

Team Udayavani, Mar 29, 2024, 5:12 PM IST
“ಪಾರ್ಟ್ನರ್’- ಹೀಗೊಂದು ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದ್ದು, ಇತ್ತೀಚೆಗೆ ಚಿತ್ರದ ಟ್ರೇಲರ್ ಹಾಗೂ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಿತು. ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರು ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು.
ಟಿ.ಆರ್.ಗೌತಮ್ ಗೌಡ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಚಿತ್ರವನ್ನು ನವಿಲು ವಾಯುಪುತ್ರ ಕಂಬೈನ್ಸ್ ಬ್ಯಾನರ್‌ನಡಿ ನಾಗರಾಜ.ಆರ್ ಹಾಗೂ ಟಿ.ಕೆ.ರವಿ ಸೇರಿ ನಿರ್ಮಾಣ ಮಾಡಿದ್ದಾರೆ. ಚೇತಸ್ ಆರ್. ಮತ್ತು ಸತೀಶ್ ಕೃಷ್ಣ ಶೆಟ್ಟಿ ಚಿತ್ರದ ನಾಯಕರಾಗಿ ನಟಿಸಿದ್ದು, ಅಗ್ನಿಸಾಕ್ಷಿ ಖ್ಯಾತಿಯ ಸುಕೃತಾನಾಗ್ ಹಾಗೂ ಪ್ರೀತಿ ಮಿರಾಜ್ಕರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ ಗೌತಮ್ ಗೌಡ ಮಾತನಾಡಿ, “ಇದು ನನ್ನ ಮೊದಲ ಚಿತ್ರ. ಇಬ್ಬರು ಸ್ನೇಹಿತರ, ಸ್ನೇಹದ ಸುತ್ತ ನಡೆಯುವ ಕಥೆ ಇದಾಗಿದ್ದು, ಫ್ಯಾಮಿಲಿ ಎಮೋಶನ್ಸ್, ಲವ್ ಸ್ಟೋರಿ, ತಾಯಿ ಸೆಂಟಿಮೆಂಟ್..ಎಲ್ಲ ಅಂಶಗಳು ಈ ಚಿತ್ರದಲ್ಲಿದೆ. ಯಾವುದನ್ನೂ ಅನವಶ್ಯಕವಾಗಿ ಸೇರಿಸಿಲ್ಲ, ಚಿತ್ರವನ್ನು ಕೋವಿಡ್ ಸಮಯದಲ್ಲಿ ಶುರು ಮಾಡಿದ್ದೆವು. 15 ದಿನ ಶೂಟಿಂಗ್ ನಂತರ ನಿಲ್ಲಿಸಬೇಕಾಯಿತು. ಚಿತ್ರದಲ್ಲಿ ಬಲರಾಜವಾಡಿ, ಶಿವರಾಜ್ ಕೆ.ಆರ್. ಆರ್.ಪೇಟೆ ಪ್ರಮುಖ ಪಾತ್ರಗಳಲ್ಲಿದ್ದಾರೆ ‘ಎಂದರು.
ನಾಯಕ ಹಾಗೂ ನಿರ್ಮಾಪಕರೂ ಆದ ಚೇತಸ್, “ನಮ್ಮ ಚಿತ್ರ ಇಲ್ಲಿಯವರೆಗೆ ಬಂದಿದೆ ಎಂದರೆ, ಚಿತ್ರತಂಡ ನೀಡಿದ ಸಹಕಾರವೇ ಕಾರಣ. ನಾನು ಅರ್ಜುನ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎನ್ನುವುದು ಅವರ ಮಾತು. “ಕೃಷ್ಣ, ಅರ್ಜುನರ ನಡುವಿನ ಸ್ನೇಹ ಸಂಬಂಧ ಹೇಗಿತ್ತು ಅಂತ ಚಿತ್ರದಲ್ಲಿ ತೋರಿಸಿದ್ದೇವೆ’ ಎನ್ನುವುದು ಮತ್ತೂಬ್ಬ ನಾಯಕ ಸತೀಶ್ ಕೃಷ್ಣ ಮಾತು.
ನಾಯಕಿ ಸುಕೃತಾ ಮಾತನಾಡಿ, “ಕಿರುತೆರೆ ಯಲ್ಲಿ ಅಭಿನಯಿಸಿದ್ದ ನನಗೂ ಇದು ಮೊದಲ ಚಿತ್ರ. ಬಜಾರಿ ಥರದ, ರಾಬರಿ ಮಾಡುತ್ತ ಓಡಾಡಿಕೊಂಡಿರೋ ಹುಡುಗಿ ಪಾತ್ರ ತನ್ನದು’ ಎಂದು ಹೇಳಿದರು.
Ad
Saroja Devi Funeral: ಹುಟ್ಟೂರಿನ ಮಣ್ಣಿನಲ್ಲಿ ‘ಅಭಿನಯ ಸರಸ್ವತಿ’ ಬಿ.ಸರೋಜಾದೇವಿ ಲೀನ
ʼKantara Chapter-1ʼ ಪ್ರಚಾರಕ್ಕೆ ಕೌಂಟ್‌ಡೌನ್ ಶುರು.. ಅಪ್ಡೇಟ್ ಕೊಟ್ಟ ಹೊಂಬಾಳೆ
ಬೆಳ್ಳಿಪರದೆಯ ಬೆರಗು ಕರುನಾಡಿನ ಮಹಿಳಾ ಸೂಪರ್‌ಸ್ಟಾರ್ ಬಿ.ಸರೋಜಾ ದೇವಿ
ಅಭಿನಯ ಸರಸ್ವತಿ, ಹಿರಿಯ ನಟಿ ಬಿ.ಸರೋಜಾದೇವಿ ನಿಧನಕ್ಕೆ ಗಣ್ಯರ ಕಂಬನಿ, ಇಂದು ಅಂತ್ಯಕ್ರಿಯೆ
ಸರೋಜಾದೇವಿ ಕನ್ನಡದ ಪ್ರಥಮ ಲೇಡಿ ಸೂಪರ್‌ಸ್ಟಾರ್
You seem to have an Ad Blocker on.
To continue reading, please turn it off or whitelist Udayavani.