ಸಂಯುಕ್ತಾ ಹೆಗಡೆ ಅಭಿನಯದ ‘ಕ್ರೀಮ್’ ಚಿತ್ರದ ಚಿತ್ರೀಕರಣ ಮುಕ್ತಾಯ
Team Udayavani, Jan 29, 2023, 3:13 PM IST
ಅಗ್ನಿ ಶ್ರೀಧರ್ ಕಥೆ ಹಾಗೂ ಸಂಭಾಷಣೆ ಬರೆದಿರುವ, ದೇವೇಂದ್ರ ಡಿ.ಕೆ ನಿರ್ಮಿಸಿರುವ ಹಾಗೂ ಅಭಿಷೇಕ್ ಬಸಂತ್ ನಿರ್ದೇಶನದ “ಕ್ರೀಮ್’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ.
ಬಹು ನಿರೀಕ್ಷಿತ ಈ ಚಿತ್ರದ ನಾಯಕಿಯಾಗಿ ಸಂಯುಕ್ತಾ ಹೆಗಡೆ ಅಭಿನಯಿಸಿದ್ದಾರೆ. ಅಚ್ಯುತ್ ಕುಮಾರ್, ಅರುಣ್ ಸಾಗರ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಕಳೆದ ವರ್ಷ ಆರಂಭವಾದ ಕ್ರೀಮ್ ಚಿತ್ರ ಶೀರ್ಷಿಕೆ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಆನಂತರ ಚಿತ್ರತಂಡದಿಂದ ಚಿತ್ರದ ಕುರಿತು ಯಾವುದೇ ವಿಷಯ ಹೊರಬಂದಿರಲಿಲ್ಲ. ಚಿತ್ರದಲ್ಲಿ ವಿಶೇಷ ಏನಿರಬಹುದು? ಎಂಬ ಕೌತುಕ ಎಲ್ಲರಲ್ಲೂ ಇದ್ದು, ಬೆಂಗಳೂರಿನಲ್ಲಿ ನಡೆದ ನೈಜಘಟನೆ ಆಧರಿಸಿದ ಚಿತ್ರವಾಗಿದೆ.
ಇದನ್ನೂ ಓದಿ:ಮಂಡ್ಯಾದಾಗೆ ರಮ್ಯಾ ಕಮ್ಲ ಕ್ಯಾಂಡೇಟ್ ಅಂತೆ, ಹೌದಾ ಹುಲಿಯಾ..?
ಚಿತ್ರೀಕರಣದ ವೇಳೆ ನಾಯಕಿ ಸಂಯುಕ್ತ ಹೆಗಡೆ ಅವರಿಗೆ ಭಾರಿ ಪೆಟ್ಟು ಬಿದ್ದ ವಿಷಯ ಸುದ್ದಿಯಾಗಿತ್ತು. ಸಂಯುಕ್ತ ಅವರು ಚೇತರಿಸಿಕೊಂಡ ನಂತರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಈಗ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭವಾಗಲಿದೆ.
ಸುನೋಜ್ ವೇಲಾಯುಧನ್ ಛಾಯಾಗ್ರಹಣ, ಶಿವು (ಕೆಜಿಎಫ್) ಕಲಾ ನಿರ್ದೇಶನ, ಆರ್ಯನ್ ಸಂಕಲನ ಹಾಗೂ ಪ್ರಭು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.