ಕ್ರೇಜಿ ಕನಸಿನ ದೃಶ್ಯ-2: ಟ್ರೇಲರ್‌ ರಿಲೀಸ್‌ ಗೆ ಸುದೀಪ್‌ ಸಾಥ್‌

Team Udayavani, Nov 29, 2021, 9:21 AM IST

drishya 2

ಮಲಯಾಳಂನಲ್ಲಿ ಬಂದ “ದೃಶ್ಯಂ’ ಕನ್ನಡದಲ್ಲಿ “ದೃಶ್ಯ’ವಾಗಿ ದೊಡ್ಡ ಹಿಟ್‌ ಆಗಿತ್ತು. ಪಕ್ಕಾ ಫ್ಯಾಮಿಲಿ ಮ್ಯಾನ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರವಿಚಂದ್ರನ್‌ ಅವರಿಗೆ ಈ ಚಿತ್ರ ದೊಡ್ಡ ಗೆಲುವು ತಂದುಕೊಟ್ಟಿತು. ಈಗ “ದೃಶ್ಯ-2′ ಸರದಿ. “ದೃಶ್ಯಂ’ ಚಿತ್ರದ ಮುಂದುವರೆದ ಭಾಗ ಮಲಯಾಳಂನಲ್ಲಿ “ದೃಶ್ಯಂ-2′ ಆಗಿದೆ. ಈಗ ಕನ್ನಡದಲ್ಲಿ “ದೃಶ್ಯ-2′ ಆಗಿ ಬಿಡುಗಡೆಯ ಹಂತಕ್ಕೆ ಬಂದಿದೆ.

ಮೊದಲ ಹಂತವಾಗಿ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ ಸುದೀಪ್‌ ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಜೊತೆಗೆ ಸಿನಿಮಾ ಬಗ್ಗೆ ಒಂದಷ್ಟು ವಿಚಾರ ಹಂಚಿಕೊಂಡರು.

“ದೃಶ್ಯ ಚಿತ್ರ ಮಲಯಾಳಂ ಸೇರಿದಂತೆ ಬೇರೆ ಬೇರೆ ಭಾಷೆಯಲ್ಲಿ ಬಂದಿದೆ ಎಂದರು. ಆದರೆ ನಾನು ಯಾವ ಭಾಷೆಯಲ್ಲೂ ಈ ಸಿನಿಮಾ ನೋಡಿಲ್ಲ. ಹಾಗಾಗಿ ನನಗೆ ಕಥೆ ಗೊತ್ತಿಲ್ಲ. ನನ್ನ ಹೆಂಡತಿ ಮಲೆಯಾಳಿ. ಅವರು ಮಲೆಯಾಳಂ ಚಿತ್ರ ನೋಡುವಾಗ ನನಗೂ ತೋರಿಸುತ್ತಾರೆ. ನಾನು ಸಬ್‌ ಟೈಟಲ್‌ ನೋಡುತ್ತಿರುತ್ತೇನೆ. ಒಳ್ಳೆಯ ಕಲಾವಿದರು ಹಾಗೂ ಒಳ್ಳೆಯ ತಂತ್ರಜ್ಞರು ಸೇರಿ ಮಾಡಿದಾಗ ಅದು ಒಳ್ಳೆಯ ಸಿನಿಮಾನೇ ಆಗಿರುತ್ತದೆ. ದೃಶ್ಯ ಚಿತ್ರವನ್ನು ಕನ್ನಡದಲ್ಲೇ ನೋಡಿದ್ದೀನಿ. ಎರಡನೇ ಭಾಗವನ್ನು ಕನ್ನಡದಲ್ಲೇ ನೋಡುತ್ತೇನೆ. ಮೂರನೇ ಭಾಗ ಕನ್ನಡದಿಂದ ಆರಂಭವಾಗಲಿ’ ಎಂದರು.

ಇದನ್ನೂ ಓದಿ:ಪುನೀತ್‌ ಇಲ್ಲದೇ ಒಂದು ತಿಂಗಳು: ಮಾಸ ಕಳೆದರೂ ಮಾಸದ ನೋವು

ನಟ ರವಿಚಂದ್ರನ್‌, ಸುದೀಪ್‌ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು. “ಸುದೀಪ್‌ ನನ್ನ ಮಗ. ಆತನನ್ನು ಬರಮಾಡಿಕೊಳ್ಳಲು ನಾನೇ ಮುಖ್ಯದ್ವಾರದ ಬಳಿ ಹೋಗಿದ್ದೆ. ನನ್ನ ಸಮಾರಂಭಕ್ಕೆ ಬರಲು ಸುದೀಪ್‌ ಗೆ ಕರೆಯಬೇಕೆಂದು ಏನು ಇಲ್ಲ. ಆರ್ಡರ್‌ ಮಾಡಬಹುದು. ಏಕೆಂದರೆ ಆತ ನನ್ನ ಮಗ. ಸುದೀಪ್‌ ಸಮಾರಂಭಗಳಿಗೆ ನಾನು ಹಾಗೆ ಹೋಗುತ್ತೇನೆ. ನಮ್ಮಿಬ್ಬರಲ್ಲಿ ಆ ಬಾಂಧವ್ಯವಿದೆ’ ಎಂದ ರವಿಚಂದ್ರನ್‌, ಪಿ.ವಾಸು ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ, ಮೊದಲ ಭಾಗದ ತರಹ ನೂರಕ್ಕೆ ನೂರು ಜನರ ಮೆಚ್ಚುಗೆಗೆ ಪಾತ್ರವಾಗಲಿದೆ. ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕೈಚಳಕ ತುಂಬಾ ಚೆನ್ನಾಗಿದೆ. ದೃಶ್ಯ ಚಿತ್ರದ ಚಿತ್ರತಂಡ ಬಹುತೇಕ ಈ ಚಿತ್ರದಲ್ಲೂ ಇದೆ. ಹಿರಿಯ ನಟ ಅನಂತನಾಗ್‌ “ದೃಶ್ಯ-2’ನಲ್ಲಿ ಅಭಿನಯಿಸಿದ್ದಾರೆ. ಒಬ್ಬ ಜವಾಬ್ದಾರಿಯುತ ತಂದೆ ಸಂಕಷ್ಟದಿಂದ ತನ್ನ ಕುಟುಂಬವನ್ನು ಹೇಗೆ ಪಾರು ಮಾಡುತ್ತಾನೆ ಎಂಬ ವಿಷಯ ಚಿತ್ರದ ಹೈಲೆಟ್‌’ ಎಂದರು.

ನಿರ್ದೇಶಕ ಪಿ.ವಾಸು ಮಾತನಾಡಿ, “ದೃಶ್ಯ 2 ಬಿಡುಗಡೆಗೆ ಸಿದ್ಧವಾಗಿದೆ. ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ನನಗೆ ಈ ಸಿನಿಮಾದಲ್ಲಿ ಇಷ್ಟವಾಗಿದ್ದು, ರವಿಚಂದ್ರ ಹಾಗೂ ನವ್ಯಾ ನಾಯರ್‌ ಅವರ ರಿಲೇಶನ್‌ ಶಿಪ್‌. ಅವರಿಬ್ಬರ ನೈಜ ಅಭಿನಯ ತುಂಬಾ ಚೆನ್ನಾಗಿದೆ. ಯಾವಾಗಲೂ ಒಬ್ಬ ನಿರ್ದೇಶಕ, ಯಾವ ನಾಯಕನ ಸಿನಿಮಾ ಮಾಡುತ್ತಾನೋ, ಮೊದಲು ಅವನ ಫ್ಯಾನ್‌ ಆಗಬೇಕು. ಆಗ ಸಿನಿಮಾ ಉತ್ತಮವಾಗಿ ಮೂಡಿ ಬರುತ್ತದೆ. ರವಿಚಂದ್ರ ಅವರಂತೂ ಕಂಪ್ಲೀಟ್‌ ಸ್ಟಾರ್‌’ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು

ಟಾಪ್ ನ್ಯೂಸ್

appu photo

ದೀಪ ರಾಯಭಾರಿ ಪುನೀತ್ ಸ್ಮರಣೆಗೆ ಇಂದು ದೀಪ‌ನಮನ

5accident

ಪುತ್ತೂರು: ಜೀಪ್-ರಿಕ್ಷಾ ಢಿಕ್ಕಿ; ಮೂವರು ಕೂಲಿ ಕಾರ್ಮಿಕರು ಗಂಭೀರ

PUBG ಪ್ರಭಾವ; ತಾಯಿ ಸೇರಿ ಇಡೀ ಕುಟುಂಬ ಸದಸ್ಯರನ್ನು ಗುಂಡಿಕ್ಕಿ ಕೊಂದ 14ರ ಬಾಲಕ

PUBG ಪ್ರಭಾವ; ತಾಯಿ ಸೇರಿ ಇಡೀ ಕುಟುಂಬ ಸದಸ್ಯರನ್ನು ಗುಂಡಿಕ್ಕಿ ಕೊಂದ 14ರ ಬಾಲಕ

krishna milana nagaraj

ಲವ್‌ ಮಾಕ್ಟೇಲ್‌-2 ಟ್ರೇಲರ್‌ ವಿಷಯದಲ್ಲಿ ಗಂಡ-ಹೆಂಡ್ತಿ ಜಗಳ!

ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಪ್ರಿಯತಮೆ; ರಕ್ಷಿಸಲು ಹೋದ ಪ್ರಿಯಕರ ಸಮುದ್ರಪಾಲು

ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಪ್ರಿಯತಮೆ; ರಕ್ಷಿಸಲು ಹೋದ ಪ್ರಿಯಕರ ಸಮುದ್ರಪಾಲು

1-qqw

ನಾನು ಕಪಾಳಕ್ಕೆ ಹೊಡೆದಿಲ್ಲ, ಅವರೇ ಕುಡಿದಿರಬೇಕು: ಎಂ.ಪಿ.ಕುಮಾರಸ್ವಾಮಿ ಸ್ಪಷ್ಟನೆ

3women

ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ನವ ವಿವಾಹಿತೆ ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

krishna milana nagaraj

ಲವ್‌ ಮಾಕ್ಟೇಲ್‌-2 ಟ್ರೇಲರ್‌ ವಿಷಯದಲ್ಲಿ ಗಂಡ-ಹೆಂಡ್ತಿ ಜಗಳ!

ಜ.31ಕ್ಕೆ ‘ತೋತಾಪುರಿ’ ವಿಡಿಯೋ ಸಾಂಗ್‌

ಜ.31ಕ್ಕೆ ‘ತೋತಾಪುರಿ’ ವಿಡಿಯೋ ಸಾಂಗ್‌

mafia

ಮಾಫಿಯಾ ಟೀಸರ್‌ ಗೆ ಮೆಚ್ಚುಗೆ: ನಿರೀಕ್ಷೆ ಹೆಚ್ಚಿಸುತ್ತಿದೆ ಪ್ರಜ್ವಲ್‌ ಚಿತ್ರ

aditi prabhudeva

ಮನ ಮೆಚ್ಚಿದ ಹುಡುಗನ ಬಗ್ಗೆ ಅದಿತಿ ಮಾತು

ಸಸ್ಪೆನ್ಸ್‌-ಥ್ರಿಲ್ಲರ್‌ “ಸ್ತಬ್ಧ”: ರಾಘವೇಂದ್ರ ರಾಜಕುಮಾರ್‌ ನಟನೆ

ಸಸ್ಪೆನ್ಸ್‌-ಥ್ರಿಲ್ಲರ್‌ “ಸ್ತಬ್ಧ”: ರಾಘವೇಂದ್ರ ರಾಜಕುಮಾರ್‌ ನಟನೆ

MUST WATCH

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ಸಾವಯವ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

udayavani youtube

ಬೀದಿ ದೀಪ, ಸಿಬ್ಬಂದಿ ಸಂಬಳದ್ದೇ ಬಿಸಿ ಬಿಸಿ ಚರ್ಚೆ

ಹೊಸ ಸೇರ್ಪಡೆ

appu photo

ದೀಪ ರಾಯಭಾರಿ ಪುನೀತ್ ಸ್ಮರಣೆಗೆ ಇಂದು ದೀಪ‌ನಮನ

5accident

ಪುತ್ತೂರು: ಜೀಪ್-ರಿಕ್ಷಾ ಢಿಕ್ಕಿ; ಮೂವರು ಕೂಲಿ ಕಾರ್ಮಿಕರು ಗಂಭೀರ

PUBG ಪ್ರಭಾವ; ತಾಯಿ ಸೇರಿ ಇಡೀ ಕುಟುಂಬ ಸದಸ್ಯರನ್ನು ಗುಂಡಿಕ್ಕಿ ಕೊಂದ 14ರ ಬಾಲಕ

PUBG ಪ್ರಭಾವ; ತಾಯಿ ಸೇರಿ ಇಡೀ ಕುಟುಂಬ ಸದಸ್ಯರನ್ನು ಗುಂಡಿಕ್ಕಿ ಕೊಂದ 14ರ ಬಾಲಕ

krishna milana nagaraj

ಲವ್‌ ಮಾಕ್ಟೇಲ್‌-2 ಟ್ರೇಲರ್‌ ವಿಷಯದಲ್ಲಿ ಗಂಡ-ಹೆಂಡ್ತಿ ಜಗಳ!

ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಪ್ರಿಯತಮೆ; ರಕ್ಷಿಸಲು ಹೋದ ಪ್ರಿಯಕರ ಸಮುದ್ರಪಾಲು

ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಪ್ರಿಯತಮೆ; ರಕ್ಷಿಸಲು ಹೋದ ಪ್ರಿಯಕರ ಸಮುದ್ರಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.