ಹೊಸ ಕ್ಲೈಮ್ಯಾಕ್ಸ್ ಹುಡುಕಾಟದಲ್ಲಿ ರೆಮೋ; ಫ್ಯಾಮಿಲಿಯೇ ಸ್ಫೂರ್ತಿ
Team Udayavani, Apr 13, 2020, 10:04 AM IST
ಇತ್ತೀಚೆಗಷ್ಟೇ ಅಮಿತಾಬ್ ಬಚ್ಚನ್, ಶಿವರಾಜ್ ಕುಮಾರ್, ರಜನಿಕಾಂತ್ ಮೊದಲಾದವರು ಮಾಡಿದ್ದ ಫ್ಯಾಮಿಲಿ ಕಿರುಚಿತ್ರ ನಿಮಗೆ ನೆನಪಿರಬಹುದು. ಈಗ ಇದೇ ಕಿರುಚಿತ್ರದಿಂದ ಪ್ರೇರಣೆಗೊಂಡು ಅಂಥದ್ದೇ ಮತ್ತೂಂದು ಕಿರುಚಿತ್ರ ಕನ್ನಡದಲ್ಲೂ ಹೊರಬಂದಿದೆ. ಅಂದಹಾಗೆ, ಪವನ್ ಒಡೆಯರ್ ಈ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ.
ವೇರ್ ಈಸ್ ದ ನ್ಯೂ ಕ್ಲೈಮ್ಯಾಕ್ಸ್- ಇದು ನಿರ್ದೇಶಕ ಪವನ್ ಒಡೆಯರ್ ಅವರ ಹೊಸ ಕಿರುಚಿತ್ರ. ನಿರ್ದೇಶಕ ಪವನ್ ಒಡೆಯರ್ ಅವರ ಹೊಸ ಚಿತ್ರ ರೇಮೋಗೆ ಹೊಸ ಕ್ಲೈಮ್ಯಾಕ್ಸ್ ಅನ್ನು ಇದು ನೀಡುತ್ತದೆ. ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಹಂತದಲ್ಲಿರುವ ಚಿತ್ರ ನಿರ್ಮಾಪಕರು ಲಾಕ್ ಡೌನ್ ಸಮಯವನ್ನು ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಪರಿಣಾಮಕಾರಿಯಾಗಿ ಚಿತ್ರೀಕರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
4.29 ನಿಮಿಷಗಳ ಈ ಕಿರುಚಿತ್ರದಲ್ಲಿ ಪವನ್ ಒಡೆಯರ್ ಅವರ ಪತ್ನಿ ಅಪೇಕ್ಷ ಪುರೋಹಿತ್, ನಿರ್ಮಾಪಕ ಸಿ.ಆರ್ ಮನೋಹರ್, ಇಶಾನ್, ಆಶಿಕಾ ರಂಗನಾಥ್, ಅಚ್ಯುತ್ ಕುಮಾರ್, ರಾಜೇಶ್ ನಟರಂಗ, ಕೊರಿಯೊಗ್ರಫರ್ ಇಮ್ರಾನ್ ಸರ್ದಾರಿಯಾ, ಛಾಯಾಗ್ರಾಹಕ ವೈದಿ ಇದ್ದಾರೆ. ಈ ಕಿರುಚಿತ್ರದಲ್ಲಿ ಕೂಡ ಮನೆಯಲ್ಲೇ ಇರಿ, ಜಾಗೃತರಾಗಿರಿ ಎಂಬ ಸಂದೇಶವಿದೆ. ರೇಮೋ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ. ಬಾಗಲಕೋಟೆ, ಮಲೇಷಿಯಾ, ದಕ್ಷಿಣ ಆಫ್ರಿಕಾ, ಸಿಂಗಾಪುರಗಳಲ್ಲಿ ಶೂಟಿಂಗ್ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ