
ಅಂಬರೀಶ್ ಹುಟ್ಟುಹಬ್ಬ; ರೆಬೆಲ್‌ಸ್ಟಾರ್ ನೆನಪಲ್ಲಿ….
Team Udayavani, May 29, 2023, 10:28 AM IST

ಮೇ 29… ಕನ್ನಡ ಚಿತ್ರರಂಗಕ್ಕೆ ಈ ದಿನ ಖಂಡಿತ ನೆನಪಿರದೇ ಇರದು. ಅದರಲ್ಲೂ ಅಭಿಮಾನಿಗಳ ಪಾಲಿಗಂತೂ ಮೇ 29 ಅನ್ನೋದು ಹಬ್ಬದ ಸಂಭ್ರಮ ಇದ್ದಂತೆ. ಹೌದು, ಇಂದು (ಮೇ 29) ರೆಬೆಲ್‌ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬ. ಅಂಬರೀಶ್ ನಮ್ಮ ಜೊತೆಗಿಲ್ಲ. ಆದರೆ, ಅವರ ಅಭಿಮಾನಿಗಳು ಭಾರವಾದ ಮನಸ್ಸಿನಿಂದಲೇ ಆಚರಿಸಲಿದ್ದಾರೆ.
ಅಂಬರೀಶ್ ಅವರು ಯಾವತ್ತೂ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡವರಲ್ಲ. ಆದರೆ, ಮನೆಯವರ ಪ್ರೀತಿಗೆ, ಅಭಿಮಾನಿಗಳ ಒತ್ತಾಯಕ್ಕೆ ಅವರ ಜೊತೆಗೂಡಿ ಇಡೀ ದಿನ ಸಂಭ್ರಮಿಸುತ್ತಿದ್ದರು.
ಅಂಬರೀಶ್ ಮಾತುಗಳೇ ಹಾಗೆ. ಅವರು ಎಷ್ಟೇ ಜೋರು ಧ್ವನಿಯಲ್ಲಿ ಬೈದರೂ, ಗದರಿದರೂ ಅಭಿಮಾನಿಗಳು ಮಾತ್ರ ಅವರ ಮಾತನ್ನು ಪ್ರೀತಿಯಿಂದಲೇ ಸ್ವೀಕರಿಸುತ್ತಿದ್ದರು. ಅವರ ಮಾತಿಗೆ ಖುಷಿ ಪಟ್ಟು ಹಿರಿ ಹಿರಿ ಹಿಗ್ಗುತ್ತಿದ್ದರು. ಈಗ ಅಂಬರೀಶ್ ಇಲ್ಲ. ಅವರ ಬೈಗುಳವಿಲ್ಲ. ಆದರೆ, ಅಂಬರೀಶ್ ಅವರು ಹಂಚಿರುವ ಅಪಾರ ಪ್ರೀತಿ ಇದೆ. ಆ ಪ್ರೀತಿಯೇ ದೊಡ್ಡ ಅಭಿಮಾನಿ ವರ್ಗ. ಆ ಅಭಿಮಾನಿಗಳು ಈಗ ಅಂಬರೀಶ್ ಅವರ ಹುಟ್ಟುಹಬ್ಬ ಆಚರಿಸಲು ವಿಶೇಷ ತಯಾರಿ ಮಾಡಿಕೊಂಡಿದ್ದಾರೆ.
ಅಂಬರೀಶ್ ಇದ್ದಾಗ, ಅವರ ಹುಟ್ಟುಹಬ್ಬದ ದಿನ ಬೇರೆಲ್ಲೂ ಹೋಗದೆ ಇಡೀ ದಿನ ಮನೆಯಲ್ಲೇ ಇರುತ್ತಿದ್ದರು. ಅಷ್ಟೇ ಅಲ್ಲ, ತಮ್ಮ ಮನೆಗೆ ಶುಭಾಶಯ ಹೇಳಲು ದೂರದ ಊರುಗಳಿಂದ ಆಗಮಿಸುತ್ತಿದ್ದ ಅಭಿಮಾನಿಗಳನ್ನು ಖುಷಿಪಡಿಸಿ, ಅವರುಗಳು ತಂದಿದ್ದ ಹಾರ, ಕೇಕ್ ಇತರೆ ಪ್ರೀತಿಯ ಉಡುಗೊರೆಗಳನ್ನು ಸ್ವೀಕರಿಸಿ, ಅವರೊಂದಿಗೆ ಫೋಟೋ ತೆಗೆಸಿಕೊಂಡು ಅಭಿಮಾನಿಗಳನ್ನು ಸಂತಸ ಪಡಿಸುತ್ತಿದ್ದರು. ಈಗ ಅಂಬರೀಶ್ ಇಲ್ಲದಿದ್ದರೂ, ಅವರ ಹುಟ್ಟುಹಬ್ಬವನ್ನು ಪ್ರತಿ ವರ್ಷದಂತೆಯೇ ಸಂಭ್ರಮಿಸಬೇಕೆಂಬ ಉದ್ದೇಶ ಅಭಿಮಾನಿಗಳಿಗಿದೆ.
ಇನ್ನು, ಅವರ ಕುಟುಂಬ ವರ್ಗ ಕೂಡ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಅವರ ಸಮಾಧಿ ಬಳಿ ತೆರಳಿ, ವಿಶೇಷವಾಗಿ ಹೂವಿನ ಅಲಂಕಾರ ಮಾಡಿ, ಅಂಬರೀಶ್ ಅವರಿಗೆ ಇಷ್ಟವಾದಂತಹ ತಿಂಡಿ, ತಿನಿಸು ಇಟ್ಟು ಪೂಜೆ ಸಲ್ಲಿಸಲಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Ujjain ; ಅತ್ಯಾಚಾರಕ್ಕೊಳಗಾಗಿ ಬೀದಿಯಲ್ಲಿ ಅರೆನಗ್ನ ಸ್ಥಿತಿಯಲ್ಲಿ ನಡೆದ 12ರ ಬಾಲೆ !!

BYJU’s Lay Off: ಆತಂಕದಲ್ಲಿ ಬೈಜೂಸ್ ಉದ್ಯೋಗಿಗಳು…3,500 ನೌಕರರ ಕಡಿತಕ್ಕೆ ಸಿದ್ಧತೆ

India-Canada ಸಂಬಂಧ ಹದಗೆಡಿಸಲು ನಿಜ್ಜರ್ ಪ್ರಕರಣದಲ್ಲಿ ಪಾಕಿಸ್ಥಾನದ ISI ಸಂಚು

Thirthahalli ಮೀನು ಹಿಡಿಯಲು ಹೋದ ಯುವಕ ತುಂಗಾ ನದಿಗೆ ಬಿದ್ದು ಸಾವು !

Manipur ; ಇಡೀ ರಾಜ್ಯವನ್ನು ‘ಪ್ರಕ್ಷುಬ್ಧ ಪ್ರದೇಶ’ ಎಂದು ಘೋಷಿಸಿದ ಸರಕಾರ