ಒಲವು ಮೂಡಿಸುವ ಚಿತ್ರವಿದು…: ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಬಗ್ಗೆ ರಮ್ಯಾ ಮಾತು


Team Udayavani, Jan 16, 2023, 2:54 PM IST

ramya spoke about swathi muttina male haniye

ರಾಜ್‌ ಬಿ. ಶೆಟ್ಟಿ ನಿರ್ದೇಶನ ಮತ್ತು ಅಭಿನಯದ “ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಚಿತ್ರೀಕರಣ ಇತ್ತೀಚೆಗೆ ಪೂರ್ಣಗೊಂಡಿದ್ದು, ಸದ್ಯ ಈ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದೆ. ಇನ್ನು ನಟಿ ರಮ್ಯಾ ಇದೇ ಮೊದಲ ಬಾರಿಗೆ “ಆಪಲ್‌ ಬಾಕ್ಸ್‌ ಸ್ಟುಡಿಯೋಸ್‌’ ಬ್ಯಾನರ್‌ ಮೂಲಕ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ನಿರ್ಮಾಪಕಿಯಾಗಿ ಸ್ಯಾಂಡಲ್‌ವುಡ್‌ನ‌ಲ್ಲಿ ಹೊಸ ಇನ್ನಿಂಗ್ಸ್‌ ಶುರು ಮಾಡುವ ಉತ್ಸಾಹದಲ್ಲಿದ್ದಾರೆ.

ಸದ್ಯ ತೆರೆಗೆ ಬರಲು ತಯಾರಾಗುತ್ತಿರುವ “ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಬಗ್ಗೆ ನಿರ್ಮಾಪಕಿ ರಮ್ಯಾ ಒಂದಷ್ಟು ನಿರೀಕ್ಷೆಯ ಮಾತನಾಡಿದ್ದಾರೆ. “ಈ ಸಿನಿಮಾವೂ ನಮ್ಮೆಲ್ಲರನ್ನು ಪ್ರೀತಿ-ಪ್ರೇಮದೊಂದಿಗೆ ಒಲವಾಗುವಂತೆ ಮಾಡುತ್ತೆ ಎಂದು ವಿಶ್ವಾಸದಿಂದ ಹೇಳುತ್ತೇನೆ. ಮೊದಲ ಬಾರಿ ನಾನು ನಿರ್ಮಾಪಕಿಯ ಜವಾಬ್ದಾರಿ ನಿರ್ವಹಿಸುತ್ತಾ ಬಹಳಷ್ಟು ವಿಷಯಗಳನ್ನು ಈ ಸಿನಿಮಾದಿಂದ ಕಲಿತಿದ್ದೇನೆ. ನನಗಿದೊಂದು ಅದ್ಭುತವಾದ ಅನುಭವ. ಈ ಸಿನಿಮಾವು ಪ್ರೀತಿ ಹಾಗು ಆತ್ಮಶೋಧನೆಯನ್ನು ಕುರಿತು ಒಂದು ಸುಂದರ, ಕಾವ್ಯಾತ್ಮಕ ಹಾಗು ಸೌಮ್ಯ ಅನುಭವವಾಗಲಿದೆ’ ಎಂದಿದ್ದಾರೆ.

“ಕಳೆದ ವಿಜಯ ದಶಮಿಯಂದು ಈ ಸಿನಿಮಾವನ್ನು ಅನೌನ್ಸ್‌ ಮಾಡಲಾಗಿತ್ತು. ಹಲವು ಸುಂದರ ತಾಣಗಳಲ್ಲಿ ಈ ಸಿನಿಮಾದ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಫ‌ಸ್ಟ್‌ಲುಕ್‌ ಪೋಸ್ಟರ್‌ ಮತ್ತು ಪಾತ್ರಗಳನ್ನು ಪರಿಚಯಿಸಲು ಬಿಡುಗಡೆ ಮಾಡಿದ ಪೋಸ್ಟರ್‌ಗಳು ಈಗಾಗಲೇ ಎಲ್ಲರ ಗಮನವನ್ನು ಸೆಳೆದಿದೆ. ಅದರಂತೆ, “ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಕೂಡ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂಬುದು ರಮ್ಯಾ ಅವರ ಭರವಸೆಯ ಮಾತು.

ಇದನ್ನೂ ಓದಿ:ವಯಾಕಾಮ್ 18 ಪಾಲಾದ ಮಹಿಳಾ ಐಪಿಎಲ್ ಮಾಧ್ಯಮ ಹಕ್ಕು: ಪ್ರತಿ ಪಂದ್ಯಕ್ಕೆ 7.09 ಕೋಟಿ ಬೆಲೆ

“ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲಿ ನಟ ಕಂ ನಿರ್ದೇಶಕ ರಾಜ್‌ ಬಿ ಶೆಟ್ಟಿ ಮತ್ತು ಸಿರಿ ರವಿಕುಮಾರ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, “ಅನಿಕೇತ್‌’ ಮತ್ತು “ಪ್ರೇರಣಾ’ ಎಂಬ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಬಾಲಾಜಿ ಮನೋಹರ್‌, ಸೂರ್ಯ ವಸಿಷ್ಠ, ರೇಖಾ ಕೂಡ್ಲಿಗಿ, ಸ್ನೇಹ ಶರ್ಮ, ಜೆ.ಪಿ

ತುಮ್ಮಿನಾಡ್‌, ಗೋಪಾಲಕೃಷ್ಣ ದೇಶಪಾಂಡೆ ಮತ್ತಿತರರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಮಿಧುನ್‌ ಮುಕುಂದನ್‌ ಸಂಗೀತ ಸಂಯೋಜಿಸಲಿದ್ದು, ಪ್ರವೀಣ್‌ ಶ್ರೀಯಾನ್‌ ಛಾಯಾಗ್ರಹಣ ಮತ್ತು ಸಂಕಲನವಿದೆ

ಟಾಪ್ ನ್ಯೂಸ್

Kaithota

Bengaluru: ಬುದ್ಧಿಮಾಂದ್ಯರಿಗೆ ಇಕೋ ಥೆರಪಿ, ಕೈತೋಟ ತರಬೇತಿ

Elephant In Zambia Pulls US Tourist Out Of Safari Vehicle

Zambia: ಸಫಾರಿ ವಾಹನದಿಂದ ಮಹಿಳೆಯನ್ನು ಹೊರಗೆಳೆದು ಹತ್ಯೆ ಮಾಡಿದ ಆನೆ!

3-koratagere

Koratagere: ಅಮರ ಪ್ರೀತಿಗೆ ಯುವತಿ ಸಾವು; ಶವ ಪತ್ತೆ

2-aranthodu

Aranthodu: ತಡರಾತ್ರಿ ಭೀಕರ ಕಾರು ಅಪಘಾತ

ibbani tabbida ileyali movie song

Ibbani Tabbida Ileyali; ಬಿಡುಗಡೆಯಾಯಿತು ‘ಓ ಅನಾಹಿತ…..’ ಹಾಡು

Afghanistan have Beaten Australia in T20 World cup Super 8 match

T20 World Cup: ಆಸೀಸ್ ಗೆ ಸೋಲುಣಿಸಿದ ಅಫ್ಘಾನ್; ರೋಚಕ ಘಟ್ಟದತ್ತ ಸೂಪರ್ 8

T20 World Cup; ವಿಶ್ವದಾಖಲೆ ಬರೆದ ಪ್ಯಾಟ್ ಕಮಿನ್ಸ್; ಎರಡು ಪಂದ್ಯದಲ್ಲಿ ಎರಡು ಹ್ಯಾಟ್ರಿಕ್

T20 World Cup; ಎರಡು ಪಂದ್ಯದಲ್ಲಿ ಎರಡು ಹ್ಯಾಟ್ರಿಕ್: ವಿಶ್ವದಾಖಲೆ ಬರೆದ ಪ್ಯಾಟ್ ಕಮಿನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ibbani tabbida ileyali movie song

Ibbani Tabbida Ileyali; ಬಿಡುಗಡೆಯಾಯಿತು ‘ಓ ಅನಾಹಿತ…..’ ಹಾಡು

yenne party kannada movie

Sandalwood: ಹೊಸಬರ ಚಿತ್ರ ‘ಎಣ್ಣೆ ಪಾರ್ಟಿ’

RenukaSwamy Case: ದರ್ಶನ್‌ ಸೇರಿ ನಾಲ್ವರಿಗೆ ನ್ಯಾಯಾಂಗ ಬಂಧನ

RenukaSwamy Case: ದರ್ಶನ್‌ ಸೇರಿ ನಾಲ್ವರಿಗೆ ನ್ಯಾಯಾಂಗ ಬಂಧನ

Duniya Vijay; ‘ಭೀಮ’ ಬಿಡುಗಡೆ ದಿನಾಂಕ ಘೋಷಣೆ

Duniya Vijay; ‘ಭೀಮ’ ಬಿಡುಗಡೆ ದಿನಾಂಕ ಘೋಷಣೆ

Actress Ramya: ದರ್ಶನ್‌,ಪ್ರಜ್ವಲ್‌, ಬಿಎಸ್‌ ವೈ ವಿರುದ್ಧ ಕಿಡಿಕಾರಿದ ರಮ್ಯಾ; ಇವರಿಂದ..

Actress Ramya: ದರ್ಶನ್‌,ಪ್ರಜ್ವಲ್‌, ಬಿಎಸ್‌ ವೈ ವಿರುದ್ಧ ಕಿಡಿಕಾರಿದ ರಮ್ಯಾ; ಇವರಿಂದ..

MUST WATCH

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

ಹೊಸ ಸೇರ್ಪಡೆ

Ramanagar: ಪತ್ನಿ, ಪ್ರಿಯಕರ ಸೇರಿ ಮಗುವಿನ ಮೇಲೆ ಹಲ್ಲೆ: ದೂರು ದಾಖಲು

Ramanagar: ಪತ್ನಿ, ಪ್ರಿಯಕರ ಸೇರಿ ಮಗುವಿನ ಮೇಲೆ ಹಲ್ಲೆ: ದೂರು ದಾಖಲು

Driving license: ಡ್ರೈವಿಂಗ್‌ ಲೈಸೆನ್‌ ನೀಡಲು ಮುಂದೆ ಬಂದ ಖಾಸಗಿ ಕೇಂದ್ರ

Driving license: ಡ್ರೈವಿಂಗ್‌ ಲೈಸೆನ್‌ ನೀಡಲು ಮುಂದೆ ಬಂದ ಖಾಸಗಿ ಕೇಂದ್ರ

Kaithota

Bengaluru: ಬುದ್ಧಿಮಾಂದ್ಯರಿಗೆ ಇಕೋ ಥೆರಪಿ, ಕೈತೋಟ ತರಬೇತಿ

Elephant In Zambia Pulls US Tourist Out Of Safari Vehicle

Zambia: ಸಫಾರಿ ವಾಹನದಿಂದ ಮಹಿಳೆಯನ್ನು ಹೊರಗೆಳೆದು ಹತ್ಯೆ ಮಾಡಿದ ಆನೆ!

3-koratagere

Koratagere: ಅಮರ ಪ್ರೀತಿಗೆ ಯುವತಿ ಸಾವು; ಶವ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.