ಓಟಿಟಿಯತ್ತ ನಟಿ ಪ್ರಣೀತಾ ಚಿತ್ತ
Team Udayavani, May 23, 2021, 9:55 AM IST
ನಟಿ ಪ್ರಣೀತಾ ಬಾಲಿವುಡ್ ಸಿನಿಮಾದಲ್ಲಿ ನಟಿಸಿರೋದು ಗೊತ್ತೇ ಇದೆ. “ಹಂಗಾಮಾ-2′ ಎಂಬ ಚಿತ್ರದಲ್ಲಿ ಪ್ರಣೀತಾ ನಟಿಸಿ, ಈಗಾಗಲೇ ಚಿತ್ರೀಕರಣ ಕೂಡಾ ಮುಗಿದು ಹೋಗಿದೆ. ಈಗ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ರಾನ್ ಮಾಡಿಕೊಂಡಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಕೊರೊನಾದಿಂದಾಗಿ ಕಳೆದ ವರ್ಷ ಬಿಡುಗಡೆ ಕಾಣಲಿಲ್ಲ. ಈ ವರ್ಷವಾದರೂ ಚಿತ್ರಮಂದಿರದಲ್ಲಿ ಬಿಡುಗಡೆಯಾಗಬಹುದು ಎಂಬ ನಂಬಿಕೆಯಲ್ಲಿದ್ದ ಚಿತ್ರತಂಡಕ್ಕೆ ನಿರಾಶೆ ಕಾದಿದೆ.
ಇದನ್ನೂ ಓದಿ:ಹಾಲುಣಿಸುವ ತಾಯಂದಿರಿಗೆ ವ್ಯಾಕ್ಸಿನೇಶನ್ನಲ್ಲಿ ಆದ್ಯತೆ ನೀಡಿ;ತಜ್ಞರ ಸಮಿತಿ ಶಿಫಾರಸ್ಸು
ಕೊರೊನಾದಿಂದಾಗಿ ಈ ವರ್ಷವೂ ಚಿತ್ರಮಂದಿರಗಳು ತೆರೆಯುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಹಾಗಾಗಿ, ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಮುಂದೆ ಬಂದಿದೆ. ಚಿತ್ರವನ್ನು ರತನ್ ಜೈನ್ ನಿರ್ಮಿಸಿದ್ದು, ಓಟಿಟಿಯಲ್ಲಿ ಬಿಡುಗಡೆಗೆ ಮುಂದಾಗಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ. ಚಿತ್ರದಲ್ಲಿ ಪ್ರಣೀತಾ ಜೊತೆ ಪರೇಶ್ ರಾವಲ್, ಶಿಲ್ಪಾ ಶೆಟ್ಟಿ, ರಾಜ್ಪಾಲ್ ಯಾದವ್ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು