ಸಚಿನ್ ಧನ್‌ಪಾಲ್ ನಟನೆಯ ‘ಚಾಂಪಿಯನ್’ ಟ್ರೇಲರ್ ಇಂದು ರಿಲೀಸ್
Team Udayavani, Sep 12, 2022, 10:18 AM IST
ಸಚಿನ್ ಧನ್‌ಪಾಲ್ ನಾಯಕರಾಗಿರುವ “ಚಾಂಪಿಯನ್’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದ್ದು, ಇಂದು ಅದ್ಧೂರಿ ಕಾರ್ಯಕ್ರಮದಲ್ಲಿ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಶೀಘ್ರದಲ್ಲಿಯೇ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ.
ಇನ್ನು, “ಚಾಂಪಿಯನ್’ ಕ್ರೀಡಾ ಕಥೆಯುಳ್ಳ ಚಿತ್ರವಾಗಿದ್ದು, ಓರ್ವ ಹಳ್ಳಿಯುವಕ ಅಂತಾರಾಷ್ಟ್ರೀಯ ಕ್ರೀಡಾ ಪಟುವಾಗುವ ಕಠಿಣ ಹಾದಿಯನ್ನು ಚಿತ್ರಿಸಲಾಗಿದೆ. ಚಿತ್ರದಲ್ಲಿ ಒಂದು ಒಳ್ಳೆಯ ಸಂದೇಶವಿದ್ದು, ಯುವಕರಿಗೆ, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಏನನ್ನಾದರು ಸಾಧಿಸಲು ಇದು ಸ್ಫೂರ್ತಿಯಾಗಲಿದೆ ಎಂಬುದು ಚಿತ್ರತಂಡದ ಮಾತು.
“ಚಾಂಪಿಯನ್ ಒಂದು ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಚಿತ್ರವಾಗಿದೆ. ಚಿತ್ರದಲ್ಲಿ ರೊಮ್ಯಾನ್ಸ್, ಫ್ಯಾಮಿಲಿ ಸೆಂಟಿಮೆಂಟ್, ಹಾಗೂ ಬರಪೋರ್ ಕಾಮಿಡಿ ದೃಶ್ಯಗಳು ಇದ್ದು, ಜನಕ್ಕೆ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ ಎಂಬುದು ಚಿತ್ರತಂಡದ ವಿಶ್ವಾಸ.
ಶಿವಾನಂದ ಎಸ್ ನೀಲಣ್ಣನವರ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಶಾಹುರಾಜ್ ಶಿಂಧೆ ನಿರ್ದೇಶನ, ಬಿ ಅಜನೀಶ್ ಲೋಕನಾಥ್ ಸಂಗೀತ, ನಾಗಾರ್ಜುನ್ ಶರ್ಮಾ, ಶಿವು ಬೆರಗಿ, ಪ್ರೇಮ ಅಭಿಮಾನ್ ಸಾಹಿತ್ಯ, ವೆಂಕಟೇಶ್ ಸಂಕಲನ ಚಿತ್ರಕ್ಕಿದೆ. ನಾಯಕನಾಗಿ ಸಚಿನ್ ಧನ್ ಪಾಲ್, ನಾಯಕಿ ಅದಿತಿ ಪ್ರಭುದೇವಾ ಅಭಿನಯಿಸಿದ್ದು, ದೇವರಾಜ್, ರಂಗಾಯಣ ರಘು, ಚಿಕ್ಕಣ್ಣ, ಗಿರೀಶ್, ಆದಿ ಲೊಕೇಶ್, ಶೋಭ್ ರಾಜ್, ಅವಿನಾಶ್, ಪ್ರದೀಪ್ ರಾವತ್ ಎಂಬ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿದೆ.
ಇದನ್ನೂ ಓದಿ:ಫೈನಲ್ ಪಂದ್ಯದಲ್ಲಿ ಪಾಕ್ ವಿರುದ್ಧ ಲಂಕೆಗೆ ಜಯ: ಬೀದಿಗಳಲ್ಲಿ ಹಾಡಿ ಕುಣಿದ ಅಫ್ಘಾನಿಗರು
ಚಿತ್ರದಲ್ಲಿ ಮೂಡಿ ಬಂದಿರುವ 5 ಹಾಡುಗಳಿಗೆ ಬಿ. ಅಜನೀಶ್ ಲೋಕ್‌ನಾಥ್ ಸಂಗೀತ ನೀಡಿದ್ದು, ಜಯರಾಮ್ ಧನು ಮುರಳಿ, ಇಮ್ರಾನ್ ಮಾಸ್ಟರ್
ಹೆಜ್ಜೆ ಹಾಕಿಸಿದ್ದಾರೆ. ಚಿತ್ರದ ಚಿತ್ರೀಕರಣ ಬೆಂಗಳೂರು, ಶಿವಮೊಗ್ಗ, ತೀರ್ಥಹಳ್ಳಿ ಹಾಗೂ ಒಂದು ಹಾಡಿನ ಚಿತ್ರೀಕರಣ ದುಬೈನಲ್ಲಿ ನಡೆದಿದೆ. ಚಿತ್ರದ ಸ್ಪೆಷಲ್ ಸಾಂಗ್ ಒಂದರಲ್ಲಿ ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಸಖತ್ ಸ್ಟೆಪ್ಸ್ ಕೂಡಾ ಹಾಕಿದ್ದಾರೆ.