ಐದು ಕಥೆಗಳ ಸುತ್ತ ಪೆಂಟಗನ್; ಭರವಸೆ ಮೂಡಿಸಿದ ಟ್ರೇಲರ್

Team Udayavani, Mar 25, 2023, 11:59 AM IST

pentagon movie trailer

ಗುರುದೇಶಪಾಂಡೆ ನಿರ್ಮಾಣದ “ಪೆಂಟಗನ್‌’ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದ್ದು, ಮೆಚ್ಚುಗೆ ಪಡೆಯುತ್ತಿದೆ. ಈ ಮೂಲಕ ಪ್ರೇಕ್ಷಕರಿಗೆ ಚಿತ್ರ ಹೊಸ ಅನುಭವ ನೀಡುವ ಭರವಸೆ ಮೂಡಿಸಿದೆ. ಒಂದೇ ಚಿತ್ರದಲ್ಲಿ ಐದು ಕಥೆಗಳನ್ನು ಹೇಳುವ ಅಂಥಾಲಜಿ ಸಿನಿಮಾ ಇದಾಗಿದ್ದು, ಈ ಚಿತ್ರವನ್ನು ಗುರು ದೇಶಪಾಂಡೆ ಅವರು ತಮ್ಮ ಜಿ.ಅಕಾಡೆಮಿ ಅಡಿಯಲ್ಲಿ ನಿರ್ಮಿಸಿದ್ದಾರೆ. ಚಿತ್ರ ಏಪ್ರಿಲ್‌ 7ಕ್ಕೆ ತೆರೆಕಾಣುತ್ತಿದೆ.

ಐದು ವಿಭಿನ್ನ ಕಥೆಗಳನ್ನು ಒಳಗೊಂಡ ಈ ಚಿತ್ರದಲ್ಲಿ ಬರುವ 5 ಕಥೆಗಳಿಗೆ ಆಕಾಶ್‌ ಶ್ರೀವತ್ಸ, ಚಂದ್ರಮೋಹನ್‌, ರಾಘು ಶಿವಮೊಗ್ಗ, ಕಿರಣ್‌ ಕುಮಾರ್‌ ಹಾಗೂ ಗುರು ದೇಶಪಾಂಡೆ ಹೀಗೆ ಐದು ಜನ ನಿರ್ದೇಶಕರುಗಳು ಆ್ಯಕ್ಷನ್‌-ಕಟ್‌ ಹೇಳಿದ್ದಾರೆ.

ಮೈಸೂರು ಪಾಕ್‌, ಕಾಮಾತುರಾಣಾ ನಭಯಂ, ನಲಜ್ಜ, ದೋಣಿಸಾಗಲಿ, ಮಿಸ್ಟರ್‌ ಗೋಪಿ ಕೆಫೆ ಸೇರಿ ಐದು ಕಥೆಗಳಿರುವ ಈ ಚಿತ್ರದಲ್ಲಿ ಹಿರಿಯನಟ ಪ್ರಕಾಶ್‌ ಬೆಳವಾಡಿ, ಪ್ರಮೋದ್‌ ಶೆಟ್ಟಿ, ಅನುಷಾ ರೈ, ವಂಶಿಕೃಷ್ಣ, ಅಪೂರ್ವ ಮುಂತಾದವರು ಅಭಿನಯಿಸಿದ್ದಾರೆ.

ಇತ್ತೀಚೆಗೆ ನಡೆದ ಟ್ರೇಲರ್‌ ರಿಲೀಸ್‌ ಕಾರ್ಯಕ್ರಮದಲ್ಲಿ ಚಿತ್ರತಂಡ ಅನುಭವ ಹಂಚಿಕೊಂಡಿತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ನಿರ್ದೇಶಕರಾದ ಮಹೇಶ್‌ ಸುಖಧರೆ ಹಾಗೂ ಟಿ.ಎಸ್‌.ನಾಗಾಭರಣ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

“ಪೆಂಟಗನ್‌’ ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕ ಕಂ ನಿರ್ದೇಶಕ ಗುರು ದೇಶಪಾಂಡೆ, “ಈ ಚಿತ್ರವನ್ನು ನಾವು 2020ರಲ್ಲಿ ಶುರು ಮಾಡಿದೆವು. ಎರಡೂ ಕೋವಿಡ್‌ ಅಲೆಗಳನ್ನು ದಾಟಿ ಈಗ ಬಿಡುಗಡೆಯ ಹಂತಕ್ಕೆ ಬಂದಿದ್ದೇವೆ. ಚಿತ್ರದಲ್ಲಿ ಬರುವ ಡೆತ್‌ ಥೀಮ್‌ 5 ಕಥೆಗಳಲ್ಲೂ ಕಾಮನ್‌ ಆಗಿದ್ದು, ಈ ಐದೂ ಕತೆಗಳ ಕೊನೆಯಲ್ಲಿ ಕಾಗೆಯೊಂದು ಕತೆಗಳಿಗೆ ಲಿಂಕ್‌ ಮಾಡುತ್ತಾ ಹೋಗುತ್ತದೆ. ಅಲ್ಲದೇ ಸಾಕಷ್ಟು ಹೊಸ ಪ್ರತಿಭೆಗಳಿಗೆ ಈ ಚಿತ್ರದ ಮೂಲಕ ಅವಕಾಶ ನೀಡಿದ್ದೇವೆ’ ಎಂದು ಹೇಳಿದರು.

ಗ್ರಾಮೀಣ ಸೊಗಡಿನ ದೋಣಿ ಸಾಗಲಿ ಕಥೆಯನ್ನು ಕಿರಣ್‌ ಕುಮಾರ್‌ ನಿರ್ದೇಶಿಸಿದ್ದು, ಇದರ ಮುಖ್ಯ ಪಾತ್ರದಲ್ಲಿ ಗುರುದೇಶಪಾಂಡೆ ಪತ್ನಿ ಕೃತಿಕಾ ದೇಶಪಾಂಡೆ, ರವಿಶಂಕರ್‌ ಇವರೊಂದಿಗೆ ವಂಶಿ, ಅನುಶಾ ರೈ ಮುಂತಾದವರು ನಟಿಸಿದ್ದಾರೆ. ಉಳಿದಂತೆ ಚಿತ್ರದಲ್ಲಿ ಪ್ರಕಾಶ್‌ ಬೆಳವಾಡಿ, ತನಿಶಾ, ಪ್ರೇರಣಾ ಕಂಬಂ, ಕಿರಣ್‌ ನಾಯಕ್, ಕಿಶೋರ್‌, ರೂಪೇಶ್‌ ರಾಜಣ್ಣ, ಅಶ್ವಿ‌ನಿ, ನಟ ಪೃಥ್ವಿ ಅಂಬರ್‌ ಮುಂತಾದವರು ಅಭಿನಯಿಸಿದ್ದಾರೆ.

ಟಾಪ್ ನ್ಯೂಸ್

ಕಾಸರಗೋಡು: ಸ್ಫೋಟಕ ಪತ್ತೆ ಪ್ರಕರಣ… ಆರೋಪಿಗೆ ನ್ಯಾಯಾಂಗ ಬಂಧನ

ಕಾಸರಗೋಡು: ಸ್ಫೋಟಕ ಪತ್ತೆ ಪ್ರಕರಣ… ಆರೋಪಿಗೆ ನ್ಯಾಯಾಂಗ ಬಂಧನ

ಕುಲಶೇಖರ: ಸಿಗರೇಟ್‌ ಸೇದುವ ವಿಚಾರದಲ್ಲಿ ಗಲಾಟೆ

ಕುಲಶೇಖರ: ಸಿಗರೇಟ್‌ ಸೇದುವ ವಿಚಾರದಲ್ಲಿ ಗಲಾಟೆ… ಹೊಡೆದಾಟ

police crime

Goa ; ಅಪಹರಣಕ್ಕೊಳಗಾದ ಬಾಲಕಿಯರಿಬ್ಬರ ರಕ್ಷಣೆ; ಹುಬ್ಬಳ್ಳಿಯ ಇಬ್ಬರು ಅರೆಸ್ಟ್

1-wwwwqe

Congress Guarantees ದೇಶವನ್ನು ದಿವಾಳಿಯಾಗಿಸುತ್ತದೆ: ಪ್ರಧಾನಿ ಮೋದಿ

smi irani

Missing: ಕಾಂಗ್ರೆಸ್ ಟ್ವೀಟ್ ಗೆ ಕಟುವಾಗಿ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ

ಅಹ್ಮದ್‌ ನಗರ ಇನ್ನು ಮುಂದೆ ಅಹಲ್ಯಾದೇವಿ ನಗರ: ಮುಖ್ಯಮಂತ್ರಿ ಏಕನಾಥ್‌ ಶಿಂಧೆ

ಅಹ್ಮದ್‌ ನಗರ ಇನ್ನು ಮುಂದೆ ಅಹಲ್ಯಾದೇವಿ ನಗರ: ಮುಖ್ಯಮಂತ್ರಿ ಏಕನಾಥ್‌ ಶಿಂಧೆ

ಲೋಕಾಯುಕ್ತ ದಾಳಿ: ಇಬ್ಬರು ಸರಕಾರಿ ಅಧಿಕಾರಿಗಳ ಮನೆಯಲ್ಲಿತ್ತು ಕೋಟಿ ಕೋಟಿ ಮೌಲ್ಯದ ಸೊತ್ತುಗಳು

ಲೋಕಾಯುಕ್ತ ದಾಳಿ: ಇಬ್ಬರು ಸರಕಾರಿ ಅಧಿಕಾರಿಗಳ ಮನೆಯಲ್ಲಿತ್ತು ಕೋಟಿ ಕೋಟಿ ಮೌಲ್ಯದ ಸೊತ್ತುಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಟೀಸರ್‌ ಮತ್ತು ಹಾಡಿನಲ್ಲಿ ಅರಳಿದ ಹೂವುಗಳು

ಟೀಸರ್‌ ಮತ್ತು ಹಾಡಿನಲ್ಲಿ ಅರಳಿದ ಹೂವುಗಳು

ರಾಹುಲ್‌ ಬೋಸ್‌ ಮತ್ತೆ ಕನ್ನಡದತ್ತ..

Actor Rahul Bose:ರಾಹುಲ್‌ ಬೋಸ್‌ ಮತ್ತೆ ಕನ್ನಡದತ್ತ..

ಬರ್ತ್‌ಡೇ ಸಂಭ್ರಮದಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌

ಬರ್ತ್‌ಡೇ ಸಂಭ್ರಮದಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌

ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ನಟಿ ರಚಿತಾ ರಾಮ್ ಭೇಟಿ: ಚಿತ್ರಗಳ ಯಶಸ್ಸಿಗೆ ಪ್ರಾರ್ಥನೆ

ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ನಟಿ ರಚಿತಾ ರಾಮ್ ಭೇಟಿ: ಚಿತ್ರಗಳ ಯಶಸ್ಸಿಗೆ ಪ್ರಾರ್ಥನೆ

darbar

ಜೂ.09ಕ್ಕೆ ವಿ.ಮನೋಹರ್‌ ನಿರ್ದೇಶನದ ‘ದರ್ಬಾರ್‌’ ತೆರೆಗೆ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

ಕಾಸರಗೋಡು: ಸ್ಫೋಟಕ ಪತ್ತೆ ಪ್ರಕರಣ… ಆರೋಪಿಗೆ ನ್ಯಾಯಾಂಗ ಬಂಧನ

ಕಾಸರಗೋಡು: ಸ್ಫೋಟಕ ಪತ್ತೆ ಪ್ರಕರಣ… ಆರೋಪಿಗೆ ನ್ಯಾಯಾಂಗ ಬಂಧನ

ಕುಲಶೇಖರ: ಸಿಗರೇಟ್‌ ಸೇದುವ ವಿಚಾರದಲ್ಲಿ ಗಲಾಟೆ

ಕುಲಶೇಖರ: ಸಿಗರೇಟ್‌ ಸೇದುವ ವಿಚಾರದಲ್ಲಿ ಗಲಾಟೆ… ಹೊಡೆದಾಟ

1-sad-dsa

Bhimanna T Naik ದುಃಖ ತಪ್ತ ಕುಟುಂಬಕ್ಕೆ‌ ಸಕಾಲಿಕ ನೆರವಾದ ಶಾಸಕ

police crime

Goa ; ಅಪಹರಣಕ್ಕೊಳಗಾದ ಬಾಲಕಿಯರಿಬ್ಬರ ರಕ್ಷಣೆ; ಹುಬ್ಬಳ್ಳಿಯ ಇಬ್ಬರು ಅರೆಸ್ಟ್

1-wwwwqe

Congress Guarantees ದೇಶವನ್ನು ದಿವಾಳಿಯಾಗಿಸುತ್ತದೆ: ಪ್ರಧಾನಿ ಮೋದಿ