
ಕ್ರೇಜಿ ಟೀಸರ್ ನಲ್ಲಿ ಗ್ಲಾಮರಸ್ ಪಾವನಾ
Team Udayavani, May 31, 2021, 9:44 AM IST

ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ 60ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳಿಗಾಗಿ ಟೀಸರ್ ವೊಂದನ್ನು ಬಿಡುಗಡೆ ಮಾಡಿದ್ದು, ಆ ಟೀಸರ್ ನಲ್ಲಿ ತಮ್ಮ ಮುಂದಿನ ಹೊಸ ಪ್ರಾಜೆಕ್ಟ್ಗಳ ಸಣ್ಣ ಝಲಕ್ ನೀಡಿದ್ದಾರೆ.
ಹೌದು, ರವಿಚಂದ್ರನ್ ಮೂರು ಹೊಸ ಸಿನಿಮಾಗಳನ್ನು ಅನೌನ್ಸ್ ಮಾಡಿದ್ದಾರೆ. “ಗಾಡ್’, “60′ ಹಾಗೂ “ಬ್ಯಾಡ್ ಬಾಯ್ಸ್’ ಎಂಬ ಟೈಟಲ್ ನಡಿ ಮೂರು ಸಿನಿಮಾಗಳನ್ನು ಘೋಷಿಸಿಕೊಂಡಿದ್ದು, ಇದನ್ನು ಟೀಸರ್ ನಲ್ಲಿ ವಿಭಿನ್ನವಾಗಿ ತೋರಿಸಿದ್ದಾರೆ. ಒಂದಷ್ಟು ಕೋಟ್ಸ್ ಗಳ ಮೂಲಕವೂ ಟೀಸರ್ ಗಮನ ಸೆಳೆದಿದೆ. ಎರಡು ಚಿತ್ರಗಳಲ್ಲಿ ರವಿ ಚಂದ್ರನ್ ಅವರು ನಟಿಸಿದರೆ, ಮತ್ತೂಂದು ಚಿತ್ರ “ಬ್ಯಾಡ್ ಬಾಯ್ಸ್ ’ನಲ್ಲಿ ಅವರ ಪುತ್ರರಾದ ಮನುರಂಜನ್ ಹಾಗೂ ವಿಕ್ರಮ್ ಕಾಣಿಸಿಕೊಳ್ಳಲಿದ್ದಾರೆ.
ಟೀಸರ್ ನಲ್ಲಿ ಇವರಿಬ್ಬರನ್ನು ತೋರಿಸಿದ್ದಾರೆ ರವಿಚಂದ್ರನ್. ಇನ್ನು, ನಟಿ ಪಾವನಾ ಗೌಡ ಸಖತ್ ಬೋಲ್ಡ್ ಲುಕ್ ಮೂಲಕ ಟೀಸರ್ ನಲ್ಲಿ ಗಮನ ಸೆಳೆದಿದ್ದಾರೆ.
ಎಲ್ಲಾ ಓಕೆ, ಈ ಸಿನಿಮಾಗಳು ಯಾವಾಗ ಆರಂಭವಾಗುತ್ತವೆ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಈ ನಡುವೆಯೇ ರವಿಚಂದ್ರನ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ನಟನೆಯ “ಕನ್ನಡಿಗ’ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಇದರಲ್ಲಿ ಲಿಪಿಕಾರನಾಗಿ ನಟಿಸಿದ್ದಾರೆ. ರವಿಚಂದ್ರನ್ ನಿರ್ದೇಶನದ “ರವಿ ಬೋಪಣ್ಣ’ ಚಿತ್ರ ಕೂಡಾ ಬಿಡುಗಡೆಯ ಹಂತಕ್ಕೆ ಬಂದಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
ಹೊಸ ಸೇರ್ಪಡೆ

‘ಪ್ರಮುಖ ಪಾತ್ರಕ್ಕಾಗಿ…. ‘: ಕಾಸ್ಟಿಂಗ್ ಕೌಚ್ ಕರಾಳ ಅನುಭವ ಬಿಚ್ಚಿಟ್ಟ ನಯನತಾರಾ

ಹಳೆಯಂಗಡಿ ರೈಲ್ವೇ ಗೇಟ್ನಲ್ಲಿಯೇ ಉಳಿದ ಗೂಡ್ಸ್ ಡಬ್ಬಿಗಳು…!

ಸಿ.ಟಿ ರವಿ ವಿರುದ್ಧ ಸ್ಪರ್ಧಿಸಿದರೆ ಅಡಿಕೆ ತೋಟ ಮಾರಿ 1 ಕೋಟಿ ರೂ ಕೊಡುತ್ತೇನೆ: ಸಿದ್ದರಾಮಯ್ಯಗೆ ಆಹ್ವಾನ

‘ಟಿಪ್ಪು ನಿಜ ಕನಸು’ ನಾಟಕದ ವಿರುದ್ದದ ದೂರು ಹಿಂಪಡೆದ ಅರ್ಜಿದಾರ: ಅಡ್ಡಂಡ ಸಂತಸ

‘ನಟ ಭಯಂಕರ’ನಿಗೆ ತಲೆಬಿಸಿ ತಂದ ರಾಸಲೀಲೆ ಸಿಡಿ..!