ಬಾಕ್ಸ್‌ ಆಫೀಸ್‌ ನಲ್ಲಿ ʼ777 ಚಾರ್ಲಿʼ ಕಮಾಲ್‌: ಮೂರು ದಿನದಲ್ಲಿ ಚಿತ್ರ ಗಳಿಸಿದ್ದೆಷ್ಟು?


Team Udayavani, Jun 13, 2022, 7:54 PM IST

ಬಾಕ್ಸ್‌ ಆಫೀಸ್‌ ನಲ್ಲಿ ʼ777 ಚಾರ್ಲಿʼ ಕಮಾಲ್‌: ಮೂರು ದಿನದಲ್ಲಿ ಚಿತ್ರ ಗಳಿಸಿದ್ದೆಷ್ಟು?

ಬೆಂಗಳೂರು : ʼಕೆಜಿಎಫ್‌ -2ʼ  ಬಾಕ್ಸ್‌ ಆಫೀಸ್‌ ನಲ್ಲಿ ಸದ್ದು ಮಾಡಿದ ಬಳಿಕ, ಕನ್ನಡದ ಇನ್ನೊಂದು ಸಿನಿಮಾ ಪ್ಯಾನ್‌ ಇಂಡಿಯಾ ಲೆವೆಲ್‌ ನಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ.

ಈ ವಾರ ಬಿಡುಗಡೆಯಾದ ಸಿಂಪಲ್‌ ಸ್ಟಾರ್ ರಕ್ಷಿತ್‌ ಶೆಟ್ಟಿ ಅಭಿನಯ‌ದ ʼ777 ಚಾರ್ಲಿʼ ಸದ್ಯ ಚಂದವನದಲ್ಲಿ ಮಾತ್ರವಲ್ಲ, ಪ್ಯಾನ್‌ ಇಂಡಿಯಾ ಸಿನಿರಂಗದಲ್ಲೂ ಭರ್ಜರಿ ಸದ್ದು ಮಾಡುತ್ತಿದೆ.

ʼಚಾರ್ಲಿʼ ಎನ್ನುವ ಶ್ವಾನ ನಾಯಕ ರಕ್ಷಿತ್‌ ಶೆಟ್ಟಿ ʼಕರ್ಣʼ ನಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಬಗ್ಗೆ ಎಲ್ಲೆಡೆ ಪಾಸಿಟಿವ್‌ ರೆಸ್ಪಾನ್ಸ್‌ ಕೇಳಿ ಬರುತ್ತಿದೆ. ಫನ್ನಿ ಹಾಗೂ ಇಮೋಷನಲ್‌ ಆಗಿ ಚಿತ್ರವನ್ನು ನಿರ್ದೇಶಕ ಕಿರಣ್‌ ರಾಜ್‌ ಹೇಳಿದ್ದು, ಹೊಸ ರೀತಿಯ ಪ್ರಯೋಗ ಸ್ಯಾಂಡಲ್‌ ವುಡ್‌ ಮತ್ತೆ ಗೆದ್ದಿದೆ.

ರಿಲೀಸ್‌ ಗೂ ಮುನ್ನ 777 ಚಾರ್ಲಿ 100 ಕಡೆ ಪ್ರಿಮಿಯರ್‌ ಶೋ ಆಯೋಜಿಸಿ, ಚಿತ್ರ ನೋಡುಗರಿಂದ ಉತ್ತಮ ಅಭಿಪ್ರಾಯವನ್ನು ಪಡೆದುಕೊಂಡಿತ್ತು. ಇದೀಗ ರಿಲೀಸ್‌ ಆದ ಬಳಿಕವೂ ಅದೇ ರೀತಿಯ ರೆಸ್ಪಾನ್ಸ್‌ ಕೇಳಿ ಬರುತ್ತಿದೆ.

ಚಿತ್ರ ನೋಡಲು ಥಿಯೇಟರ್‌ ನತ್ತ ಪ್ರೇಕ್ಷಕರು ಹರಿದು ಬರುತ್ತಿದ್ದು, ಬಹುತೇಕ ಕಡೆ ಹೌಸ್‌ ಫುಲ್‌ ಆಗಿದೆ. ಇಷ್ಟೆಲ್ಲಾ ರೆಸ್ಪಾನ್ಸ್‌ ಬಂದ ಬಳಿಕ ಚಿತ್ರದ ಕಲೆಕ್ಷನ್‌ ಬಗ್ಗೆ ಕುತೂಹಲ ಹುಟ್ಟುವುದು ಸಹಜ.

ʼ777 ಚಾರ್ಲಿʼ ಚಿತ್ರ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ನಲ್ಲೂ ಹಿಂದೆ ಬಿದ್ದಿಲ್ಲ. ಮೊದಲ ದಿನ ಚಿತ್ರ ಗಳಿಸಿದ್ದು 6.2 ಕೋಟಿ ರೂ., ಎರಡನೇ ದಿನವೂ ಕಲೆಕ್ಷನ್‌ ನಲ್ಲಿ ಹಿಂದೆ ಬೀಳದೆ 7.8 ಕೋಟಿ ರೂ. ಗಳಿಸಿದ್ದು, ಮೂರನೇ ದಿನ ಅಂದರೆ ಭಾನುವಾರ 9.50 ಕೋಟಿ ರೂ.ಗಳಿಸಿ ಬಾಕ್ಸ್‌ ಆಫೀಸ್‌ ನಲ್ಲಿ ಕಮಾಲ್‌ ಮಾಡಿದೆ. ಒಟ್ಟು ಮೂರೇ ದಿನದಲ್ಲಿ 777 ಚಾರ್ಲಿ 23.50 ಕೋಟಿ ರೂಪಾಯಿಯನ್ನು ಗಳಿಸಿದೆ. ಇದರಲ್ಲಿ ಹಿಂದಿಯ ಲೆಕ್ಕಚಾರ ಇನ್ನು ಕೂಡ ಹೊರ ಬಂದಿಲ್ಲ ಎನ್ನಲಾಗಿದೆ.

ಕೆಜಿಎಫ್‌ -2 ಬಳಿಕ ಕನ್ನಡದ ಮತ್ತೊಂದು ಸಿನಿಮಾ ಪ್ಯಾನ್‌ ಇಂಡಿಯಾದಲ್ಲಿ ಸದ್ದು ಮಾಡುತ್ತಿರುವುದು ಸ್ಯಾಂಡಲ್‌ ವುಡ್‌ ಗೆ ಸಂತಸದ ವಿಷಯ.

ಟಾಪ್ ನ್ಯೂಸ್

9

ಕೊಟ್ಟಿಗೆಹಾರ: ಅಕ್ರಮ ಕಳ್ಳಬಟ್ಟಿ ಅಡ್ಡೆ ಮೇಲೆ ಪೊಲೀಸರ ದಾಳಿ

thumb news case baNNED

ಟೆಕ್ಕಿ, ಉಪನ್ಯಾಸಕರು ಟು ಸರ್ಕಾರಿ ಉದ್ಯೋಗಿಗಳು…ಇದು ಬಂಧಿತ PFI ಮುಖಂಡರ ಹಿನ್ನೆಲೆ!

araga-jnanendra

ಪಿಎಫ್ಐ ಪರವಾಗಿ ಯಾರೇ ಧ್ವನಿ ಎತ್ತಿದರೂ ಕಠಿಣ ಕ್ರಮ: ಆರಗ ಜ್ಞಾನೇಂದ್ರ ಎಚ್ಚರಿಕೆ

8

ಕುಷ್ಟಗಿ: ಲಂಪಿ ವೈರಸ್; ಜಾನುವಾರು ಸಂತೆ ರದ್ದು

7-1

ಮದ್ಯದಂಗಡಿ ವಿರೋಧಿಸಿ ಪ್ರತಿಭಟನೆ; ವಿಡಿಯೋ ಚಿತ್ರೀಕರಣ ಮಾಡಿದ ವ್ಯಕ್ತಿ ಪೊಲೀಸ್ ವಶಕ್ಕೆ

ಮೊದಲು ನಳಿನ್ ಕುಮಾರ್ ಕಟೀಲ್ ಮಂಪರು ಪರೀಕ್ಷೆ ಮಾಡಿ: ಹರಿಪ್ರಸಾದ್

ಮೊದಲು ನಳಿನ್ ಕುಮಾರ್ ಕಟೀಲ್ ಮಂಪರು ಪರೀಕ್ಷೆ ಮಾಡಿ: ಹರಿಪ್ರಸಾದ್

arun-singh

ಪೇಸಿಎಂ ಎಂಬುದು ಸಜ್ಜನ, ಸಾಮಾನ್ಯರ ಸಿಎಂ ಗೆ ಮಾಡುವ ಅಪಮಾನ: ಅರುಣ್ ಸಿಂಗ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-22

ಭಾರತೀಯ ಸಂಸ್ಕೃತಿ ಮೆಲೊಂದು ಚಿತ್ರಣ!

“ದಿ ಚೆಕ್‌ ಮೇಟ್‌” ಇದು ಮೊದಲನೇ ಸುತ್ತಿನ ಆಟ

“ದಿ ಚೆಕ್‌ ಮೇಟ್‌” ಇದು ಮೊದಲನೇ ಸುತ್ತಿನ ಆಟ

“ತೋತಾಪುರಿ” ಮೇಲೆ ಸುಮನ ಗಮನ!

“ತೋತಾಪುರಿ” ಮೇಲೆ ಸುಮನ ಗಮನ!

mitra

ಮಿತ್ರ ಮಂಡಳಿ ಹೊಸ ಕನಸು

‘ಕುಳ್ಳನ ಹೆಂಡತಿ’ ಪ್ರೇಮ ಪುರಾಣ!; ರಿಲೀಸ್ ಗೆ ರೆಡಿಯಾದ ಹೊಸಬರ ಚಿತ್ರ

‘ಕುಳ್ಳನ ಹೆಂಡತಿ’ ಪ್ರೇಮ ಪುರಾಣ!; ರಿಲೀಸ್ ಗೆ ರೆಡಿಯಾದ ಹೊಸಬರ ಚಿತ್ರ

MUST WATCH

udayavani youtube

ದಿನ 4| ಕೂಷ್ಮಾಂಡ ದೇವಿ

udayavani youtube

ಮಂಗಳೂರು ಶ್ರೀ ಶಾರದಾ ಮಹೋತ್ಸವ – 100 ವರ್ಷಗಳ ಪಯಣ ಹೇಗಿತ್ತು ?

udayavani youtube

ದಸರಾ ಆನೆಗಳ ತೂಕವನ್ನು ಹೆಚ್ಚಿಸಲು ಏನೆಲ್ಲಾ ತಿನ್ನಿಸುತ್ತಾರೆ ನೋಡಿ !

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

ಹೊಸ ಸೇರ್ಪಡೆ

cruelty

ಪ್ರಾಣಿಗಳ ಮೇಲಿನ ದೌರ್ಜನ್ಯಕ್ಕೆ ಜೈಲು ಶಿಕ್ಷೆ: ಎಚ್ಚರಿಕೆ

9

ಕೊಟ್ಟಿಗೆಹಾರ: ಅಕ್ರಮ ಕಳ್ಳಬಟ್ಟಿ ಅಡ್ಡೆ ಮೇಲೆ ಪೊಲೀಸರ ದಾಳಿ

thumb news case baNNED

ಟೆಕ್ಕಿ, ಉಪನ್ಯಾಸಕರು ಟು ಸರ್ಕಾರಿ ಉದ್ಯೋಗಿಗಳು…ಇದು ಬಂಧಿತ PFI ಮುಖಂಡರ ಹಿನ್ನೆಲೆ!

araga-jnanendra

ಪಿಎಫ್ಐ ಪರವಾಗಿ ಯಾರೇ ಧ್ವನಿ ಎತ್ತಿದರೂ ಕಠಿಣ ಕ್ರಮ: ಆರಗ ಜ್ಞಾನೇಂದ್ರ ಎಚ್ಚರಿಕೆ

8

ಕುಷ್ಟಗಿ: ಲಂಪಿ ವೈರಸ್; ಜಾನುವಾರು ಸಂತೆ ರದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.