

Team Udayavani, Jan 9, 2020, 7:01 AM IST
ಪ್ರೀತಿಯನ್ನು ಪರ್ಸೆಂಟೇಜ್ ಲೆಕ್ಕದಲ್ಲಿ ಅಳೆಯೋಕೆ ಸಾಧ್ಯನಾ? ಇಂಥದ್ದೊಂದು ಪ್ರಶ್ನೆ ಕೇಳಿದರೆ, ಬಹುತೇಕರು ತಲೆ ಕೆರೆದುಕೊಳ್ಳೋಕೆ ಶುರು ಮಾಡಬಹುದು. ಆದರೆ ಇಲ್ಲೊಂದು ಚಿತ್ರತಂಡ, ಪ್ರೀತಿಯನ್ನು ಪರ್ಸೆಂಟೇಜ್ ಲೆಕ್ಕದಲ್ಲಿ ಅಳೆಯೋಕೆ ಸಾಧ್ಯ ಅನ್ನೋದನ್ನ ತನ್ನ ಚಿತ್ರದ ಮೂಲಕ ಹೇಳಲು ಹೊರಟಿದೆ. ಹೌದು, ಆ ಚಿತ್ರದ ಹೆಸರು “ಪ್ರಸೆಂಟ್ ಪ್ರಪಂಚ 0% ಲವ್’ ಈ ಹಿಂದೆ “ಸಂಯುಕ್ತ-2′ ಚಿತ್ರವನ್ನು ನಿರ್ದೇಶಿಸಿದ್ದ ಅಭಿರಾಮ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಅದೇ “ಸಂಯುಕ್ತ-2′ ಚಿತ್ರವನ್ನು ನಿರ್ಮಿಸಿದ್ದ ಅರ್ಜುನ್ ಮಂಜುನಾಥ್ ಈ ಚಿತ್ರದಲ್ಲಿ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಸದ್ಯ ಭರದಿಂದ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಇದೇ ವೇಳೆ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಮಾಧ್ಯಮಗಳನ್ನು ಆಹ್ವಾನಿಸಿದ್ದ ಚಿತ್ರತಂಡ, “ಪ್ರಸೆಂಟ್ ಪ್ರಪಂಚ 0% ಲವ್’ ಚಿತ್ರದ ಬಗ್ಗೆ ಒಂದಷ್ಟು ಮಾತನಾಡಿತು. “ಇಂದು ಪ್ರಪಂಚದಲ್ಲಿ ಪ್ರೀತಿ ಅನ್ನೋದು ಶೇಕಡ ಸೊನ್ನೆ ಆಗಿದೆ.
ಅದು ಹೇಗೆ ಅನ್ನೋದನ್ನು ನಾವು ಈ ಚಿತ್ರದಲ್ಲಿ ಹೇಳುತ್ತಿದ್ದೇವೆ. ಇಂದಿನ ಕೌಟುಂಬಿಕ ಸಂಬಂಧಗಳು, ಜೀವನ ಶೈಲಿ ಎಲ್ಲವನ್ನೂ ಚಿತ್ರದಲ್ಲಿ ಹೇಳುತ್ತಿದ್ದೇವೆ. ಟೆಕ್ಕಿಗಳ ಬದುಕನ್ನ ಇಟ್ಟುಕೊಂಡು ಕಥೆ ಯನ್ನು ಹೇಳುತ್ತಿದ್ದೇವೆ. ಅದೆಲ್ಲ ವನ್ನು ನೋಡಿದಾಗ ಕೊನೆಯಲ್ಲಿ ಪ್ರೇಕ್ಷಕರಿಗೆ, ನಾವು ಯಾಕೆ ಇಂಥದ್ದೊಂದು ಟೈಟಲ್ ಇಟ್ಟಿದ್ದೇವೆ ಅನ್ನೋದು ಅರ್ಥ ವಾಗುತ್ತದೆ’ ಎನ್ನುತ್ತದೆ ಚಿತ್ರತಂಡ. “ಆ್ಯಕ್ಷನ್ ಕಂ ರೊಮ್ಯಾಂಟಿಕ್-ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬರುತ್ತಿರುವ “ಪ್ರಸೆಂಟ್ ಪ್ರಪಂಚ 0% ಲವ್’ ಚಿತ್ರದಲ್ಲಿ ಕುತೂಹಲದ ಅಂಶಗಳು,
ಮನಸ್ಸಿಗೆ ಮುಟ್ಟುವ ಭಾವನೆ ಗಳು, ನವಿರಾದ ಹಾಸ್ಯ ಕೊನೆಗೆ ಅರ್ಥಪೂರ್ಣ ವಾದ ಸಂದೇಶ ಎಲ್ಲವೂ ಇದೆ. ನಾವು ಊಹೆ ಮಾಡಿದ ಸನ್ನಿವೇಶಗಳು ಬರುತ್ತದೆ ಅಂದುಕೊಂಡರೆ, ಪರದೆ ಮೇಲೆ ಬೇರೆಯದೆ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಅದು ಪ್ರಸಕ್ತ ಸನ್ನಿವೇಶಕ್ಕೆ ಹೇಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ಹೇಳುವುದೇ ಚಿತ್ರದ ಸಸ್ಪೆನ್ಸ್’ ಎನ್ನುವುದು ಚಿತ್ರದ ಬಗ್ಗೆ ನಿರ್ದೇಶಕರ ವಿವರಣೆ. ನವ ನಾಯಕ ಅರ್ಜುನ್ ಮಂಜುನಾಥ್ ಚಿತ್ರದಲ್ಲಿ ಲವರ್ ಬಾಯ್ ಹಾಗೂ ಸಂಸಾರಸ್ಥನಾಗಿ ಎರಡು ಶೇಡ್‌ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಸಂಭ್ರಮ ಶ್ರೀ, ಅಕ್ಷರಾ ನಾಯಕಿ ಯರಾಗಿದ್ದಾರೆ.
ಉಳಿದಂತೆ ಎಸ್. ನಾರಾಯಣ್, ಓಂಪ್ರಕಾಶ್‌ರಾವ್, ಗೋವಿಂದೇಗೌಡ, ಯಶಸ್ ಅಭಿ ಮೊದಲಾದವರು ಅಭಿನಯಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಕೆ.ವಿ. ರವಿಚಂದ್ರ ಸಂಗೀತ ಸಂಯೋ ಜನೆಯಿದ್ದು, ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ. ಚಿತ್ರಕ್ಕೆ ಈಶ್ವರಿ ಸುರೇಶ್ ಛಾಯಾಗ್ರಹಣ, ವೆಂಕಿ ಯು.ಡಿ.ವಿ ಸಂಕಲನವಿದೆ. ಹಾಡುಗಳಿಗೆ ಹರಿಕೃಷ್ಣ ನೃತ್ಯ ಸಂಯೋ ಜನೆ ಮತ್ತು ಕುಂಗ್‌ಫು ಚಂದ್ರು ಸಾಹಸ ಸಂಯೋ ಜನೆಯಿದೆ. ಕೃಷ್ಣಮೂರ್ತಿ.ಎಲ್ ಮತ್ತು ರವಿಕುಮಾರ್ ಹೆಚ್.ಪಿ ಜಂಟಿಯಾಗಿ ನಿರ್ಮಿಸುತ್ತಿರುವ “ಪ್ರಸೆಂಟ್ ಪ್ರಪಂಚ 0% ಲವ್’ ಚಿತ್ರವನ್ನು ಮುಂಬರುವ ಪ್ರೇಮಿಗಳ ದಿನದಂದು ತೆರೆಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ.
Ad
Kannada Movies: ಟ್ರೇಲರ್‌ನಲ್ಲಿ ʼಜೂನಿಯರ್ʼ, ʼಎಕ್ಕʼ ಮಿಂಚು
Toxic Movie: ಯಶ್ ʼಟಾಕ್ಸಿಕ್ʼಗೆ ಮ್ಯೂಸಿಕ್ ನೀಡಲು ದೊಡ್ಡ ಸಂಭಾವನೆ ಕೇಳಿದ ಅನಿರುದ್ಧ್?
SarojaDevi;ಯಶಸ್ಸಿನ ಉತ್ತುಂಗದಲ್ಲೇ ಮದುವೆ..ಪತಿ ನಿಧನ,ಕಷ್ಟದಲ್ಲೇ ದಿನ ಕಳೆದ ಗಟ್ಟಿಗಿತ್ತಿ
Veteran actress B.Saroja Devi: ಕನ್ನಡದ ಹಿರಿಯ ನಟಿ ಬಿ.ಸರೋಜಾ ದೇವಿ ವಿಧಿವಶ
Doora Theera Yaana: ಜೊತೆಯಾಗಿ ಹಿತವಾಗಿ…
You seem to have an Ad Blocker on.
To continue reading, please turn it off or whitelist Udayavani.