ಫಾದರ್ಸ್ ಡೇ; ರಾಧಿಕಾ ಪಂಡಿತ್ ಸ್ಪೆಷಲ್ ಪೋಸ್ಟ್
Team Udayavani, Jun 19, 2023, 1:48 PM IST
ಜೂನ್ 3ನೇ ಭಾನುವಾರ (ಜೂ. 18) “ವಿಶ್ವ ಅಪ್ಪಂದಿರ ದಿನ’ವನ್ನು ಎಲ್ಲೆಡೆ ಆಚರಿಸಲಾಯಿತು. “ವಿಶ್ವ ಅಪ್ಪಂದಿರ ದಿನ’ದ ಸಲುವಾಗಿ ಚಿತ್ರರಂಗದ ಅನೇಕ ತಾರೆಯರು, ಕಲಾವಿದರು, ತಂತ್ರಜ್ಞರು ಕೂಡ ತಮ್ಮ ತಂದೆಯ ಜೊತೆಗಿನ ಓಡಾಟ- ಒಡನಾಟ ಎಲ್ಲವನ್ನೂ ಮೆಲುಕು ಹಾಕಿ “ವಿಶ್ವ ಅಪ್ಪಂದಿರ ದಿನ’ಕ್ಕೆ ಶುಭ ಕೋರಿದ್ದಾರೆ.
ಇನ್ನು ನಟಿ ರಾಧಿಕಾ ಪಂಡಿತ್ ಕೂಡ ತಮ್ಮ ತಂದೆಯ ಜೊತೆಗಿನ ಅನುಬಂಧದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಪೋಸ್ಟ್ ಸಿನಿಪ್ರಿಯರ ಗಮನ ಸೆಳೆಯಿತು.
“ವಿಶ್ವ ಅಪ್ಪಂದಿರ ದಿನ’ದ ಪ್ರಯಕ್ತ ತಮ್ಮ ಇನ್ಸ್ಸ್ಟಾಗ್ರಾಂನಲ್ಲಿ ರಾಧಿಕಾ ಪಂಡಿತ್, “ನಾನು ಯಾವಾಗಲೂ ಅಪ್ಪನ ಮಗಳು, ಯಾವಾಗಲೂ ಎಲ್ಲದಕ್ಕೂ ಅವರ ಬಳಿ ಓಡುತ್ತೇನೆ.. (ಅಮ್ಮನಿಂದ ಯಾವುದಕ್ಕಾದರೂ ಅನುಮತಿ ಸಿಗದಿದ್ದಾಗ, ಸಲಹೆ ಕೇಳಲು, ಕೆಲವೊಮ್ಮೆ ಸುಮ್ಮನೆ ಮಾತನಾಡಲು) ಅವರೇ ನನ್ನ ಮಾರ್ಗದರ್ಶಿ, ನನ್ನ ಆಧಾರಸ್ಥಂಭ, ನನ್ನ ಹೀರೋ. ಅದೇ ರೀತಿ ಐರಾ ಮತ್ತು ಯಥರ್ವ್ ತಮ್ಮ ತಂದೆಯೊಂದಿಗೆ ಅದೇ ಬಂಧವನ್ನು ಹಂಚಿಕೊಂಡಿರುವುದನ್ನು ನೋಡುವುದಕ್ಕೆ ಖುಷಿಯಾಗುತ್ತದೆ’ ಎಂದು ಬರೆದುಕೊಂಡಿದ್ದು, “ತಂದೆಯ ದಿನದ ಶುಭಾಶಯಗಳು’ ಎಂದು ಪೋಸ್ಟ್ ಮಾಡಿದ್ದಾರೆ. ಜೊತೆಗೆ ರಾಧಿಕಾ ತಮ್ಮ ತಂದೆ, ತಾಯಿ ಹಾಗೂ ಸಹೋದರ ಜೊತೆ ಕ್ಲಿಕ್ಕಿಸಿರುವ ಫೋಟೊಗಳ ಜೊತೆಗೆ ತಮ್ಮ ಮಕ್ಕಳಾದ ಐರಾ ಹಾಗೂ ಯಥರ್ವ್, ಯಶ್ ಜೊತೆಗಿರುವ ಸುಂದರ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
“ವಿಶ್ವ ಅಪ್ಪಂದಿರ ದಿನ’ದ ಪ್ರಯುಕ್ತ ರಾಧಿಕಾ ಪಂಡಿತ್ ಮಾಡಿರುವ ಈ ಪೋಸ್ಟ್ ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಅಭಿಮಾನಿಗಳು ಕೂಡ ಲೈಕ್ಸ್, ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಪ್ರೇಕ್ಷಕಳಾಗಿ ಕಾಂಗರೂ ನನಗೆ ಇಷ್ಟವಾಯಿತು..
Sandalwood: ಬಿಸಿಲ ಧಗೆ ಎಫೆಕ್ಟ್; ಔಟ್ಡೋರ್ ಶೂಟಿಂಗ್ನಿಂದ ಸಿನಿಮಂದಿ ದೂರ
Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
MUST WATCH
ಹೊಸ ಸೇರ್ಪಡೆ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ