

Team Udayavani, May 24, 2024, 9:22 AM IST
“ದ ಜಡ್ಜ್ ಮೆಂಟ್’ ಇಂದು ತೆರೆ ತೆರೆಕಾಣುತ್ತಿದೆ. ನ್ಯಾಯಾಂಗ ವ್ಯವಸ್ಥೆ, ನ್ಯಾಯಾ ಲಯ, ಅದರ ಹಿಂದಿನ ಪ್ರಕ್ರಿಯೆಗಳು ಹೀಗೆ ಮೇಲ್ನೋಟಕ್ಕೆ ಕಾಣದ, ಜನ ಸಾಮಾನ್ಯರ ಅರಿವಿಗೆ ಬಾರದಂಥ ಅನೇಕ ವಿಷಯಗಳನ್ನು “ದ ಜಡ್ಜ್ಮೆಂಟ್’ ಸಿನಿಮಾದಲ್ಲಿ ರೋಚಕವಾಗಿ ಮತ್ತು ಕುತೂಹಲ ಭರಿತವಾಗಿ ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಗುರುರಾಜ ಕುಲಕರ್ಣಿ.
“ಕನ್ನಡದಲ್ಲಿ ಲೀಗಲ್-ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾಗಳು ಬಂದಿರುವುದು ತುಂಬ ವಿರಳ. ಇಂಥ ವಿರಳ ಸಿನಿಮಾಗಳ ಸಾಲಿನಲ್ಲಿ “ದ ಜಡ್ಜ್ಮೆಂಟ್’ ಸಿನಿಮಾ ಕೂಡ ನಿಲ್ಲುತ್ತದೆ. ನಮ್ಮ ನಡುವೆಯೇ ಇರುವಂಥ ನ್ಯಾಯಾಂಗ ವ್ಯವಸ್ಥೆ, ಅದರ ಕೆಲಸಗಳು ಮತ್ತು ಪರಿಣಾಮಗಳನ್ನು ಈ ಸಿನಿಮಾದಲ್ಲಿ ಹೇಳಿದ್ದೇವೆ. ಮನರಂಜನೆಯ ಜೊತೆ ಜೊತೆಗೇ ಒಂದಷ್ಟು ಗಂಭೀರ ವಿಷಯ, ಸಂದೇಶವನ್ನು ತೆರೆಮೇಲೆ ಹೇಳಿದ್ದೇವೆ. ಎಲ್ಲ ವರ್ಗದ ಆಡಿಯನ್ಸ್‌ಗೆ ಇಷ್ಟವಾಗುವಂತೆ “ದ ಜಡ್ಜ್ ಮೆಂಟ್’ ಸಿನಿಮಾ ಮೂಡಿಬಂದಿದೆ’ ಎಂಬುದು ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ) ಭರವಸೆಯ ಮಾತು.
“ದ ಜಡ್ಜ್ಮೆಂಟ್’ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಲಕ್ಷ್ಮೀ ಗೋಪಾಲಸ್ವಾಮಿ ವಕೀಲರಾಗಿ ಕಾಣಿಸಿಕೊಂಡಿದ್ದಾರೆ. ದಿಗಂತ್, ಧನ್ಯಾ ರಾಮಕುಮಾರ್ ಇಂದಿನ ತಲೆಮಾರಿನ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಮೇಘನಾ ಗಾಂವ್ಕರ್ ಹೋಮ್ಲಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. “ಜಿ 9 ಕಮ್ಯುನಿಕೇಷನ್ ಮೀಡಿಯಾ ಆ್ಯಂಡ್ ಎಂಟರ್‌ಟೈನ್ಮೆಂಟ್’ ನಡಿ ಚಿತ್ರ ನಿರ್ಮಾಣವಾಗಿದೆ.
Ad
Dharawad: ಕಾಂಗ್ರೆಸ್-ಬಿಜೆಪಿಯಿಂದ ಹಿಂದಿ ಹೇರಿಕೆ ತಡೆ ಅಸಾಧ್ಯ: ಪ್ರೊ.ಬಿಳಿಮಲೆ
ಆ ನಟಿ ʼಬಿಗ್ ಬಾಸ್ʼ ಮನೆಯಲ್ಲೇ ಆತ್ಮಹ*ತ್ಯೆಗೆ ಯತ್ನಿಸಿದ್ದರು- ಶಾಕಿಂಗ್ ಸಂಗತಿ ರಿವೀಲ್
Kejriwal: ಉತ್ತಮ ಆಡಳಿತಕ್ಕಾಗಿ ನನಗೆ ನೊಬೆಲ್ ಪ್ರಶಸ್ತಿ ಸಿಗಬೇಕು!: ಕೇಜ್ರಿವಾಲ್
Kalaburagi: ರಸ್ತೆ ಕಾಮಗಾರಿ ಬಿಲ್ ಮಾಡಲು ಕಮಿಷನ್ ಕೇಳಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್
Madenuru Manu: ಅತ್ಯಾಚಾ*ರ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೊರೆ ಹೋದ ಮಡೆನೂರು ಮನು
You seem to have an Ad Blocker on.
To continue reading, please turn it off or whitelist Udayavani.