ಫಸ್ಟ್ ನೈಟ್-ರೊಮ್ಯಾನ್ಸ್ ಬಗ್ಗೆ ಹೇಳಿ, ನೆಟ್ಟಿಗರಿಂದ ಟ್ರೋಲ್ ಆದ ರಚಿತಾ ರಾಮ್
Team Udayavani, Nov 11, 2021, 12:09 PM IST
ರಚಿತಾ ರಾಮ್ ಹಾಗೂ ಅಜಯ್ ರಾವ್ ಜೊತೆಯಾಗಿರುವ ‘ಲವ್ ಯೂ ರಚ್ಚು’ಸಿನಿಮಾ ಮತ್ತೆ ಮತ್ತೆ ಸುದಿಯಾಗುತ್ತಿದೆ. ಫೈಟರ್ ವಿವೇಕ್ ಅವರು ಶೂಟಿಂಗ್ ವೇಳೆ ಹೈ ವೋಲ್ಟೇಜ್ ತಂತಿ ಸ್ಪರ್ಶಿಸಿ ಮೃತಪಟ್ಟ ಹಿನ್ನಲೆಯಲ್ಲಿ ಸಿನಿತಂಡದ ಕೆಲವರು ಅರೆಸ್ಟ್ ಆಗಿ ಆರಂಭದಲ್ಲಿಯೇ ಸಿನಿಮಾ ಸಾಕಷ್ಟು ಸುದ್ದಿ ಮಾಡಿತ್ತು.
ಸಿನಿಮಾ ಸದ್ಯ ಮತ್ತೆ ಸುದ್ದಿಯಾಗಲು ಕಾರಣವಾಗಿದ್ದು,ಚಿತ್ರದಲ್ಲಿರುವ ‘ಮುದ್ದು ನೀನು’ ಹಾಡು. ಹೌದು ಈ ಹಾಡು ಇತ್ತೀಚೆಗೆ ತೆರೆ ಕಂಡಿದ್ದು, ರಚ್ಚು ಮತ್ತು ಅಜಯ್ ರಾವ್ ಅವರು ಹಸಿ ಬಿಸಿ ದ್ರಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಫಸ್ಟ್ ನೈಟ್ ರೊಮ್ಯಾನ್ಸ್ ಸೀನ್ ಗಳು ಈ ಹಾಡಿನಲಿದ್ದು, ಪಡ್ಡೆ ಹುಡುಗರ ಹೃದಯನ್ನು ಬಿಗಿ ಮಾಡಿದೆ.
ಇನ್ನು ಈ ಹಾಡು ತೆರೆ ಕಂಡ ನಂತರ ರಚಿತಾ ರಾಮ್ ಅವರ ಹೇಳಿಕೆಯೊಂದು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಪ್ರೆಸ್ ಮೀಟ್ ವೇಳೆ ಪ್ರಶ್ನೆಯೊಂದಕ್ಕೆ ರಚಿತಾ ರಾಮ್ ಪ್ರತಿಕ್ರಿಯಿಸಿ, ‘ಎಲ್ಲರೂ ಫಸ್ಟ್ ನೈಟ್ ನಲ್ಲಿ ಏನು ಮಾಡುತ್ತಾರೋ, ನಾವು ಅದನ್ನೇ ಮಾಡಿದ್ದು’ ಎಂದಿದ್ದರು. ಈ ವಿಡಿಯೋ ಕ್ಲಿಕ್ ಬಳಸಿಕೊಂಡು ಟ್ರೋಲಿಗರು ಬಗೆ ಬಗೆ ಟ್ರೋಲ್ ವಿಡಿಯೋಗಳನ್ನು ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡುತ್ತಿದ್ದಾರೆ.
ಲವ್ ಯು ರಚ್ಚು ಚಿತ್ರಕ್ಕೆ ಶಂಕರ್ ಎಸ್ ರಾಜ್ ಆಕ್ಷನ್ ಕಟ್ ಹೇಳಿದ್ದು, ಗುರುದೇಶ್ ಪಾಂಡೆ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಮುದ್ದು ನೀನು ಹಾಡಿಗೆ ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಮಾಡಿದ್ದು, ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದಾರೆ. ಈ ಹಾಡಿಗೆ ಸಿದ್ ಶ್ರೀರಾಮ್ ಹಾಡಿದ್ದು ಹಾಡಿನ ಪವರ್ ಮತ್ತಷ್ಟು ಹೆಚ್ಚಿದೆ.