ಜೇಮ್ಸ್ ಚಿತ್ರದಲ್ಲಿ ಅಪ್ಪು ಧ್ವನಿಗೆ ಫಿದಾ ಆದ ಅಭಿಮಾನಿಗಳು
Team Udayavani, Apr 23, 2022, 4:20 PM IST
ಪುನೀತ್ ರಾಜ್‌ಕುಮಾರ್ ನಟನೆಯ “ಜೇಮ್ಸ್’ ಚಿತ್ರ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿದೆ. ಪುನೀತ್ ಅವರಿಗೆ ಶಿವರಾಜ್‌ಕುಮಾರ್ ಧ್ವನಿ ನೀಡಿದ್ದಾರೆ. ಆದರೆ, ಈಗ ಚಿತ್ರಮಂದಿರಗಳಲ್ಲಿ ಪುನೀತ್ ಅವರ ಧ್ವನಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.
ಹೌದು, ಏ.22ರಿಂದ “ಜೇಮ್ಸ್’ ಚಿತ್ರ ಪುನೀತ್ ಅವರ ಧ್ವನಿಯೊಂದಿಗೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಹೈದರಾಬಾದ್‌ನ ಸಂಸ್ಥೆಯೊಂದು ಈ ಆವಿಷ್ಕಾರ ಮಾಡಿದ್ದು, ಶಿವರಾಜ್‌ಕುಮಾರ್ ಅವರು ಮಾಡಿರುವ ಡಬ್ಬಿಂಗ್ ಮೇಲೆ ಪುನೀತ್ ಅವರ ಧ್ವನಿಯನ್ನು ಕೋಟಿಂಗ್ ಮಾಡಿದೆ. ಚಿತ್ರ ನೋಡಿದರಿಗೆ ಸ್ವತಃ ಪುನೀತ್ ಅವರೇ ಡಬ್ಬಿಂಗ್ ಮಾಡಿದಂತೆ ಭಾಸವಾಗುತ್ತಿದ್ದು, ತಮ್ಮ ನೆಚ್ಚಿನ ನಟನ ಧ್ವನಿ ಕೇಳಿ ಫ್ಯಾನ್ಸ್ ಫಿದಾ ಆಗಿದ್ದಾರೆ.
ಇದನ್ನೂ ಓದಿ:‘ಕೆಜಿಎಫ್ 2’ ನನ್ನ ಸ್ವಂತ ಸಾಮರ್ಥ್ಯವನ್ನು ನೆನಪಿಸಿತು: ಸಂಜಯ್ ದತ್
ಪುನೀತ್ ರಾಜ್ ಕುಮಾರ್ ಅವರು ನಾಯಕರಾಗಿ ನಟಿಸಿರುವ ಅಂತಿಮ ಚಿತ್ರ ಜೇಮ್ಸ್ ಗೆ ಚೇತನ್ ನಿರ್ದೇಶನವಿದೆ. ಚಿತ್ರದಲ್ಲಿ ಪ್ರಿಯಾ ಆನಂದ್, ಶ್ರೀಕಾಂತ್ ಮೆಕಾ, ಆದಿತ್ಯ, ಅನು ಪ್ರಭಾಕರ್ ನಟಿಸಿದ್ದಾರೆ. ಚಿತ್ರ ಮಾರ್ಚ್ 17ರಂದು ಬಿಡುಗಡೆಯಾಗಿತ್ತು.