ಕಿರಿಕ್‌ ಪಾರ್ಟಿ-2 ಯಾವಾಗ?: ಅಭಿಮಾನಿಗಳ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿದ ರಕ್ಷಿತ್‌


Team Udayavani, Jan 31, 2023, 11:21 AM IST

rakshit shetty

“ಕಿರಿಕ್‌ ಪಾರ್ಟಿ-2′ ಯಾವಾಗ? – ಹೀಗೊಂದು ಪ್ರಶ್ನೆ ರಕ್ಷಿತ್‌ ಶೆಟ್ಟಿ ಅವರಿಗೆ ಎಲ್ಲಿ ಹೋದರೂ ಎದುರಾಗುತ್ತಿತ್ತು. ಅದರಲ್ಲೂ ಇತ್ತೀಚೆಗಂತೂ ಈ ಪ್ರಶ್ನೆಯನ್ನು ಕೇಳುವವರ ಸಂಖ್ಯೆ ಕೂಡಾ ಹೆಚ್ಚಾಗಿತ್ತು. ಅದೇ ಕಾರಣದಿಂದ ರಕ್ಷಿತ್‌ ಶೆಟ್ಟಿ ಟ್ವೀಟ್‌ ಮೂಲಕ, “ಕಿರಿಕ್‌’ ಪ್ರಶ್ನೆಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಸದ್ಯಕ್ಕೆ “ಕಿರಿಕ್‌ ಪಾರ್ಟಿ-2′ ಮಾಡುವ ಯಾವ ಯೋಚನೆಯೂ ಇಲ್ಲ ಎನ್ನುವ ಜೊತೆಗೆ ತಮ್ಮ ಮುಂದಿನ ಚಿತ್ರಗಳ ಕುರಿತು ಒಂದಷ್ಟು ಅಪ್‌ಡೇಟ್ಸ್‌ ನೀಡಿದ್ದಾರೆ ರಕ್ಷಿತ್‌ ಶೆಟ್ಟಿ.

ಸದ್ಯ ರಕ್ಷಿತ್‌ ಶೆಟ್ಟಿ ನಟನೆಯ “ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಆ ಚಿತ್ರದ ನಂತರ ರಕ್ಷಿತ್‌ “ರಿಚರ್ಡ್‌ ಆ್ಯಂಟನಿ’ ಕೈಗೆತ್ತಿಕೊಳ್ಳಲಿದ್ದಾರೆ. ಇದು ಇವರ ಡ್ರೀಮ್‌ ಪ್ರಾಜೆಕ್ಟ್. ಈ ಚಿತ್ರದ ನಟನೆ, ನಿರ್ದೇಶನ ಎರಡೂ ಜವಾಬ್ದಾರಿ ರಕ್ಷಿತ್‌ ಅವರದ್ದೇ. ಈಗಾಗಲೇ ಫ‌ಸ್ಟ್‌ಲುಕ್‌ ಟೀಸರ್‌ ಹಿಟ್‌ಲಿಸ್ಟ್‌ ಸೇರಿದೆ. ಈ ಚಿತ್ರವನ್ನು ಹೊಂಬಾಳೆ ಫಿಲಂಸ್‌ ನಿರ್ಮಿಸುತ್ತಿದೆ.

ಇದನ್ನೂ ಓದಿ:ಅಂಡರ್ 19: ಅರ್ಚನಾ ಕುಟುಂಬ ಫೈನಲ್‌ ನೋಡಲು ನೆರವು ನೀಡಿದ ಪೊಲೀಸ್‌ ಅಧಿಕಾರಿ

ಈ ಚಿತ್ರದ ಬಳಿಕ ರಕ್ಷಿತ್‌ “ಪುಣ್ಯಕೋಟಿ’ ಚಿತ್ರದ ಕಡೆಗೆ ಗಮನಹರಿಸಲಿದ್ದಾರೆ. ಇದು ರಕ್ಷಿತ್‌ ಮಹತ್ವಕಾಂಕ್ಷೆಯ ಸಿನಿಮಾ. ಈ ಚಿತ್ರ ಎರಡು ಭಾಗಗಳಲ್ಲಿ ಬರಲಿದೆ. ಇದನ್ನು ಮುಗಿಸಿಕೊಂಡು ರಕ್ಷಿತ್‌ ಶೆಟ್ಟಿ “ಎಂ2ಎಂ’ (ಮಾರ್ನಿಂಗ್‌ ಟು ಮೋಕ್ಷ’) ಚಿತ್ರ ಮಾಡಲಿದ್ದಾರೆ. ಈ ಎಲ್ಲಾ ಕಮಿಟ್‌ ಮೆಂಟ್‌ಗಳು ಮುಗಿದ ನಂತರ “ಕಿರಿಕ್‌ ಪಾರ್ಟಿ-2′ ಮಾಡಲಿದ್ದಾರೆ. ಈ ಚಿತ್ರ ಮಾಡುವ ಕುರಿತು ರಕ್ಷಿತ್‌ ಅವರ ಹೊಸ ಪ್ಲ್ರಾನ್‌ ಕೂಡಾ ಹೊಂದಿದ್ದಾರಂತೆ. ಅದೇನು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಸದ್ಯ ಬಿಡುಗಡೆಗೆ ಸಿದ್ಧವಾಗಿರುವ “ಸಪ್ತಸಾಗರದಾಚೆ ಎಲ್ಲೋ’ ಚಿತ್ರ ಔಟ್‌ ಅಂಡ್‌ ಔಟ್‌ ಲವ್‌ಸ್ಟೋರಿಯಾಗಿದ್ದು, ಈ ಚಿತ್ರದಲ್ಲಿ ರಕ್ಷಿತ್‌ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ರಕ್ಷಿತ್‌ ತಮ್ಮದೇ ಬ್ಯಾನರ್‌ನಲ್ಲಿ ನಿರ್ಮಿಸುತ್ತಿದ್ದು, ಹೇಮಂತ್‌ ಕುಮಾರ್‌ ನಿರ್ದೇಶನ ಈ ಚಿತ್ರಕ್ಕಿದೆ. ಚಿತ್ರದಲ್ಲಿ ರುಕ್ಮಿಣಿ ವಸಂತ್‌ ನಾಯಕಿ.

ಟಾಪ್ ನ್ಯೂಸ್

arrest

ವಾರಂಟ್‌ ಆರೋಪಿ 1 ವರ್ಷ ಬಳಿಕ ಸೆರೆ

rudranksh

ಶೂಟಿಂಗ್‌ ವಿಶ್ವಕಪ್‌: ಕಂಚು ಗೆದ್ದ ರುದ್ರಾಂಕ್ಷ್‌

ಉಡುಪಿ: ಕೆವೈಸಿ ಅಪ್‌ಡೇಟ್‌ ನೆಪದಲ್ಲಿ ವಂಚನೆ

ಉಡುಪಿ: ಕೆವೈಸಿ ಅಪ್‌ಡೇಟ್‌ ನೆಪದಲ್ಲಿ ವಂಚನೆ

ಬೆಳೆ ವಿಮೆ ಪರಿಹಾರಕ್ಕಾಗಿ ಡಿಜಿಕ್ಲೈಮ್‌ ;  ಸಚಿವ ತೋಮರ್‌ ಸಿಂಗ್‌ ಅವರಿಂದ ಅನಾವರಣ

ಬೆಳೆ ವಿಮೆ ಪರಿಹಾರಕ್ಕಾಗಿ ಡಿಜಿಕ್ಲೈಮ್‌ ; ಸಚಿವ ತೋಮರ್‌ ಸಿಂಗ್‌ ಅವರಿಂದ ಅನಾವರಣ

“ನ್ಯಾಯಾಧೀಶರನ್ನು ಭ್ರಷ್ಟರನ್ನಾಗಿ ಬಿಂಬಿಸುತ್ತಿದ್ದಾರೆ’

“ನ್ಯಾಯಾಧೀಶರನ್ನು ಭ್ರಷ್ಟರನ್ನಾಗಿ ಬಿಂಬಿಸುತ್ತಿದ್ದಾರೆ’

ಕುಂದಾಪುರ: ಟಿಪ್ಪರ್‌ ಢಿಕ್ಕಿ; ಪಾದಚಾರಿ ಸಾವು

ಕುಂದಾಪುರ: ಟಿಪ್ಪರ್‌ ಢಿಕ್ಕಿ; ಪಾದಚಾರಿ ಸಾವು

Congress-a

“ಬಿಜೆಪಿಯಿಂದ ಸಂವಿಧಾನ ವಿರೋಧಿ ನೀತಿ’



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malegaala Bantu Saniha song from pranayam movie

‘ಪ್ರಣಯಂ’ ಹಾಡು ಬಂತು; ಸೋನು ನಿಗಂ ಕಂಠಸಿರಿಯಲ್ಲಿ ‘ಮಳೆಗಾಲ ಬಂತು ಸನಿಹ’

Prajwal devraj’s veeram movie trailer

‘ವೀರಂ’ ಟ್ರೇಲರ್‌ನಲ್ಲಿ ಪ್ರಜ್ವಲ್‌ ದೇವರಾಜ್ ಅಬ್ಬರ

ಪ್ಯಾನ್‌ ಇಂಡಿಯಾ ಅಖಾಡದಲ್ಲಿ ‘ಚಂದ್ರು’ ಬಿಂಬ; ಭರ್ಜರಿ ಕಲೆಕ್ಷನ್‌ ಖುಷಿಯಲ್ಲಿ ‘ಕಬ್ಜ’

ಪ್ಯಾನ್‌ ಇಂಡಿಯಾ ಅಖಾಡದಲ್ಲಿ ‘ಚಂದ್ರು’ ಬಿಂಬ; ಭರ್ಜರಿ ಕಲೆಕ್ಷನ್‌ ಖುಷಿಯಲ್ಲಿ ‘ಕಬ್ಜ’

sanjana das

ಜೋಗಪ್ಪನ ಅರಮನೆಯಲ್ಲಿ ಸಂಜನಾ ದಾಸ್‌

ಸತ್ಯವತಿಯಾದ ಶಿಲ್ಪಾ ಶೆಟ್ಟಿ: ಧ್ರುವ ಸರ್ಜಾ ‘ಕೆ.ಡಿ’ಗೆ ಜತೆಯಾದ ಕರಾವಳಿ ಕುವರಿ

ಸತ್ಯವತಿಯಾದ ಶಿಲ್ಪಾ ಶೆಟ್ಟಿ: ಧ್ರುವ ಸರ್ಜಾ ‘ಕೆ.ಡಿ’ಗೆ ಜತೆಯಾದ ಕರಾವಳಿ ಕುವರಿ

MUST WATCH

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

ಹೊಸ ಸೇರ್ಪಡೆ

arrest

ವಾರಂಟ್‌ ಆರೋಪಿ 1 ವರ್ಷ ಬಳಿಕ ಸೆರೆ

rudranksh

ಶೂಟಿಂಗ್‌ ವಿಶ್ವಕಪ್‌: ಕಂಚು ಗೆದ್ದ ರುದ್ರಾಂಕ್ಷ್‌

ಉಡುಪಿ: ಕೆವೈಸಿ ಅಪ್‌ಡೇಟ್‌ ನೆಪದಲ್ಲಿ ವಂಚನೆ

ಉಡುಪಿ: ಕೆವೈಸಿ ಅಪ್‌ಡೇಟ್‌ ನೆಪದಲ್ಲಿ ವಂಚನೆ

ಬೆಳೆ ವಿಮೆ ಪರಿಹಾರಕ್ಕಾಗಿ ಡಿಜಿಕ್ಲೈಮ್‌ ;  ಸಚಿವ ತೋಮರ್‌ ಸಿಂಗ್‌ ಅವರಿಂದ ಅನಾವರಣ

ಬೆಳೆ ವಿಮೆ ಪರಿಹಾರಕ್ಕಾಗಿ ಡಿಜಿಕ್ಲೈಮ್‌ ; ಸಚಿವ ತೋಮರ್‌ ಸಿಂಗ್‌ ಅವರಿಂದ ಅನಾವರಣ

“ನ್ಯಾಯಾಧೀಶರನ್ನು ಭ್ರಷ್ಟರನ್ನಾಗಿ ಬಿಂಬಿಸುತ್ತಿದ್ದಾರೆ’

“ನ್ಯಾಯಾಧೀಶರನ್ನು ಭ್ರಷ್ಟರನ್ನಾಗಿ ಬಿಂಬಿಸುತ್ತಿದ್ದಾರೆ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.