Renuka swamy Case: ದರ್ಶನ್‌, ಪವಿತ್ರಾ ಗೌಡ ಮತ್ತೆ ಪೊಲೀಸ್‌ ಕಸ್ಟಡಿಗೆ


Team Udayavani, Jun 15, 2024, 5:53 PM IST

Renuka swamy Case: ದರ್ಶನ್‌, ಪವಿತ್ರಾ ಗೌಡ ಮತ್ತೆ ಪೊಲೀಸ್‌ ಕಸ್ಟಡಿಗೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿ, ಪೊಲೀಸ್‌ ವಿಚಾರಣೆಯಲ್ಲಿದ್ದ ನಟ ದರ್ಶನ್‌ ಗ್ಯಾಂಗ್‌ ನ್ನು ಶನಿವಾರ(ಜೂ.15 ರಂದು) ಕೋರ್ಟ್‌ ಮುಂದೆ ಹಾಜರುಪಡಿಸಲಾಗಿದೆ. ದರ್ಶನ್‌ ಸೇರಿ 10 ಮಂದಿಯನ್ನು ಮತ್ತೆ 5 ದಿನಗಳ ಪೊಲೀಸ್‌ ಕಸ್ಟಡಿಗೆ ನೀಡಿ ಕೋರ್ಟ್‌ ಆದೇಶ ನೀಡಿದೆ.

ಆರ್ಥಿಕ ಅಪರಾಧಗಳ ವಿಶೇಷ ಕೋರ್ಟಿನಲ್ಲಿ ವಿಚಾರಣೆ ನಡೆಸಲಾಗಿದೆ. ಪೊಲೀಸ್‌ ವಿಚಾರಣೆಯಲ್ಲಿದ್ದ ಆರೋಪಿಗಳನ್ನು ಮತ್ತೆ 9 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು.

ಆರೋಪಿಗಳು ಏನು ಮಾಡಿದ್ದಾರೆ ಎಂದು ತಿಳಿಸಲಿ. ಎಲ್ಲದಕ್ಕೂ 2ನೇ ಆರೋಪಿ ದರ್ಶನ್‌ ಅವರೇ ಕಾರಣ ಎನ್ನುವುದು ಎಷ್ಟು ಸರಿ? ದ‌ರ್ಶನ್‌ ಪರ ಅನಿಲ್‌ ಬಾಬು ಕೋರ್ಟಿನ ಮುಂದೆ ವಾದ ಮಂಡಿಸಿದ್ದಾರೆ.

ಆರೋಪಿಗಳ ಪೈಕಿ ಮಹಿಳೆ ನೋವು ಅನುಭವಿಸಿದ್ದಾರೆ. ಪವಿತ್ರಾ ಗೌಡ ಅವರನ್ನು 6 ದಿನಗಳ ವಿಚಾರಣೆಗೆ ಒಳಪಡಿಸಲಾಗಿದೆ. ಇದುವರೆಗೂ ನಮಗೆ ರಿಮ್ಯಾಂಡ್‌ ಅರ್ಜಿ ಬಂದಿಲ್ಲ. ಕೋರ್ಟ್‌ ಗೆ ಮಾಹಿತಿ ನೀಡದೆ ಆರೋಪಿಗಳ ಮೊಬೈಲ್‌ ವಶಪಡಿಸಿದ್ದಾರೆ. ಆರೋಪಿಗಳ ಹೇಳಿಕೆ ಹೊರಗೆ ಸೋರಿಕೆಯಾಗುತ್ತಿದೆ ಎಂದು ಪವಿತ್ರಾ ಪರ ವಕೀಲ ನಾರಾಯಣಸ್ವಾಮಿ ವಾದ ಮಂಡಿಸಿದ್ದಾರೆ.

ಪ್ರಕರಣದಲ್ಲಿ ಆರೋಪಿ ಎ5 ಹಾಗೂ 13 ರೇಣುಕಾಸ್ವಾಮಿ ಅವರಿಗೆ ಎಲೆಕ್ಟ್ರಿಕ್‌ ಶಾಕ್‌ ನೀಡಿ ಸಾಯಿಸಿದ್ದಾರೆ. ಆ ಡಿವೈಸ್‌ ನ್ನು ನಾವು ವಶಕ್ಕೆ ಪಡೆಯಬೇಕು. ಕೊಲೆ ಮಾಡಿ ಆರೋಪಿ ಮೈಸೂರಿಗೆ ತೆರಳಿದ್ದಾರೆ. ಅಲ್ಲಿನ ಸ್ಥಳ ಮಹಜರು ನಡೆಯಬೇಕು. ಆರೋಪಿಗಳ ಮೊಬೈಲ್ ರಿಟ್ರೈವ್‌ ಮಾಡಬೇಕು. ಹಾಗಾಗಿ ನಮಗೆ ಆರೋಪಿಗಳು ಇನ್ನಷ್ಟು ದಿನ ಕಸ್ಟಡಿಗೆ ಬೇಕೆಂದು ಪೊಲೀಸರ ಪರ ವಕೀಲರು ವಾದ ಮಂಡಿಸಿದ್ದಾರೆ.

ವಾದ – ಪ್ರತಿವಾದ ಆಲಿಸಿದ ಪೊಲೀಸರು ದರ್ಶನ್‌, ಪವಿತ್ರಾ ಗೌಡ ಸೇರಿ ಒಟ್ಟು 13 ಆರೋಪಿಗಳನ್ನು ಮತ್ತೆ 5  ದಿನಗಳ ಕಾಲ (ಜೂ.20 ರವರೆಗೆ) ಪೊಲೀಸ್‌ ಕಸ್ಟಡಿಗೆ ನೀಡಿ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್‌ ಆದೇಶ ನೀಡಿದೆ.

ಎ1 ಪವಿತ್ರಾ, ಎ2 ದರ್ಶನ್‌, ಎ3 ಪವನ್‌, ಎ4 ರಾಘವೇಂದ್ರ, ಎ5 ನಂದೀಶ, ಎ6 ಜಗದೀಶ್‌(ಜಗ್ಗ), ಎ7 ಅನುಕುಮಾರ್‌, ಎ10 ವಿನಯ್‌, ಎ11 ನಾಗರಾಜ್ ಎ12 ಲಕ್ಷ್ಮಣ, ಎ13 ದೀಪಕ್‌, ಎ14 ಪ್ರದೋಶ್‌, ಎ16 ಕೇಶವಮೂರ್ತಿ ಅವರನ್ನು ಕಸ್ಟಡಿಗೆ ನೀಡಲಾಗಿದೆ.

ಈಗಾಗಲೇ ಈ ಪ್ರಕರಣದಲ್ಲಿ 18 ಜನರನ್ನು ಬಂಧಿಸಲಾಗಿದೆ. ಶುಕ್ರವಾರ ನಾಲ್ವರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ದಿನಕಳೆದಂತೆ ಪ್ರಕರಣ ಸಂಬಂಧ ವಿಚಾರಣೆಯಲ್ಲಿ ಆರೋಪಿಗಳು ಒಂದೊಂದೆ ವಿಚಾರವನ್ನು ಬಹಿರಂಗಪಡಿಸುತ್ತಿದ್ದಾರೆ.

ಈ ಪ್ರಕರಣದಲ್ಲಿ ಪವಿತ್ರಾ ಗೌಡ ಎ1, ದರ್ಶನ್‌ ಎ2 ಆಗಿದ್ದಾರೆ.

ಗೆಳತಿ ಪವಿತ್ರಾ ಗೌಡ ಅವರಿಗೆ ಆಶ್ಲೀಲ ಮೆಸೇಜ್‌ ಹಾಗೂ ಕಾಮೆಂಟ್‌ ಮಾಡುತ್ತಿದ್ದ ಕಾರಣ ರೇಣುಕಾಸ್ವಾಮಿ ಅವರನ್ನು ಅಪಹರಿಸಿ, ಬೆಂಗಳೂರಿನ ಶೆಡ್‌ ವೊಂದರಲ್ಲಿ ಇರಿಸಿ ಹಲ್ಲೆ ಮಾಡಿ, ಹತ್ಯೆಗೈದು ಮೃತದೇಹವನ್ನು ಮೋರಿಗೆ ಎಸೆಯಲಾಗಿತ್ತು. ಇದಾದ ಬಳಿಕ ಇಬ್ಬರು ಠಾಣೆಗೆ ಬಂದು ಈ ಕೊಲೆಯನ್ನು ತಾವು ಹಣಕಾಸಿನ ವಿಚಾರಕ್ಕೆ ಮಾಡಿದ್ದೇವೆ ಎನ್ನುವ ಮಾತುಗಳನ್ನು ಪೊಲೀಸರು ಮುಂದೆ ಹೇಳಿದ್ದರು. ಆದರೆ ಪೊಲೀಸರು ಮತ್ತಷ್ಟು ವಿಚಾರಣೆಯನ್ನು ನಡೆಸಿದಾಗ, ದರ್ಶನ್‌ ಸೂಚನೆಯ ಮೇರೆಗೆ ಕೊಲೆ ಮಾಡಿದ್ದೇವೆ ಎನ್ನುವ ಸತ್ಯಾಂಶವನ್ನು ಬಾಯಿಬಿಟ್ಟಿದ್ದರು.

 

Ad

ಟಾಪ್ ನ್ಯೂಸ್

Rehabilitation not required in all land acquisition cases: Supreme Court

Supreme Court: ಎಲ್ಲ ಭೂಸ್ವಾಧೀನ ಪ್ರಕರಣಗಳಲ್ಲಿ ಪುನರ್ವಸತಿ ಅಗತ್ಯವಿಲ್ಲ

Belthangady; ಪಿಲ್ಯ ಪರಿಸರದಲ್ಲಿ ನಾಯಿ ಮೇಲೆ ಚಿರತೆ ದಾಳಿ; ಗ್ರಾಮಸ್ಥರಲ್ಲಿ ಆತಂಕ

Belthangady; ಪಿಲ್ಯ ಪರಿಸರದಲ್ಲಿ ನಾಯಿ ಮೇಲೆ ಚಿರತೆ ದಾಳಿ; ಗ್ರಾಮಸ್ಥರಲ್ಲಿ ಆತಂಕ

Gunjan Arya assumed office as the new Superintendent of Police of Dharwad District

Dharwad ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಗುಂಜನ್ ಆರ್ಯ ಅಧಿಕಾರ ಸ್ವೀಕಾರ

Aranthodu; ಅರಣ್ಯ ಇಲಾಖೆ ಕಾರ್ಯಾಚರಣೆ; ಪೆರಾಜೆ ಗಡಿದಾಟಿದ ಕಾಡಾನೆ

Aranthodu; ಅರಣ್ಯ ಇಲಾಖೆ ಕಾರ್ಯಾಚರಣೆ; ಪೆರಾಜೆ ಗಡಿದಾಟಿದ ಕಾಡಾನೆ

ಉಡುಪಿ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಡ್ರಗ್ಸ್‌ ತಡೆ ಸಮಿತಿ ರಚನೆ: ಎಸ್‌ಪಿ

ಉಡುಪಿ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಡ್ರಗ್ಸ್‌ ತಡೆ ಸಮಿತಿ ರಚನೆ: ಎಸ್‌ಪಿ

sarojaDevi–Funeral

Saroja Devi Funeral: ಹುಟ್ಟೂರಿನ ಮಣ್ಣಿನಲ್ಲಿ ‘ಅಭಿನಯ ಸರಸ್ವತಿ’ ಬಿ.ಸರೋಜಾದೇವಿ ಲೀನ

Subhanshu’s contribution to India’s space future: A new chapter in space exploration

ಭಾರತದ ಬಾಹ್ಯಾಕಾಶ ಭವಿಷ್ಯಕ್ಕೆ ಶುಭಾಂಶು ಕೊಡುಗೆ: ಬಾಹ್ಯಾಕಾಶ ಅನ್ವೇಷಣೆಯಲ್ಲಿ ಹೊಸ ಅಧ್ಯಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sarojaDevi–Funeral

Saroja Devi Funeral: ಹುಟ್ಟೂರಿನ ಮಣ್ಣಿನಲ್ಲಿ ‘ಅಭಿನಯ ಸರಸ್ವತಿ’ ಬಿ.ಸರೋಜಾದೇವಿ ಲೀನ

ʼKantara Chapter-1ʼ ಪ್ರಚಾರಕ್ಕೆ ಕೌಂಟ್‌ಡೌನ್ ಶುರು.. ಅಪ್ಡೇಟ್‌ ಕೊಟ್ಟ ಹೊಂಬಾಳೆ

ʼKantara Chapter-1ʼ ಪ್ರಚಾರಕ್ಕೆ ಕೌಂಟ್‌ಡೌನ್ ಶುರು.. ಅಪ್ಡೇಟ್‌ ಕೊಟ್ಟ ಹೊಂಬಾಳೆ

Sarojadevi-1

ಬೆಳ್ಳಿಪರದೆಯ ಬೆರಗು ಕರುನಾಡಿನ ಮಹಿಳಾ ಸೂಪರ್‌ಸ್ಟಾರ್‌ ಬಿ.ಸರೋಜಾ ದೇವಿ

Sarojadevi-Funeral

ಅಭಿನಯ ಸರಸ್ವತಿ, ಹಿರಿಯ ನಟಿ ಬಿ.ಸರೋಜಾದೇವಿ ನಿಧನಕ್ಕೆ ಗಣ್ಯರ ಕಂಬನಿ, ಇಂದು ಅಂತ್ಯಕ್ರಿಯೆ 

1-aa-aa-aa

ಸರೋಜಾದೇವಿ ಕನ್ನಡದ ಪ್ರಥಮ ಲೇಡಿ ಸೂಪರ್‌ಸ್ಟಾರ್‌

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

Fraud Case ಬ್ರಹ್ಮಾವರ: ಖಾತೆಯ ಹಣ ವರ್ಗಾಯಿಸಿ ವಂಚನೆ

Fraud Case ಬ್ರಹ್ಮಾವರ: ಖಾತೆಯ ಹಣ ವರ್ಗಾಯಿಸಿ ವಂಚನೆ

Rehabilitation not required in all land acquisition cases: Supreme Court

Supreme Court: ಎಲ್ಲ ಭೂಸ್ವಾಧೀನ ಪ್ರಕರಣಗಳಲ್ಲಿ ಪುನರ್ವಸತಿ ಅಗತ್ಯವಿಲ್ಲ

14-lotus

Environment: ಪ್ರಕೃತಿಯ ಪೋಷಣೆಗೆ ನಾವೆಲ್ಲರೂ ಪಾಲುದಾರರು

Roti Kapda Aur Makaan fame actor Dheeraj Kumar passes away

Dheeraj Kumar: ರೋಟಿ ಕಪಡಾ ಔರ್‌ ಮಖಾನ್‌ ಖ್ಯಾತಿಯ ನಟ ಧೀರಜ್‌ ಕುಮಾರ್‌ ನಿಧನ

13-plant

Environment: ಹಸುರು ಕಾಯ್ದರೆ ಉಸಿರು ಉಳಿಯುವುದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.