ನಾಳೆ ಸಿಹಿ ಸುದ್ದಿ ಕೊಡ್ತಾರಂತೆ ನಟಿ ರಮ್ಯಾ: ಚಿತ್ರರಂಗಕ್ಕೆ ಕಂಬ್ಯಾಕ್ ಮಾಡ್ತಾರ ಮೋಹಕ ತಾರೆ?

Team Udayavani, Aug 30, 2022, 1:04 PM IST

ನಾಳೆ ಸಿಹಿ ಸುದ್ದಿ ಕೊಡ್ತಾರಂತೆ ನಟಿ ರಮ್ಯಾ: ಚಿತ್ರರಂಗಕ್ಕೆ ಕಂಬ್ಯಾಕ್ ಮಾಡ್ತಾರ ಮೋಹಕ ತಾರೆ?

ಬೆಂಗಳೂರು:  ಸ್ಯಾಂಡಲ್‌ ವುಡ್‌ ಕ್ವೀನ್‌ ರಮ್ಯಾ ಸೋಶಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಅವರು ಹಾಕುವ ಪ್ರತಿ ಪೋಸ್ಟ್‌ ಗಮನ ಸೆಳೆಯುತ್ತದೆ. ಚಿತ್ರರಂಗಕ್ಕೆ ಕಂಬ್ಯಾಕ್‌ ಮಾಡುತ್ತಾರೆ ಎನ್ನುವ ಸುದ್ದಿ ಚರ್ಚೆಯಲ್ಲಿರುವಾಗಲೇ ಮೋಹಕ ತಾರೆ ಹಾಕಿರುವ ಒಂದು ಪೋಸ್ಟ್‌ ಅಭಿಮಾನಿಗಳ ಕುತೂಹಲ ಹಾಗೂ ಸಂತಸಕ್ಕೆ ಕಾರಣವಾಗಿದೆ.

ರಮ್ಯಾ ಚಿತ್ರರಂಗದಲ್ಲಿ ಕಾಣಿಸಿಕೊಳ್ಳದೆ ಬಹಳ ವರ್ಷವಾಗಿದೆ. ಬಣ್ಣದಲೋಕದಿಂದ ದೂರವಾದ ಬಳಿಕ ಅವರು, ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದರು. ಆ ಬಳಿಕ ವಿದೇಶದಲ್ಲಿ ಹೆಚ್ಚು ದಿನಗಳಿದ್ದ ಅವರು, ಆಗಾಗ ಸೋಶಿಯಲ್‌ ಮೀಡಿಯಾದಲ್ಲಿ ಸಿನಿಮಾ ಸಂಬಂಧಿತ ಪೋಸ್ಟರ್‌, ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ರಮ್ಯಾ ಸ್ಯಾಂಡಲ್‌ ವುಡ್‌ ಸ್ನೇಹಿತರೊಂದಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ರಕ್ಷಿತ್‌ ಶೆಟ್ಟಿ ಅವರ “777 ಚಾರ್ಲಿ” ಸಿನಿಮಾವನ್ನು ನೋಡಿ ಭಾವುಕರಾಗಿದ್ದರು. ಡಾಲಿ ಧನಂಜಯ ಅವರ “ಹೊಯ್ಸಳ” ಸಿನಿಮಾ ಸೇಟ್‌ ಗೆ ಭೇಟಿ ನೀಡಿದ್ದರು. ಈ ಎಲ್ಲಾ ವಿಚಾರಗಳು ಅವರು ಮತ್ತೆ ಸಿನಿಮಾ ರಂಗಕ್ಕೆ ಬರುತ್ತಾರೆ ಎನ್ನುವ ಮಾತನ್ನು ಚರ್ಚೆಯಲ್ಲಿರುವಂತೆ ಮಾಡಿತ್ತು.

ಕಳೆದ ಕೆಲ ದಿನಗಳ ಹಿಂದೆ ರಾಜ್.ಬಿ.ಶೆಟ್ಟಿ ಅವರೊಂದಿಗೆ ರಮ್ಯಾ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಯೊಂದು ವೈರಲ್‌ ಆಗಿತ್ತು. ಆದರೆ ಸ್ವತಃ ರಾಜ್‌ ಬಿ ಶೆಟ್ಟಿ ಅವರೇ ಇದು ಅಧಿಕೃತವಲ್ಲ ಎಂದು ಸ್ಪಷ್ಟನೆ ನೀಡಿ, ಗಾಳಿ ಸುದ್ದಿಗೆ ಅಂತ್ಯ ಹಾಡಿದ್ದರು.

ನಾಳೆ ಎಲ್ಲೆಡೆ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದರೆ, ರಮ್ಯಾ ಅವರ ಅಭಿಮಾನಿಗಳಿಗೆ ಹಬ್ಬದೊಂದಿಗೆ ಮತ್ತೊಂದು ಸರ್ಪ್ರೈಸ್‌ ಕೂಡ ಸಿಗಲಿದೆ. ಅದಕ್ಕೆ ಕಾರಣ ಮೋಹಕ ತಾರೆ ಮಾಡಿರುವ ಒಂದು ಪೋಸ್ಟ್.‌

‘ನಾಳೆ ಬೆಳಗ್ಗೆ 11.15ಕ್ಕೆ ನಿಮಗೆಲ್ಲ ನಾನು ಸಿಹಿ ಸುದ್ದಿ ನೀಡುತ್ತೇನೆ. ಇದು ಅಧಿಕೃತ, ಈ ಸುದ್ದಿಯನ್ನು ಕೊಡಲು ನಾನು ಎಕ್ಸೈಟ್ ಆಗಿದ್ದೇನೆ’ಎಂದು ಬರೆದುಕೊಂಡಿರುವ ಪೋಸ್ಟ್‌ ಹಾಕಿದ್ದಾರೆ.

ಈಗಾಗಲೇ ಈ ಪೋಸ್ಟ್‌ ಸಾಕಷ್ಟು ಜನರಲ್ಲಿ ರಮ್ಯಾ ಹೊಸ ಸಿನಿಮಾ ಅನೌನ್ಸ್‌ ಮಾಡುತ್ತಾರ ಅಥವಾ ಬೇರೆ ಯಾವುದೋ ವಿಷಯವನ್ನು ಹಂಚಿಕೊಳ್ಳುತ್ತಾರೋ ಎನ್ನುವ ಚರ್ಚೆ ಟಾಕ್‌ ಆಫ್‌ ದಿ ಟೌನ್‌ ಆಗಿದೆ.

ಟಾಪ್ ನ್ಯೂಸ್

fire

ರಬ್ಬರ್‌ ತೋಟದಲ್ಲಿ ಬೆಂಕಿ ಆಕಸ್ಮಿಕ

accident 2

ರಾಸಾಯನಿಕ ಸಾಗಾಟ ಮಾಡುತ್ತಿದ್ದ ಟ್ಯಾಂಕರ್‌ ಪಲ್ಟಿ

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ

ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ

ಬೆಳಗಾವಿ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 9 ಲಕ್ಷ ರೂ. ನಗದು ವಶ

ಬೆಳಗಾವಿ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 9 ಲಕ್ಷ ರೂ. ನಗದು ವಶ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಥಾರೋಹಣ ಸಂಪನ್ನ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಥಾರೋಹಣ ಸಂಪನ್ನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Komal new film undenama

ಮತ್ತೆ ಪ್ರೇಕ್ಷಕರೆದುರು ಕೋಮಲ್; ಏ.14ಕ್ಕೆ ಉಂಡೆನಾಮ ಚಿತ್ರ ಬಿಡುಗಡೆ

TDY-6

ʼಉರಿಗೌಡ ಮತ್ತು ನಂಜೇಗೌಡʼ ಸಿನಿಮಾ ನಿರ್ಮಾಣ ಕೈಬಿಟ್ಟ ಸಚಿವ ಮುನಿರತ್ನ

TEQUILA movie

ಹಾಡಿ ಕುಣಿಯಲು ಟಕೀಲಾ ರೆಡಿ

ಪ್ರವೀಣ್ ಕುಮಾರ್ ‘ದೇಸಾಯಿ’ ಚಿತ್ರಕ್ಕೆ ಮುಹೂರ್ತ

ಪ್ರವೀಣ್ ಕುಮಾರ್ ‘ದೇಸಾಯಿ’ ಚಿತ್ರಕ್ಕೆ ಮುಹೂರ್ತ

ಏಪ್ರಿಲ್‌ 7ಕ್ಕೆ ಪೆಂಟಗನ್‌ ತೆರೆಗೆ; ಗುರುದೇಶಪಾಂಡೆ ನಿರ್ಮಾಣ

ಏಪ್ರಿಲ್‌ 7ಕ್ಕೆ ಪೆಂಟಗನ್‌ ತೆರೆಗೆ; ಗುರುದೇಶಪಾಂಡೆ ನಿರ್ಮಾಣ

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

fire

ರಬ್ಬರ್‌ ತೋಟದಲ್ಲಿ ಬೆಂಕಿ ಆಕಸ್ಮಿಕ

accident 2

ರಾಸಾಯನಿಕ ಸಾಗಾಟ ಮಾಡುತ್ತಿದ್ದ ಟ್ಯಾಂಕರ್‌ ಪಲ್ಟಿ

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ

ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.