
‘ರಾಯರು ಬಂದರು ಮಾವನ ಮನೆಗೆ…’: ಕನ್ನಡಕ್ಕೆ ಬಂತು ಗುಜರಾತಿ ಸಿನಿಮಾ
Team Udayavani, Jun 6, 2023, 6:30 PM IST

ಸಿನಿಮಾಗಳು ಭಾಷೆಯ ಗಡಿದಾಟಿವೆ. ಪ್ಯಾನ್ ಇಂಡಿಯಾ ಕಾನ್ಸೆಪ್ಟ್ನಡಿ ಬೇರೆ ಬೇರೆ ಭಾಷೆಯ ಸಿನಿಮಾಗಳು ಎಲ್ಲಾ ಕಡೆ ಬಿಡುಗಡೆಯಾಗುತ್ತಿವೆ. ಈಗಾಗಲೇ ಹಿಂದಿ, ತಮಿಳು, ತೆಲುಗು ಡಬ್ ಆಗಿ ಕನ್ನಡದಲ್ಲಿ ಬಿಡುಗಡೆಯಾಗುತ್ತಿವೆ. ಅದರಂತೆ ಈಗ ಗುಜರಾತಿ ಸಿನಿಮಾವೊಂದು ಕನ್ನಡದಲ್ಲಿ ಬಿಡುಗಡೆಯಾಗುತ್ತಿದೆ.
ವರ ಪಧಾರವೋ ಸಾವಧಾನ ಎಂಬ ಟೈಟಲ್‌ನಡಿ ತಯಾರಾಗಿರುವ ಈ ಸಿನಿಮಾ ಈಗ ಕನ್ನಡದಲ್ಲಿ “ರಾಯರು ಬಂದರು ಮಾವನ ಮನೆಗೆ’ ಎಂಬ ಶೀರ್ಷಿಕೆಯಡಿ ಕನ್ನಡದಲ್ಲಿ ಬಿಡುಗಡೆಯಾಗುತ್ತಿದೆ. ಜಾಕ್ ಮಂಜು ತಮ್ಮದೇ ಶಾಲಿನಿ ಆರ್ಟ್ ಬ್ಯಾನರ್‌ನಡಿ ರಾಯರು ಬಂದರು ಮಾವನ ಮನೆಗೆ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದಾರೆ.
ರತ್ನಪುರ, ಜಿತಿ ಲೇ ಜಿಂದಗಿ ಎಂಬ ಎರಡು ಹಿಟ್ ಚಿತ್ರ ಕೊಟ್ಟಿರುವ ವಿಫುಲ್ ಶರ್ಮಾ ನಿರ್ದೇಶನದಲ್ಲಿ ಈ ಚಿತ್ರ ತಯಾರಾಗಿದ್ದು, ಶೈಲೇಶ್ ಧಮೇಲಿಯಾ, ಅನಿಲ್ ಸಂಘವಿ, ಭರತ್ ಮಿಸ್ತ್ರೀ ಬಂಡವಾಳ ಹೂಡಿದ್ದಾರೆ. ಸಾಧುತುರ್ಷಾ, ಕಿಂಜಲ್ ರಾಜಪ್ರಿಯಾ, ರಾಗಿ ಜಾನಿ ಮತ್ತು ಕಾಮಿನಿ ಪಾಂಚಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಪ್ರಶಾಂತ್ ಬರೋಟ್, ಜಯ್ ಪಾಂಡ್ಯ ಮತ್ತು ಜೈಮಿನಿ ತ್ರಿವೇದಿ ಇತರರು ತಾರಾಬಳಗದಲ್ಲಿದ್ದಾರೆ.
ಜುಲೈ 7ಕ್ಕೆ ಕನ್ನಡದಲ್ಲಿ ರಾಯರು ಬಂದರು ಮಾವನ ಮನೆಗೆ ಸಿನಿಮಾ ಬಿಡುಗಡೆಯಾಗುತ್ತಿದೆ. ರಾಯರು ಬಂದರು ಮಾವನ ಮನೆಗೆ ಸಿನಿಮಾ ಫ್ಯಾಮಿಲಿ ಡ್ರಾಮಾ ಕಥಾಹಂದರ ಹೊಂದಿದೆ. ಮದುವೆ, ಕುಟುಂಬ, ಸಂಬಂಧಗಳ ಸುತ್ತ ಇಡೀ ಸಿನಿಮಾ ಸಾಗಲಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sapta Sagaradaache Ello ಎರಡನೇ ಭಾಗ ಬಿಡುಗಡೆ ಮುಂದಕ್ಕೆ; ಒಟಿಟಿಗೆ ಬಂತು ಸೈಡ್ 1

Vinod Prabhakar; ಅ.1ರಂದು ‘ಫೈಟರ್’ ಟ್ರೇಲರ್ ಬಿಡುಗಡೆ

Ronnie; ಸದ್ದು ಮಾಡುತ್ತಿದೆ ಧರ್ಮ ಕೀರ್ತಿರಾಜ್ ರ ‘ರೋನಿ’ ಟ್ರೇಲರ್

Sandalwood; ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದಲ್ಲಿ ನಿರೂಪ್ ಭಂಡಾರಿ

Sandalwood; ನನ್ನಪಾತ್ರ ತುಂಬಾ ಹೊಸದಾಗಿದೆ: ತೋತಾಪುರಿ 2 ಮೇಲೆ ಧನಂಜಯ್ ನಿರೀಕ್ಷೆ
MUST WATCH
ಹೊಸ ಸೇರ್ಪಡೆ

Totapuri 2 review; ತೋತಾಪುರಿಯ ‘ಘಮ’ ಮತ್ತು ಕಾಡುವ ‘ಸುಮ’!

Pakistani Tv Show: ಟಿವಿ ಚಾನೆಲ್ ನ ಲೈವ್ ಶೋನಲ್ಲೇ ಪಾಕ್ ಮುಖಂಡರ ಮಾರಾಮಾರಿ!

Karnataka Bandh: ವಿಮಾನಗಳಿಗೂ ತಟ್ಟಿದ ಕರ್ನಾಟಕ ಬಂದ್ ಬಿಸಿ… 44 ವಿಮಾನಗಳ ಹಾರಾಟ ರದ್ದು

Hoshiarpur; ಕಿರಾಣಿ ಅಂಗಡಿಯೆದುರು ಶಿರೋಮಣಿ ಅಕಾಲಿ ದಳ ನಾಯಕನ ಗುಂಡಿಕ್ಕಿ ಹತ್ಯೆ

Teacher: ಹಿಂದೂ ವಿದ್ಯಾರ್ಥಿಗೆ ಮುಸ್ಲಿಂ ವಿದ್ಯಾರ್ಥಿಯಿಂದ ಕಪಾಳಮೋಕ್ಷ… ಶಿಕ್ಷಕಿ ಬಂಧನ