
‘ವೀರಂ’ ಟ್ರೇಲರ್‌ನಲ್ಲಿ ಪ್ರಜ್ವಲ್ ದೇವರಾಜ್ ಅಬ್ಬರ
Team Udayavani, Mar 24, 2023, 3:51 PM IST

“ನಾನೊಬ್ಬ ವಿಷ್ಣುವರ್ಧನ್ ಅಭಿಮಾನಿ. ಈ ಸಿನಿಮಾದಲ್ಲೂ ವಿಷ್ಣುವರ್ಧನ್ ಅಭಿಮಾನಿಯಾಗಿಯೇ ಅಭಿನಯಿಸಿದ್ದೇನೆ. ಇಡೀ ಸಿನಿಮಾ ವಿಷ್ಣುವರ್ಧನ್ ಅಭಿಮಾನಿಯ ಕಥೆಯ ಸುತ್ತಲೇ ಸಾಗುತ್ತದೆ. ನಮ್ಮ ನಡುವೆಯೇ ನಡೆಯುವಂಥ ಒಂದಷ್ಟು ವಿಷಯಗಳು ಈ ಸಿನಿಮಾದಲ್ಲಿದೆ. ಇಲ್ಲಿ ಆ್ಯಕ್ಷನ್, ಲವ್, ಸೆಂಟಿಮೆಂಟ್, ಎಮೋಶನ್ಸ್ ಎಲ್ಲವೂ ಇದೆ. ವಿಷ್ಣುವರ್ಧನ್ ಅಭಿಮಾನಿಗಳಿಗೆ ಖಂಡಿತವಾಗಿಯೂ ಈ ಸಿನಿಮಾ ಇಷ್ಟವಾಗುತ್ತದೆ’ ಇದು ನಟ ಪ್ರಜ್ವಲ್ ದೇವರಾಜ್ ಮಾತು.
ಅಂದಹಾಗೆ, ಪ್ರಜ್ವಲ್ ದೇವರಾಜ್ ಇಂಥದ್ದೊಂದು ಭರವಸೆಯ ಮಾತುಗಳನ್ನಾಡಿರುವುದು ಶೀಘ್ರದಲ್ಲಿಯೇ ತೆರೆಗೆ ಬರಲು ತಯಾರಾಗಿರುವ ತಮ್ಮ “ವೀರಂ’ ಸಿನಿಮಾದ ಬಗ್ಗೆ.
ಹೌದು, ಇದೇ ಏಪ್ರಿಲ್ 7ರಂದು ಪ್ರಜ್ವಲ್ ದೇವರಾಜ್ ನಾಯಕನಾಗಿ ಅಭಿನಯಿಸಿರುವ “ವೀರಂ’ ಸಿನಿಮಾ ತೆರೆಗೆ ಬರುತ್ತಿದೆ. ಸದ್ಯ ಭರದಿಂದ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ “ವೀರಂ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದೆ.
ಸಾಮಾನ್ಯವಾಗಿ ಸಿನಿಮಾವನ್ನು ಥಿಯೇಟರ್‌ನಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗುತ್ತದೆ. ಆದರೆ “ವೀರಂ’ ಚಿತ್ರತಂಡ ತಮ್ಮ ಸಿನಿಮಾದ ಟ್ರೇಲರ್ ಅನ್ನು ಕೂಡ ಸಿನಿಮಾದಂತೆಯೇ, ಬೆಂಗಳೂರಿನ ವೀರೇಶ್ ಥಿಯೇಟರ್‌ನಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಿತು. ನೂರಾರು ಸಂಖ್ಯೆಯ ಅಭಿಮಾನಿಗಳ ನಡುವೆ ನಡೆದ ಕಾರ್ಯಕ್ರಮದಲ್ಲಿ ಹಿರಿಯ ನಟ ದೇವರಾಜ್, ನಟಿ ಶ್ರುತಿ, ನಟರಾದ ಶ್ರೀನಗರ ಕಿಟ್ಟಿ, ದೀಪಕ್, ಪ್ರಣಮ್ ದೇವರಾಜ್, ರಾಗಿಣಿ ಚಂದ್ರನ್ ಮೊದಲಾದವರು ಹಾಜರಿದ್ದು, “ವೀರಂ’ ಚಿತ್ರಕ್ಕೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಾಯಕ ನಟ ಪ್ರಜ್ವಲ್ ದೇವರಾಜ್, “ಸಿನಿಮಾದ ಹೆಸರೇ ಹೇಳುವಂತೆ ಇದೊಂದು ಕಂಪ್ಲೀಟ್ ಆ್ಯಕ್ಷನ್ ಕಥಾಹಂದರದ ಸಿನಿಮಾ. ಮಧ್ಯಮ ವರ್ಗದ ಕುಟುಂಬದ ಹುಡುಗನಾಗಿ, ವಿಷ್ಣುವರ್ಧನ್ ಅಭಿಮಾನಿಯಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇನೆ. ಆ್ಯಕ್ಷನ್ ಜೊತೆಗೆ ಒಂದೊಳ್ಳೆ ಮೆಸೇಜ್ ಕೂಡಾ ಸಿನಿಮಾದಲ್ಲಿದೆ’ ಎಂದು ತಮ್ಮ ಪರಿಚಯ ಮಾಡಿಕೊಟ್ಟರು.
ಇನ್ನು ಬಿಡುಗಡೆಯಾಗಿರುವ “ವೀರಂ’ ಟ್ರೇಲರ್‌ನಲ್ಲಿ ನಟ ಪ್ರಜ್ವಲ್ ದೇವರಾಜ್ ವೀರಾವೇಶದಲ್ಲಿ ಅಬ್ಬರಿಸಿದ್ದಾರೆ. ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿದ್ದು, ಉಳಿದಂತೆ ಶ್ರೀನಗರ ಕಿಟ್ಟಿ, ದೀಪಕ್, ಅಚ್ಯುತ್ ಕುಮಾರ್, ಶ್ರುತಿ, ಗಿರೀಶ್ ಶಿವಣ್ಣ, ಬಲರಾಜವಾಡಿ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್’ ಬ್ಯಾನರಿನಲ್ಲಿ ಶಶಿಧರ್ ಕೆ. ಎಂ ನಿರ್ಮಿಸಿರುವ “ವೀರಂ’ ಸಿನಿಮಾಕ್ಕೆ ಖದರ್ ಕುಮಾರ್ ನಿರ್ದೇಶನವಿದೆ.
ಜಿ.ಎಸ್. ಕಾರ್ತಿಕ ಸುಧನ್
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
