ್
Team Udayavani, Mar 28, 2023, 4:29 PM IST

ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಬದಲಾಗುತ್ತಲೇ ಇರುತ್ತದೆ. ಆಯಾ ಕಾಲಕ್ಕೆ ತಕ್ಕಂತೆ ಪ್ರೇಕ್ಷಕರ ಹಾಗೂ ಸಿನಿಮಾ ಮಂದಿಯ ಮನಸ್ಥಿತಿಯೂ ಬದಲಾಗುತ್ತದೆ. ಅದೊಂದು ಸಮಯವಿತ್ತು. ಒಂದು ಸಿನಿಮಾ ಗೆದ್ದರೆ ಅದರ ಖುಷಿಯನ್ನು ಸಂಭ್ರಮಿಸಿ, ಹೊಸ ಸಿನಿಮಾದತ್ತ ನಿರ್ದೇಶಕರು ವಾಲುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಸಿನಿಮಾವೊಂದು ಹಿಟ್ ಆದರೆ, ಆ ಚಿತ್ರದ ಮುಂದುವರೆದ ಭಾಗ ಮಾಡಲು ಸಿನಿಮಾ ಮಂದಿ ರೆಡಿಯಾಗಿದ್ದಾರೆ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಪಾರ್ಟ್-2 ನಡೆಯುತ್ತಿದ್ದು, ಈಗ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಸಿನಿಮಾ ಮಂದಿ ಪಾರ್ಟ್-3ನತ್ತ ವಾಲುತ್ತಿದ್ದಾರೆ. ಈಗಾಗಲೇ “ಕೆಜಿಎಫ್-3′ ಬರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ “ಲವ್ ಮಾಕ್ಟೇಲ್- 3′ ಸರದಿ.
ಹೌದು, ನಾಯಕ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಮಾಡಿದ “ಲವ್ ಮಾಕ್ಟೇಲ್’ ಚಿತ್ರ ಹಿಟ್ ಆಗುವ ಮೂಲಕ ಅವರು “ಲವ್ ಮಾಕ್ಟೇಲ್-2’ಗೆ ಮುಂದಾದರು. ಅವರ ಅದೃಷ್ಟಕ್ಕೆ “ಲವ್ ಮಾಕ್ಟೇಲ್-2′ ಕೂಡಾ ಹಿಟ್ ಆಯಿತು. ಈಗ ಕೃಷ್ಣ “ಲವ್ ಮಾಕ್ಟೇಲ್-3′ ಚಿತ್ರ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಚಿತ್ರದ ಬರವಣಿಗೆ ಕೆಲಸಗಳು ಆರಂಭವಾಗಿದೆ. ಎಂದಿನಂತೆ ಈ ಚಿತ್ರದಲ್ಲೂ ಕೃಷ್ಣ ಹಾಗೂ ಮಿಲನಾ ದಂಪತಿ ಜೊತೆಯಾಗಿ ಕೆಲಸ ಮಾಡಲಿದ್ದಾರೆ.
ಈ ಮೂಲಕ ಮತ್ತೂಂದು ಗೆಲುವಿನ ನಿರೀಕ್ಷೆಯಲ್ಲಿದೆ ಜೋಡಿ. “ಲವ್ ಮಾಕ್ಟೇಲ್’ ಸಿನಿಮಾ ಹಿಟ್ ಆದ ನಂತರ ಕನ್ನಡ ಚಿತ್ರರಂಗದಲ್ಲಿ ಲವರ್ ಬಾಯ್ ಆಗಿ ಬೇಡಿಕೆಯ ನಟ ಎನಿಸಿಕೊಂಡ ಕೃಷ್ಣ ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಈಗಾಗಲೇ ಕೃಷ್ಣ ನಟನೆಯ “ದಿಲ್ ಪಸಂದ್’, “ಲವ್ ಬರ್ಡ್ಸ್’ ಚಿತ್ರಗಳು ತೆರೆಕಂಡಿದ್ದು, ಈಗ “ಶುಗರ್ ಫ್ಯಾಕ್ಟರಿ’, “ಕೌಸಲ್ಯ ಸುಪ್ರಜಾ ರಾಮ’, “ಲವ್ ಮೀ ಔರ್ ಹೇಟ್ ಮೀ’ ಸೇರಿದಂತೆ ಇನ್ನೊಂದೆರಡು ಸಿನಿಮಾಗಳಲ್ಲಿ ಕೃಷ್ಣ ಬಿಝಿಯಾಗಿದ್ದಾರೆ.
ಟಾಪ್ ನ್ಯೂಸ್
