
ನಿರ್ಮಾಪಕರ ಸಂಘಕ್ಕೆ ಸದ್ಯದಲ್ಲೇ ಸ್ವಂತ ಕಟ್ಟಡ
Team Udayavani, Aug 29, 2018, 11:45 AM IST

ಸ್ವಂತದ್ದೊಂದು ಕಟ್ಟಡ ಮಾಡಿಕೊಳ್ಳಬೇಕು ಎಂಬುದು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಹಲವು ವರ್ಷಗಳ ಕನಸಾಗಿತ್ತು. ಆದರೆ, ಕಾರಣಾಂತರಗಳಿಂದ ಯೋಜನೆ ಮುಂದಕ್ಕೆ ಹೋಗುತ್ತಲೇ ಇತ್ತು. ಇದೀಗ ಆ ಕನಸು ನನಸಾಗುವ ಹಂತಕ್ಕೆ ಬಂದಿದ್ದು, ನಿರ್ಮಾಪಕರ ಸಂಘವು ಕಟ್ಟಡಕ್ಕಾಗಿ ಸ್ವಂತ ನಿವೇಶವನ್ನು ಖರೀದಿಸಿದೆ.
ಹೌದು, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವು ನಗರದ ಗಾಂಧಿ ಭವನದ ಎದುರು ನಿವೇಶನವೊಂದನ್ನು ಖರೀದಿಸಿದೆ. ಸುಮಾರು ಮೂರೂವರೆ ಸಾವಿರ ಚದುರಡಿ ರುವ ಈ ನಿವೇಶನ ಮೌಲ್ಯ 9.45 ಕೋಟಿ. ಆ ಪೈಕಿ ಇತ್ತೀಚೆಗೆ 7.45 ಕೋಟಿಯಷ್ಟು ಮುಂಗಡ ನೀಡಲಾಗಿದೆ. ಸಂಘದ ಅಧ್ಯಕ್ಷ ಮುನಿರತ್ನ, ಕಾರ್ಯದರ್ಶಿ ಸೂರಪ್ಪ ಬಾಬು, ನಿರ್ಮಾಪಕರಾದ ಎ. ಗಣೇಶ್, ರಮೇಶ್ ಯಾದವ್, ಉಮೇಶ್ ಬಣಕಾರ್, ಸೌಂದರ್ಯ ಜಗದೀಶ್, ಮಾರುತಿ ಜೆಡಿಯವರ್ ಮುಂತಾದವರು ಮುಂಗಡ ಚೆಕ್ ಕೊಟ್ಟಿದ್ದಾರೆ.
ಅಂದಹಾಗೆ, ಈ ನಿವೇಶನದಲ್ಲಿ ಹಳೆಯ ಕಟ್ಟಡವೊಂದಿದ್ದು, ಅದನ್ನು ಸದ್ಯದಲ್ಲೇ ನೆಲಸಮ ಮಾಡಲಾಗುತ್ತದೆ. ವಿಜಯದಶಮಿಯಂದು ಮುಖ್ಯಮಂತ್ರಿ ಹಾಗೂ ನಿರ್ಮಾಪಕರಾದ ಎಚ್.ಡಿ. ಕುಮಾರಸ್ವಾಮಿ ಅವರು ಭೂಮಿಪೂಜೆ ನೆರವೇರಿಸಲಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಮನೆಯಲ್ಲಿಯೇ ಮಾಡಿ ರುಚಿಕರವಾದ ಎಗ್ ಘೀ ರೋಸ್ಟ್

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
ಹೊಸ ಸೇರ್ಪಡೆ

ಬಿಜೆಪಿ ಕಾರ್ಯಕರ್ತರ ನೆರವಿಗಾಗಿ ಕಾನೂನು ಸಹಾಯವಾಣಿ: ತೇಜಸ್ವಿ ಸೂರ್ಯ

Saroornagar: ಪ್ರೇಯಸಿಯನ್ನು ಕೊಂದು ದೇವಸ್ಥಾನದ ಬಳಿ ಚರಂಡಿಗೆ ಎಸೆದ ಅರ್ಚಕ!

Udupi Harsha Showroom: ‘ಐಎಫ್ ಬಿ ಡೀಪ್ ಕ್ಲೀನ್’ ವಾಷಿಂಗ್ ಮೆಷಿನ್ ಬಿಡುಗಡೆ

Partygate case: ಸಂಸತ್ ಸ್ಥಾನಕ್ಕೂ ರಾಜೀನಾಮೆ ನೀಡಿದ ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್

Gangavathi: ಲಘುವಿಮಾನ ಹಾರಾಟ; ಗಾಬರಿಗೊಂಡ ಜನತೆ; ಅಧಿಕಾರಿಗಳಿಗೆ ಮೊಬೈಲ್ ಕರೆ