ಚಂದನವನದ ಹಿರಿಯ ನಟ ಉಮೇಶ್ ಹೆಗ್ಡೆ ಹೃದಾಯಾಘಾತದಿಂದ ನಿಧನ
Team Udayavani, Oct 11, 2021, 3:28 PM IST
ಬೆಂಗಳೂರು:ರಂಗಭೂಮಿ, ಕಿರುತೆರೆ ಹಾಗೂ ಚಂದನವನದ ಹಿರಿಯ ನಟ ಉಮೇಶ್ ಹೆಗ್ಡೆ ಸೋಮವಾರ ನಿಧನರಾಗಿದ್ದಾರೆ. ನಿನ್ನೆ ಸಿನಿಮಾ ಶೂಟಿಂಗ್ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಸಂಜೆ 7:45ರ ಸುಮಾರಿಗೆ ಅವರಿಗೆ ಹೃದಾಯಾಘಾತವಾಗಿತ್ತು. ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾದೇ ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಉಮೇಶ್ ಮೃತದೇಹವನ್ನು ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಬಳಿಕ ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಲಿದ್ದಾರೆ.
ಉಮೇಶ್ ಹೆಗ್ಡೆ ಸಾಕಷ್ಟು ಧಾರವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದರು. 71 ವರ್ಷ ವಯಸ್ಸಿನ ಉಮೇಶ್ ರಂಗಭೂಮಿ ಕಲಾವಿದರು ಸಹ ಹೌದು. ಹಿರಿಯ ನಟನ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಸೋಶಿಯಲ್ ಮೀಡಿಯಾ ಪೋಸ್ಟ್ಗಳ ಮೂಲಕ ಸಾಕಷ್ಟು ತಾರೆಯರು ಉಮೇಶ್ ಹೆಗ್ಡೆ ಸಾವಿಗೆ ಸಂತಾಪ ಸೂಚಿಸಿದ್ದಾರೆ.