ಹೊಸ ಸಿನಿಮಾಗೆ ರವಿಚಂದ್ರನ್‌ ಗ್ರೀನ್‌ ಸಿಗ್ನಲ್‌


Team Udayavani, Mar 27, 2023, 6:14 PM IST

Ravichandran gave green signal for new movie

ನಟ ರವಿಚಂದ್ರನ್‌ ಶೀಘ್ರದಲ್ಲಿಯೇ ಲೀಗಲ್‌ ಥ್ರಿಲ್ಲರ್‌ ಶೈಲಿಯ ಸಿನಿಮಾವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ. ಈ ಹಿಂದೆ “ಆಕ್ಸಿಡೆಂಟ್‌’, “ಲಾಸ್ಟ್‌ಬಸ್‌, “ಅಮೃತ್‌ ಅಪಾರ್ಟ್‌ಮೆಂಟ್ಸ್‌’ ನಂತಹ ಸಿನಿಮಾಗಳನ್ನು ನಿರ್ಮಿಸಿರುವ ಗುರುರಾಜ ಕುಲಕರ್ಣಿ (ನಾಡಗೌಡ) ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ “ಜಿ9 ಕಮ್ಯುನಿಕೇಶನ್‌ ಮೀಡಿಯ ಅಂಡ್‌ ಎಂಟರ್‌ ಟೈನ್ಮೆಂಟ್‌’ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿದೆ.

ಈಗಾಗಲೇ ಈ ಸಿನಿಮಾದ ಕಥಾಹಂದರವನ್ನು ಕೇಳಿ ಮೆಚ್ಚಿಕೊಂಡಿರುವ ರವಿಚಂದ್ರನ್‌ ಈ ಸಿನಿಮಾದ ಪಾತ್ರಕ್ಕೆ ಬಣ್ಣ ಹಚ್ಚಲು ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ. ಮೊದಲ ಬಾರಿಗೆ ರವಿಚಂದ್ರನ್‌ ಲೀಗಲ್ -ಥ್ರಿಲ್ಲರ್‌ ಶೈಲಿಯ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, “ಕೌಟುಂಬಿಕ ಪ್ರೇಕ್ಷಕ ವರ್ಗದ ಜೊತೆಗೆ, ಜಾಗತಿಕ ಮಟ್ಟದಲ್ಲಿನ ಹಲವಾರು ಭಾಷೆಗಳ, ವಿವಿಧ ಬಗೆಯ ಕಥೆಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಇಂದಿನ ಯುವ ಪೀಳಿಗೆಯೊಂದಿಗೂ, ಈ ಸಿನಿಮಾದ ಮೂಲಕ ತಾವು ಹತ್ತಿರವಾಗುವ ಅವಕಾಶವಿದೆ’ ಎಂಬ ನಿರೀಕ್ಷೆಯ ಮಾತು ರವಿಚಂದ್ರನ್‌ ಅವರದ್ದು.

ಇನ್ನು ಹೆಸರಿಡದ ಈ ಸಿನಿಮಾದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದ್ದು, ಸ್ವತಃ ಗುರುರಾಜ್‌ ಕುಲಕರ್ಣಿ ಅವರೇ ಕಥೆ ಬರೆದು ನಿರ್ಮಾಣ ಮತ್ತು ನಿರ್ದೇಶನ ಮಾಡುತ್ತಿರುವ ಈ ಸಿನಿಮಾಕ್ಕೆ ಎಂ. ಎಸ್‌ ರಮೇಶ್‌ ಸಂಭಾಷಣೆಯಿದೆ. ಚಿತ್ರದ ಹಾಡುಗಳಿಗೆ ಅನೂಪ್‌ ಸೀಳಿನ್‌ ಸಂಗೀತ ಸಂಯೋಜನೆಯಿದ್ದು, ಶಿವ ಬಿ. ಕೆ ಕುಮಾರ್‌ ಛಾಯಾಗ್ರಹಣ, ಬಿ. ಎಸ್‌ ಕೆಂಪರಾಜು ಸಂಕಲನವಿದೆ.

ಸದ್ಯ ರವಿಚಂದ್ರನ್‌ ಅವರೊಂದಿಗೆ ಇತರ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದೆ. ದೊಡ್ಡ ಕಲಾವಿದರ ಕ್ಯಾನ್ವಾಸ್‌ ಸಿನಿಮಾದಲ್ಲಿರಲಿದ್ದು, ಚಿತ್ರತಂಡದ ಮೂಲಗಳ ಪ್ರಕಾರ ಇದೇ ಏಪ್ರಿಲ್‌ ತಿಂಗಳಿನಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ.

ಟಾಪ್ ನ್ಯೂಸ್

2-belagavi

Electric Shock: ಬಿಲ್ ಕಟ್ಟದಿರಲು ನೇಕಾರರ ನಿರ್ಧಾರ

LEH LADAKH

Delhi-Leh ಗೆ ನೇರ ಬಸ್‌- ಜೂ.15ರಿಂದ ಆರಂಭ

INDO CANADA

ನಕಲಿ ದಾಖಲೆ: ವಿದ್ಯಾರ್ಥಿಗಳು ಅತಂತ್ರ

LAKE

ಕೆರೆ ಸಂರಕ್ಷಣೆಗೆ “ಹಸುರು ಸರೋವರ” ಯೋಜನೆ

SIDDARAMAYYA 1

August ತಿಂಗಳಿನಲ್ಲಿ 2 ಗ್ಯಾರಂಟಿ ಜಾರಿ

ICC INDIA

ICC World Cup Test Championship ಫೈನಲ್‌: ಫಾಲೋಆನ್‌ ತಪ್ಪಿಸಲು ಭಾರತ ಪ್ರಯತ್ನ

hdk

ವರ್ಗಾವಣೆ ದಂಧೆ; ಪ್ರತಿ ಹುದ್ದೆಗೆ “ಶುಲ್ಕ”:ಸರಕಾರದ ವಿರುದ್ಧ HDK ವಾಗ್ಧಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

‘ಯಾವ ಮೋಹನ ಮುರಳಿ ಕರೆಯಿತು…’: ಶ್ವಾನ ಪ್ರೀತಿಯ ಸುತ್ತ ಮತ್ತೊಂದು ಚಿತ್ರ

‘ಯಾವ ಮೋಹನ ಮುರಳಿ ಕರೆಯಿತು…’: ಶ್ವಾನ ಪ್ರೀತಿಯ ಸುತ್ತ ಮತ್ತೊಂದು ಚಿತ್ರ

Click Cinema: ಚಿತ್ರರಂಗಕ್ಕೆ ಎಂಟ್ರಿಕೊಟ್ಟ ರವಿ ಬಸ್ರೂರ್‌ ಪುತ್ರ ಪವನ್‌ ಬಸ್ರೂರು

Click Cinema: ಚಿತ್ರರಂಗಕ್ಕೆ ಎಂಟ್ರಿಕೊಟ್ಟ ರವಿ ಬಸ್ರೂರ್‌ ಪುತ್ರ ಪವನ್‌ ಬಸ್ರೂರು

ಜಾಹ್ನವಿ ದರ್ಬಾರ್‌: ಚೊಚ್ಚಲ ಚಿತ್ರದ ಮೇಲೆ ನವ ನಟಿಯ ನಿರೀಕ್ಷೆ

ಜಾಹ್ನವಿ ದರ್ಬಾರ್‌: ಚೊಚ್ಚಲ ಚಿತ್ರದ ಮೇಲೆ ನವ ನಟಿಯ ನಿರೀಕ್ಷೆ

ಮೈಸೂರಿನಲ್ಲಿ ಶ್ರೀಲೀಲಾ ತೆಲುಗು ಸಿನಿಮಾ

ಮೈಸೂರಿನಲ್ಲಿ ಶ್ರೀಲೀಲಾ ತೆಲುಗು ಸಿನಿಮಾ

ಚಿರು ಇಲ್ಲದ ಮೂರು ವರುಷ

ಚಿರು ಇಲ್ಲದ ಮೂರು ವರುಷ

MUST WATCH

udayavani youtube

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಹೊಸ ಸೇರ್ಪಡೆ

2-belagavi

Electric Shock: ಬಿಲ್ ಕಟ್ಟದಿರಲು ನೇಕಾರರ ನಿರ್ಧಾರ

LEH LADAKH

Delhi-Leh ಗೆ ನೇರ ಬಸ್‌- ಜೂ.15ರಿಂದ ಆರಂಭ

INDO CANADA

ನಕಲಿ ದಾಖಲೆ: ವಿದ್ಯಾರ್ಥಿಗಳು ಅತಂತ್ರ

LAKE

ಕೆರೆ ಸಂರಕ್ಷಣೆಗೆ “ಹಸುರು ಸರೋವರ” ಯೋಜನೆ

SIDDARAMAYYA 1

August ತಿಂಗಳಿನಲ್ಲಿ 2 ಗ್ಯಾರಂಟಿ ಜಾರಿ