ಬಿಡುಗಡೆಗೆ ರೆಡಿಯಾದ ರಾಮಾಚಾರಿ 2.0
Team Udayavani, Mar 16, 2023, 2:48 PM IST
ಈಗಾಗಲೇ “ರಾಮಾಚಾರಿ’, “ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ’ ಸಿನಿಮಾಗಳು ತೆರೆಗೆ ಬಂದು ದೊಡ್ಡ ಸಕ್ಸಸ್ ಕಂಡಿದ್ದು ನಿಮಗೆ ಗೊತ್ತಿರಬಹುದು. ಈಗ ಅದೇ ಹೆಸರಿನಲ್ಲಿ “ರಾಮಾಚಾರಿ 2.0′ ಎಂಬ ಮತ್ತೂಂದು ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಅಂದ ಹಾಗೆ, ಈ ಸಿನಿಮಾದ ಟೈಟಲ್ “ರಾಮಾಚಾರಿ 2.0′ ಅಂತಿದ್ದರೂ, ಈ ಹಿಂದೆ ಬಂದ “ರಾಮಾಚಾರಿ’ ಹೆಸರಿನ ಸಿನಿಮಾಗಳಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಸಿನಿಮಾದ ಸಬ್ಜೆಕ್ಟ್ ಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಈ ಟೈಟಲ್ ಇಡಲಾಗಿದೆ ಎಂಬುದು “ರಾಮಾಚಾರಿ 2.0′ ಸಿನಿಮಾದ ನಾಯಕ ಕಂ ನಿರ್ದೇಶಕ ತೇಜ್ ಮಾತು.
“ಮೀಸೆ ಚಿಗುರಿದಾಗ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ಪರಿಚಯವಾಗಿರುವ ತೇಜ್, “ರಾಮಾಚಾರಿ 2.0′ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿರುವುದರ ಜೊತೆಗೆ, ನಿರ್ದೇಶನವನ್ನೂ ಮಾಡಿದ್ದಾರೆ. ಹಿರಿಯ ನಟ ರಾಘವೇಂದ್ರ ರಾಜಕುಮಾರ್, ಸ್ಪರ್ಶ ರೇಖಾ, ಚಂದನ, ಸ್ವಾತಿ, ವಿಜಯ್ ಚೆಂಡೂರು, ಕೌಸ್ತುಭಾ, ಸಂದೀಪ್ ಮಲಾನಿ ಮುಂತಾದವರು “ರಾಮಾಚಾರಿ 2.0′ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಯಾರು ಪಾಪ ಮಾಡುತ್ತಾರೋ ಅವರಿಗೆ ಕರ್ಮ ಸುತ್ತಿಕೊಂಡು ಬರುತ್ತದೆ ಎಂಬ ಕರ್ಮ ಸಿದ್ಧಾಂತದ ಸುತ್ತ “ರಾಮಾಚಾರಿ 2.0′ ಸಿನಿಮಾದ ಕಥಾಹಂದರ ಸಾಗುತ್ತದೆ. ಕ್ಲಾಸ್ ಸಬ್ಜೆಕ್ಟ್ ಒಂದನ್ನು ಮಾಸ್ ಎಲಿಮೆಂಟ್ಸ್ ಜೊತೆಗೆ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ’ ಎಂಬುದು ಸಿನಿಮಾದ ಬಗ್ಗೆ ನಾಯಕ ನಟ ಕಂ ನಿರ್ದೇಶಕ ತೇಜ್ ಮಾತು.
ಈಗಾಗಲೇ ಬಿಡುಗಡೆಯಾಗಿರುವ “ರಾಮಾಚಾರಿ 2.0′ ಸಿನಿಮಾದ ಟ್ರೇಲರ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಇದೇ ಖುಷಿಯಲ್ಲಿರುವ ಚಿತ್ರತಂಡ ಏಪ್ರಿಲ್ 7 ರಂದು ಬೆಂಗಳೂರಿನ ನವರಂಗ್ ಸೇರಿದಂತೆ ರಾಜ್ಯಾದ್ಯಂತ ಸಿನಿಮಾವನ್ನು ತೆರೆಗೆ ತರಲು ಯೋಜನೆ ಹಾಕಿಕೊಂಡಿದೆ. ಜೊತೆಗೆ ಸಿಂಗಾಪುರ್, ಮಸ್ಕತ್, ದುಬೈ ಮೊದಲಾದ ಕಡೆಗಳಲ್ಲೂ ಸಿನಿಮಾ ತೆರೆ ಕಾಣಲಿದೆ.
“ಪನಾರಮಿಕ್ ಸ್ಟುಡಿಯೋಸ್’ ಮತ್ತು “ಮೇಘನಾ ಕ್ರಿಯೇಶನ್ಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ರಾಮಾಚಾರಿ 2.0′ ಸಿನಿಮಾಕ್ಕೆ ಪ್ರವೀಣ್ ಎಂ. ಛಾಯಾಗ್ರಹಣ, ಕಿರಣ್ ಕುಮಾರ್ ಸಂಕಲನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Politicians ಜಾತಿ, ಧರ್ಮಗಳ ಮೂಲಕ ನಮ್ಮನ್ನು ಪ್ರತ್ಯೇಕಿಸುತ್ತಿದ್ದಾರೆ: ತುಷಾರ್ ಗಾಂಧಿ
Tirupati Laddu; ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದ ಪರೀಕ್ಷಿಸಬೇಕು: ಜೋಶಿ ಆಗ್ರಹ
Flipkart Big Billion Day ಸೆ. 27 ರಿಂದ ಆರಂಭ
FollowUp:Tirupati Laddoo ವಿವಾದ- ಆಂಧ್ರ ಸಿಎಂ ಬಳಿ ವಿಸ್ತೃತ ವರದಿ ಕೇಳಿದ ಕೇಂದ್ರ ಸರ್ಕಾರ
Belagavi: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಶೆಟ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.