Udayavni Special

ಅಭಿಷೇಕ್‌ ಚಿತ್ರಕ್ಕೆ ಪ್ರಶಾಂತ್‌ ರಾಜ್‌ ನಿರ್ದೇಶನ?

ತಯಾರಿ ಜೋರು

Team Udayavani, Sep 16, 2019, 3:03 AM IST

Abhishek

ಅಭಿಷೇಕ್‌ ಅಂಬರೀಶ್‌ “ಅಮರ್‌’ ಚಿತ್ರದ ಬಳಿಕ ಯಾವ ಚಿತ್ರ ಮಾಡುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಈಗಲೂ ಅದು ಪ್ರಶ್ನೆಯಾಗಿಯೇ ಉಳಿದಿದೆ. ಆದರೆ, ಅಭಿಷೇಕ್‌ ಅಂಬರೀಶ್‌, “ಅಮರ್‌’ ಚಿತ್ರದ ಬಳಿಕ ಸಾಕಷ್ಟು ಕಥೆ ಕೇಳಿರುವುದುಂಟು. ಆ ಪೈಕಿ ಎರಡು ಕಥೆಗಳನ್ನು ಒಪ್ಪಿದ್ದು, ಆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎಂಬ ಸುದ್ದಿಯೂ ಜೋರಾಗಿತ್ತು. ಹಾಗಾದರೆ, ಆ ಎರಡು ಕಥೆಗಳು ಯಾರು ಹೇಳಿದ್ದು? ಅಭಿಷೇಕ್‌ ಅಂಬರೀಶ್‌ ಅವರ ಎರಡನೇ ಚಿತ್ರವನ್ನು ನಿರ್ದೇಶನ ಮಾಡುವ ನಿರ್ದೇಶಕ ಯಾರು? ಈ ಪ್ರಶ್ನೆ ಸದ್ಯಕ್ಕೆ ಗಿರಕಿ ಹೊಡೆಯುತ್ತಿದೆ.

ಈಗ ಕೇಳಿಬರುತ್ತಿರುವ ಸುದ್ದಿಯೆಂದರೆ, ಅಭಿಷೇಕ್‌ ಅಂಬರೀಶ್‌ ಅವರಿಗೆ “ಜೂಮ್‌’ ಖ್ಯಾತಿಯ ನಿರ್ದೇಶಕ ಪ್ರಶಾಂತ್‌ ರಾಜ್‌ ಅವರು ಕಥೆಯೊಂದನ್ನು ಹೇಳಿದ್ದು, ಆ ಕಥೆಯ ಒನ್‌ಲೈನ್‌ ಇಷ್ಟವಾಗಿದ್ದು, ಆ ಐಡಿಯಾ ಮೇಲೆ ವರ್ಕ್‌ ನಡೆಸಿ ಎಂಬ ಗ್ರೀನ್‌ಸಿಗ್ನಲ್‌ ಕೂಡ ಅಭಿಷೇಕ್‌ ಅವರಿಂದ ಸಿಕ್ಕಿದೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಇಷ್ಟರಲ್ಲೇ ಅಭಿಷೇಕ್‌ ಅಂಬರೀಶ್‌ ಅವರ ಎರಡನೇ ಚಿತ್ರಕ್ಕೆ ಪ್ರಶಾಂತ್‌ ರಾಜ್‌ ನಿರ್ದೇಶಕರಾಗಲಿದ್ದಾರೆ.

ಈ ಕುರಿತು ಸ್ವತಃ “ಉದಯವಾಣಿ’ಗೆ ಸ್ಪಷ್ಟಪಡಿಸಿದ ನಿರ್ದೇಶಕ ಪ್ರಶಾಂತ್‌ರಾಜ್‌, “ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ. ಅಧಿಕೃತವಾಗಿ ಅನೌನ್ಸ್‌ ಮಾಡುವುದಷ್ಟೇ ಬಾಕಿ. ಒನ್‌ಲೈನ್‌ ಕೇಳಿದ ಅವರು, ಐಡಿಯಾ ಚೆನ್ನಾಗಿದೆ. ಇದನ್ನು ಮುಂದುವರೆಸಿ ಎಂದಿದ್ದಾರೆ. ಇದೊಂದು ಪಕ್ಕಾ ಕಮರ್ಷಿಯಲ್‌ ಸಿನಿಮಾ ಆಗಿದ್ದು, ಮಾಸ್‌ ಎಲಿಮೆಂಟ್ಸ್‌ ಇರಲಿದೆ. ಕಲರ್‌ಫ‌ುಲ್‌ ಸಿನಿಮಾ ಕೊಡುವ ಉದ್ದೇಶದಿಂದ ಹೊಸಬಗೆಯ ಕಥೆ ಮಾಡಿದ್ದೇನೆ. ತುಂಬಾ ಅದ್ಧೂರಿಯಾಗಿ, ಹೊಸತನದೊಂದಿಗೆ ಚಿತ್ರ ಮಾಡುವ ಯೋಚನೆ ಇದೆ.

ಇದು ನನ್ನ ಏಳನೇ ಚಿತ್ರ ಆಗಲಿದ್ದು, ಇಷ್ಟರಲ್ಲೇ ಇನ್ನಷ್ಟು ಮಾಹಿತಿ ನೀಡುತ್ತೇನೆ’ ಎಂಬುದು ಪ್ರಶಾಂತ್‌ರಾಜ್‌ ಅವರ ಮಾತು. ಅಂದಹಾಗೆ, ಅಭಿಷೇಕ್‌ ಅಂಬರೀಶ್‌ ಅವರು ಹೊಸ ಗೆಟಪ್‌ನಲಿದ್ದ ಫೋಟೋವೊಂದು ಇತ್ತೀಚೆಗೆ ಹರಿದಾಡಿತ್ತು. ಸಖತ್‌ ಸ್ಲಿಮ್‌ ಆಗಿ, ಗಡ್ಡ ಹಾಗು ಮೀಸೆಯೊಂದಿಗಿನ ಆ ಹೊಸ ಗೆಟಪ್‌ ಎರಡನೇ ಚಿತ್ರದ್ದು ಎಂದೇ ಹೇಳಲಾಗುತ್ತಿತ್ತು. ಆದರೆ, ಅದು ನಿಜವಾಗಿಯೂ ತಮ್ಮ ಎರಡನೇ ಚಿತ್ರಕ್ಕೆ ಮಾಡಿಕೊಂಡ ಗೆಟಪ್‌ ಇರಬಹುದಾ ಎಂಬ ಪ್ರಶ್ನೆ ಕೂಡ ಹಾಗೆಯೇ ಇದೆ. ಅದೇನೆ ಇರಲಿ, ಪ್ರಶಾಂತ್‌ ರಾಜ್‌ ಅವರ ಹಿಂದಿನ ಚಿತ್ರಗಳಲ್ಲಿ ಪಕ್ಕಾ ಮನರಂಜನೆ ಇತ್ತು.

ಆ ಸಿನಿಮಾಗಳಲ್ಲಿ ಯಶಸ್ಸು ಕಂಡಿದ್ದರು ಕೂಡ. ಈಗ ಅಭಿಷೇಕ್‌ ಅವರಿಗೆ ಹೇಳಿದ ಕಥೆಯಲ್ಲೂ ಮನರಂಜನೆ ಹೇರಳವಾಗಿದೆಯಂತೆ. ಆ ಸಿನಿಮಾ ಹೇಗಿರುತ್ತೆ ಎಂಬುದಕ್ಕೆ ಇನ್ನೂ ಸಾಕಷ್ಟು ಸಮಯ ಬೇಕು. ಇನ್ನು, ಅಂಬರೀಶ್‌ ಅವರ “ಅಂಬಿ ನಿಂಗ್‌ ವಯಸ್ಸಾಯೊ¤à’ ಚಿತ್ರ ನಿರ್ದೇಶಿಸಿದ್ದ ಗುರುದತ್‌ ಗಾಣಿಗ ಅವರು ಕೂಡ ಅಭಿಷೇಕ್‌ ಜೊತೆ ಒಂದು ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ಅದಕ್ಕಿನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಆದರೆ, ಆ ಬಗ್ಗೆಯೂ ಈಗಾಗಲೇ ಮಾತುಕತೆ ನಡೆದಿದೆ ಎನ್ನಲಾಗಿದೆ.

ಟಾಪ್ ನ್ಯೂಸ್

ಪಶ್ಚಿಮ ಭಾಗದ ಹರಾಜು-ಮಾರಾಟದಲ್ಲಿ ಆದೇಶ ಉಲ್ಲಂಘನೆ

ಪಶ್ಚಿಮ ಭಾಗದ ಹರಾಜು-ಮಾರಾಟದಲ್ಲಿ ಆದೇಶ ಉಲ್ಲಂಘನೆ

ಚಿತ್ರಪಾಡಿ ಗ್ರಾಮಸ್ಥರ ಪಡಿತರ ಪರಿಪಾಟಲು ಅಂತ್ಯ

ಚಿತ್ರಪಾಡಿ ಗ್ರಾಮಸ್ಥರ ಪಡಿತರ ಪರಿಪಾಟಲು ಅಂತ್ಯ

ಆವರಣ ಗೋಡೆಯಿಲ್ಲದೆ ಗುಮ್ಮೆತ್ತು ಸ.ಕಿ.ಪ್ರಾ. ಶಾಲೆಗೆ ಅಭದ್ರತೆ

ಆವರಣ ಗೋಡೆಯಿಲ್ಲದೆ ಗುಮ್ಮೆತ್ತು ಸ.ಕಿ.ಪ್ರಾ. ಶಾಲೆಗೆ ಅಭದ್ರತೆ

ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್‌ ನಾಯಕ ಮಿಲಿಂದ್‌ ದೇವ್ರಾ!

ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್‌ ನಾಯಕ ಮಿಲಿಂದ್‌ ದೇವ್ರಾ!

ಭವಿಷ್ಯದ ನಾಯಕರಲ್ಲಿ ಮೂವರು ಭಾರತೀಯರು

ಭವಿಷ್ಯದ ನಾಯಕರಲ್ಲಿ ಮೂವರು ಭಾರತೀಯರು

ಸಿದ್ದು-ಡಿಕೆಶಿ ಜೋಡೆತ್ತಲ್ಲ, ಕಾಡೆತ್ತು: ನಳಿನ್ ಕುಮಾರ್ ಕಟೀಲ್

ಸಿದ್ದು-ಡಿಕೆಶಿ ಜೋಡೆತ್ತಲ್ಲ, ಕಾಡೆತ್ತು: ನಳಿನ್ ಕುಮಾರ್ ಕಟೀಲ್

100 ಕೋಟಿ ಸನಿಹಕ್ಕೆ ಲಸಿಕೆ ಅಭಿಯಾನ :  ಹೆಚ್ಚು ಲಸಿಕೆ ನೀಡಿದ ರಾಜ್ಯಗಳಲ್ಲಿ ಕರ್ನಾಟಕಕ್ಕೂ ಸ್ಥಾನ

100ಕೋಟಿ ಸನಿಹಕ್ಕೆ ಲಸಿಕೆ ಅಭಿಯಾನ :ಹೆಚ್ಚು ಲಸಿಕೆ ನೀಡಿದ ರಾಜ್ಯಗಳಲ್ಲಿ ಕರ್ನಾಟಕಕ್ಕೂ ಸ್ಥಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊರಬಂತು ‘ಕ್ರಿಮಿನಲ್‌’ ಫ‌ಸ್ಟ್‌ ಲುಕ್‌

ಹೊರಬಂತು ‘ಕ್ರಿಮಿನಲ್‌’ ಫ‌ಸ್ಟ್‌ ಲುಕ್‌

ghfghtyt

ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಸುದೀಪ್ -ಪ್ರಿಯಾ ದಂಪತಿ

andondittu kala film

ಫೆಬ್ರವರಿಯಲ್ಲಿ ವಿನಯ್‌ ರಾಜ್‌ಕುಮಾರ್‌ ರ ‘ಅಂದೊಂದಿತ್ತು ಕಾಲ’ ಚಿತ್ರ ಬಿಡುಗಡೆ

ಹೊಸ ಗೆಟಪ್‌ಗೆ ಪುನೀತ್‌ ರೆಡಿ: ಜೇಮ್ಸ್‌ ಹಾಡಿನಲ್ಲಿ ನ್ಯೂಲುಕ್‌

ಹೊಸ ಗೆಟಪ್‌ಗೆ ಪುನೀತ್‌ ರೆಡಿ: ಜೇಮ್ಸ್‌ ಹಾಡಿನಲ್ಲಿ ನ್ಯೂಲುಕ್‌

ಪ್ರೇಮಂ ಪೂಜ್ಯಂ ಲವ್ಲಿ ಟ್ರೇಲರ್‌ :  ಗಮನ ಸೆಳೆದ ಪ್ರೇಮ್‌ ಹೊಸ ಗೆಟಪ್‌

ಪ್ರೇಮಂ ಪೂಜ್ಯಂ ಲವ್ಲಿ ಟ್ರೇಲರ್‌ :  ಗಮನ ಸೆಳೆದ ಪ್ರೇಮ್‌ ಹೊಸ ಗೆಟಪ್‌

MUST WATCH

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

udayavani youtube

ಚಿಂತಾಮಣಿಯಲ್ಲೊಂದು ದುರಂತ : ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

ಹೊಸ ಸೇರ್ಪಡೆ

ಪಶ್ಚಿಮ ಭಾಗದ ಹರಾಜು-ಮಾರಾಟದಲ್ಲಿ ಆದೇಶ ಉಲ್ಲಂಘನೆ

ಪಶ್ಚಿಮ ಭಾಗದ ಹರಾಜು-ಮಾರಾಟದಲ್ಲಿ ಆದೇಶ ಉಲ್ಲಂಘನೆ

ಚಿತ್ರಪಾಡಿ ಗ್ರಾಮಸ್ಥರ ಪಡಿತರ ಪರಿಪಾಟಲು ಅಂತ್ಯ

ಚಿತ್ರಪಾಡಿ ಗ್ರಾಮಸ್ಥರ ಪಡಿತರ ಪರಿಪಾಟಲು ಅಂತ್ಯ

ಇನ್ನೂ ಅನುಷ್ಠಾನ ಆಗದ ಫೂಟ್ ಬ್ರಿಡ್ಜ್ ಕಾಮಗಾರಿ

ಇನ್ನೂ ಅನುಷ್ಠಾನ ಆಗದ ಫೂಟ್ ಬ್ರಿಡ್ಜ್ ಕಾಮಗಾರಿ

ಕರಾವಳಿಯಲ್ಲಿ ಸರಳ ಈದ್‌ ಮಿಲಾದ್‌

ಕರಾವಳಿಯಲ್ಲಿ ಸರಳ ಈದ್‌ ಮಿಲಾದ್‌

ಬಹುವರ್ಷಗಳ ರಸ್ತೆ ಕನಸು ಈಡೇರಿಕೆ

ಬಹುವರ್ಷಗಳ ರಸ್ತೆ ಕನಸು ಈಡೇರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.