Udayavni Special

ಹೊಸಬೆಳಕು ಮೂಡುತಿದೆ.. ಸ್ಟಾರ್‌ ಸಿನಿಮಾಗಳ ರಿಲೀಸ್‌ ಡೇಟ್‌ ಅನೌನ್ಸ್‌


Team Udayavani, Jul 25, 2021, 3:54 PM IST

ಹೊಸಬೆಳಕು ಮೂಡುತಿದೆ.. ಸ್ಟಾರ್‌ ಸಿನಿಮಾಗಳ ರಿಲೀಸ್‌ ಡೇಟ್‌ ಅನೌನ್ಸ್‌

ಅಭಿಮಾನಿಗಳ ಮೊಗದಲ್ಲಿ ಮತ್ತೆ ಹರ್ಷ ಮೂಡಿದೆ. ಚಿತ್ರಮಂದಿರಗಳ ಮಾಲೀಕರು ಕೂಡಾ ಸಣ್ಣಗೆ ನಗೆ ಬೀರಲಾರಂಭಿಸಿದ್ದಾರೆ. ಇತ್ತಕಡೆ ನಿರ್ಮಾಪಕರು ಭರವಸೆಯೊಂದಿಗೆ ತಮ್ಮ ಸಿನಿಮಾಗಳ ಡೇಟ್‌ ಅನೌನ್ಸ್‌ ಮಾಡಲಾರಂಭಿಸಿದ್ದಾರೆ. ಹೌದು, ಎರಡನೇ ಲಾಕ್‌ಡೌನ್‌ ಬಳಿಕ ಸ್ಟಾರ್‌ ಸಿನಿಮಾಗಳು ಮತ್ತೆ ಸದ್ದು ಮಾಡುತ್ತಿವೆ. ಆಯಾ ಚಿತ್ರಗಳ ನಿರ್ಮಾಪಕರು ತಮ್ಮ ಸಿನಿಮಾಗಳ ಡೇಟ್‌ ಅನೌನ್ಸ್‌ ಮಾಡಲಾರಂಭಿಸಿದ್ದಾರೆ.

ಈ ಮೂಲಕ ಮತ್ತೆ ಕನ್ನಡ ಚಿತ್ರರಂಗ ಗರಿಗೆದರುತ್ತಿದೆ. ಸತತ ಒಂದೂವರೆ ವರ್ಷಗಳ ಲಾಕ್‌ಡೌನ್‌ ನಿಂದ ಕಂಗೆಟ್ಟಿರುವ ಚಿತ್ರರಂಗದಲ್ಲಿ ಕಳೆದ ಬಾರಿ ಬಿಡುಗಡೆಯಾದ ಮೂರು ಸ್ಟಾರ್‌ ಸಿನಿಮಾಗಳು (ಪೊಗರು, ರಾಬರ್ಟ್‌, ಯುವರತ್ನ) ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವಲ್ಲಿ ಯಶಸ್ವಿಯಾಗಿವೆ. ಈಗ ಎರಡನೇ ಇನ್ನಿಂಗ್ಸ್‌ನಲ್ಲಿ ಮತ್ತಷ್ಟು ಸ್ಟಾರ್‌ ಸಿನಿಮಾಗಳು ರೆಡಿಯಾಗಿವೆ. “ಸಲಗ’, “ಭಜರಂಗಿ-2′, “ಕೋಟಿಗೊಬ್ಬ-3′, “ಕೆಜಿಎಫ್-2′ ಚಿತ್ರಗಳು ಬಿಡುಗಡೆಗೆ ಅಣಿಯಾಗಿವೆ. ಈ ಎಲ್ಲಾ ಚಿತ್ರಗಳು ನಾನಾಕಾರಣಗಳಿಗಾಗಿ ಕುತೂಹಲ ಹೆಚ್ಚಿಸಿವೆ.

ಈಗಾಗಲೇ “ಸಲಗ’ ಹಾಗೂ “ಭಜರಂಗಿ-2′ ಚಿತ್ರಗಳು ಬಿಡುಗಡೆಯ ದಿನಾಂಕ ಘೋಷಿಸಿವೆ. ಆಗಸ್ಟ್‌ 20 ವರಮಹಾಲಕ್ಷ್ಮೀ ಹಬ್ಬದಂದು “ಸಲಗ’ ಚಿತ್ರ ಬಿಡುಗಡೆಯಾದರೆ, ಸೆಪ್ಟೆಂಬರ್‌ 10 ಗಣೇಶನ ಹಬ್ಬದಂದು “ಭಜರಂಗಿ-2′ ಚಿತ್ರ ಬಿಡುಗಡೆಯಾಗಲಿದೆ. ಇನ್ನು, “ಕೋಟಿಗೊಬ್ಬ-3′ ಹಾಗೂ “ಕೆಜಿಎಫ್-2′ ಚಿತ್ರಗಳು ಶೀಘ್ರದಲ್ಲಿಯೇ ತಮ್ಮ ಡೇಟ್‌ ಅನೌನ್ಸ್‌ ಮಾಡಲಿವೆ.

ಮೊದಲ ಹಂತವಾಗಿ ದೊಡ್ಡ ಮಟ್ಟದಲ್ಲಿ ಮಾಸ್‌ ಓಪನಿಂಗ್‌ ಪಡೆಯಲಿರುವ ಚಿತ್ರವೆಂದರೆ ಅದು “ಸಲಗ’. ದುನಿಯಾ ವಿಜಯ್‌ ನಿರ್ದೇಶನ, ನಟನೆಯ “ಸಲಗ’ ಚಿತ್ರ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ. ಅದಕ್ಕೆಕಾರಣ ಈಗಾಗಲೇ ಹಿಟ್‌ಲಿಸ್ಟ್‌ ಸೇರಿರುವ ಚಿತ್ರದ ಹಾಡುಗಳು ಹಾಗೂ ಟೀಸರ್‌. ಮೇಲ್ನೋಟಕ್ಕೆ ಇದು ಪಕ್ಕಾ ಮಾಸ್‌ ಸಿನಿಮಾವಾದರೂ ಚಿತ್ರದಲ್ಲೊಂದು ಲವ್‌ಸ್ಟೋರಿ, ಮದರ್‌ ಸೆಂಟಿಮೆಂಟ್‌ ಇರುವುದರಿಂದ ಎಲ್ಲಾ ವರ್ಗದ ಜನರನ್ನು ಸೆಳೆಯುವ ನಿರೀಕ್ಷೆ ಇದೆ.

ಇದನ್ನೂ ಓದಿ:‘ಝೂ: ಕೇರ್ ಆಫ್ ‘ಡಿ’ ಬಾಸ್’ : ಇದು ದರ್ಶನ್ ಅಭಿಮಾನಿಯ ಅಭಿಮಾನದ ಕಥೆ

ಇನ್ನು, ಎ.ಹರ್ಷ ನಿರ್ದೇಶನದ ಈ ಚಿತ್ರವನ್ನು ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣ ಮಾಡುತ್ತಿದ್ದಾರೆ. “ಭಜರಂಗಿ’ಕನ್ನಡ ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಪಡೆದಿತ್ತು. ಅದೇ ಯಶಸ್ಸಿನ ಬಳಿಕ ನಿರ್ದೇಶಕ ಹರ್ಷ ಅವರು “ಭಜರಂಗಿ 2′ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್‌, ಟೀಸರ್‌ ನೋಡಿದವರಿಗೆ ಇಲ್ಲೂ ಹೊಸದೊಂದು ಕಥೆ ಬಿಚ್ಚಿಕೊಳ್ಳುವ ನಿರೀಕ್ಷೆ ಹೆಚ್ಚಿದೆ. ಅದೇನೆ ಇರಲಿ, “ಭಜರಂಗಿ’ ಮೂಲಕ ಶಿವರಾಜಕುಮಾರ್‌ ಹೊಸ ವಿಷಯ ಹೇಳಿದ್ದರು. ಈ ಬಾರಿ “ಭಜರಂಗಿ 2′ ಮೂಲಕವೂ ಹೊಸತನ ಕಟ್ಟಿಕೊಡುತ್ತಾರೆ ಎಂಬ ನಂಬಿಕೆ ಅವರ ಅಭಿಮಾನಿಗಳಲ್ಲಿದೆ.

ಉಳಿದಂತೆ “ಕೋಟಿಗೊಬ್ಬ-3′ ಹಾಗೂ “ಕೆಜಿಎಫ್-2′ ಚಿತ್ರಗಳು ಕೂಡಾ ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚು ಮಾಡಿಕೊಳ್ಳುತ್ತಿವೆ. ಇದರ ಜೊತೆಗೆ ಸಾಕಷ್ಟು ಹೊಸಬರ ಚಿತ್ರಗಳು ಕೂಡಾ ಬಿಡುಗಡೆಯಾಗಲಿವೆ. ಸರ್ಕಾರ ಆಗಸ್ಟ್‌1 ರಿಂದ ಹೌಸ್‌ಫ‌ುಲ್‌ ಪ್ರದರ್ಶನಕ್ಕೆ ಅವಕಾಶ ನೀಡುವ ಸಾಧ್ಯತೆ ಇರುವುದರಿಂದ ಹೊಸಬರು ಸೇರಿದಂತೆ, ಸ್ಟಾರ್‌ಗಳ ಸಿನಿಮಾಗಳು ಬಿಡುಗಡೆಯ ಸಿದ್ಧತೆಯಲ್ಲಿವೆ. ಇನ್ನೊಂದಿಷ್ಟು ಸಿನಿಮಾಗಳು ಸೆನ್ಸಾರ್‌ ಪ್ರಕ್ರಿಯೆಯಲ್ಲಿ ತೊಡಗಿವೆ. “ನಿನ್ನ ಸನಿಹಕೆ’,”ಲಂಕೆ’, “ರೈಮ್ಸ್‌’, “ಕ್ರಿಟಿಕಲ್‌ ಕೀರ್ತನೆಗಳು’ ಸೇರಿದಂತೆ ಅನೇಕ ಚಿತ್ರಗಳು ಬಿಡುಗಡೆಯಾಗಲಿವೆ.

ದೊಡ್ಡ ಸಿನಿಮಾಗಳ ಡೇಟ್‌ ಅನೌನ್ಸ್‌ಕಾಯುತ್ತಿದ್ದಾರೆ ಹೊಸಬರು: ಅನೇಕ ಹೊಸಬರು ತಮ್ಮ ಸಿನಿಮಾಗಳನ್ನು ಸಿದ್ಧಪಡಿಸಿಕೊಂಡು, ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಆದರೆ, ಅವರೆಲ್ಲರೂ ಸ್ಟಾರ್‌ ಸಿನಿಮಾಗಳ ನಡೆಯನ್ನು ನೋಡಿಕೊಂಡು ಬರಲಿದ್ದಾರೆ. ಅದೇಕಾರಣದಿಂದ ಸ್ಟಾರ್‌ ಸಿನಿಮಾಗಳು ಯಾವಾಗ ಡೇಟ್‌ ಅನೌನ್ಸ್‌ ಮಾಡುತ್ತವೆ ಎಂದು ಎದುರು ನೋಡುತ್ತಿವೆ. ಈ ಗ್ಯಾಪ್‌ನಲ್ಲಿ ಹೊಸಬರು ತಮ್ಮ ಸಿನಿಮಾ ಬಿಡುಗಡೆ ಮಾಡಲಿದ್ದಾರೆ. ಸ್ಟಾರ್‌ ಸಿನಿಮಾಗಳ ನಿರ್ಮಾಪಕರು ಕೂಡಾ ಈ ನಿಟ್ಟಿನಲ್ಲಿ ಒಂದು ಸ್ಪಷ್ಟತೆ ನೀಡುವ ಅಗತ್ಯವಿದೆ.

ರವಿಪ್ರಕಾಶ್ ರೈ

ಟಾಪ್ ನ್ಯೂಸ್

fbdfgtre

ಕೋವಿಡ್ : 8 ಜಿಲ್ಲೆಯಲ್ಲಿ ಶೂನ್ಯ ಪ್ರಕರಣ | ರಾಜ್ಯದಲ್ಲಿಂದು 677 ಹೊಸ ಕೇಸ್ ಪತ್ತೆ

dxfvsfrefe

“Me Too” ಆರೋಪಿ ಚರಣ್‍ಜಿತ್ ಮುಖ್ಯಮಂತ್ರಿ ಸ್ಥಾನಕ್ಕೆ ಅನರ್ಹ| ರಾಷ್ಟ್ರೀಯ ಮಹಿಳಾ ಆಯೋಗ

fgdfgdrt

ನಟಿ ಶಿಲ್ಪಾ ಶೆಟ್ಟಿ ಪತಿ ಕುಂದ್ರಾಗೆ ಸಿಕ್ತು ಜಾಮೀನು

CETಯ ಐದು ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಮೈಸೂರಿನ ಮೇಘನ್ ಗೆ ವೈದ್ಯನಾಗುವ ಅಸೆ

CETಯ ಐದು ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಮೈಸೂರಿನ ಮೇಘನ್ ಗೆ ವೈದ್ಯನಾಗುವ ಆಸೆ

ದಾಖಲೆ ಜಿಗಿತ ಕಂಡ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಮತ್ತೆ ಭಾರೀ ಕುಸಿತ

ದಾಖಲೆ ಜಿಗಿತ ಕಂಡ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಮತ್ತೆ ಭಾರೀ ಕುಸಿತ

ಮೈಸೂರು: ಅರಮನೆ ಆವರಣದಲ್ಲಿ ಹೆಣ್ಣಾನೆಯ ರಂಪಾಟ, ಆನೆಯನ್ನು ನಿಯಂತ್ರಿಸಿದ ಅಭಿಮನ್ಯು

ಮೈಸೂರು: ಅರಮನೆ ಆವರಣದಲ್ಲಿ ಹೆಣ್ಣಾನೆಯ ರಂಪಾಟ, ಆನೆಯನ್ನು ನಿಯಂತ್ರಿಸಿದ ಅಭಿಮನ್ಯು

ಯೋಗ ಚಿಕಿತ್ಸೆಯಿಂದ ಹಲವು ರೋಗಗಳು ದೂರ

ಯೋಗ ಚಿಕಿತ್ಸೆಯಿಂದ ಹಲವು ರೋಗಗಳು ದೂರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

karmanye vadhikaraste sloka

ಶ್ರೀಕೃಷ್ಣ ವಾಣಿ ದರ್ಶನ: ಮರ್ಡರ್‌ ಮಿಸ್ಟರಿ ಬಿಡುಗಡೆಗೆ ರೆಡಿ

shruthi

ಭಜರಂಗಿಯಲ್ಲಿ ರಗಡ್‌ ಶ್ರುತಿ: ಹೆಚ್ಚಾಗುತ್ತಿದೆ ಸಿನಿಮಾ ನಿರೀಕ್ಷೆ

fgdtgr

ಯಜಮಾನ ಚಿತ್ರಕ್ಕೆ ‘ಸೈಮಾ’ ಪ್ರಶಸ್ತಿಗಳ ಗೊಂಚಲು |ಈ ಯಶಸ್ಸಿಗೆ ಅಭಿಮಾನಿಗಳೇ ಕಾರಣ ಎಂದ ದರ್ಶನ್

fgrt

ಪುನೀತ್ ಫ್ಯಾನ್ಸ್ ಗೆ ಸಿಹಿ ಸುದ್ದಿ|ಹ್ಯಾಟ್ರಿಕ್ ಬಾರಿಸಲು ಸಿದ್ಧರಾದ ಅಪ್ಪು-ಆನಂದರಾಮ್

ಅನಿತಾ ಭಟ್‌ ಸಿನಿಮಾದ ಟೈಟಲ್‌ ಲಾಂಚ್‌ ಮಾಡಿದ್ದಾರೆ ಶ್ರೀಮುರುಳಿ!

ಅನಿತಾ ಭಟ್‌ ಸಿನಿಮಾದ ಟೈಟಲ್‌ ಲಾಂಚ್‌ ಮಾಡಿದ್ದಾರೆ ಶ್ರೀಮುರುಳಿ!

MUST WATCH

udayavani youtube

ಅರಮನೆ ಆವರಣದಲ್ಲಿ ಹೆಣ್ಣಾನೆಯ ರಂಪಾಟ, ಆನೆಯನ್ನು ನಿಯಂತ್ರಿಸಿದ ಅಭಿಮನ್ಯು

udayavani youtube

ನಿಮ್ಮ ಅಧಿಕಾರಿಗಳನ್ನು ಸಂಜೆಯೊಳಗೆ ಸಸ್ಪೆಂಡ್ ಮಾಡಿ : ಮಾಜಿ ಸ್ಪೀಕರ್​ ರಮೇಶ್​ ಕುಮಾರ್​

udayavani youtube

48 ಲಕ್ಷ ರೂ.ಗೆ ಗಣಪತಿಯ ‘ಲಡ್ಡು’ ಹರಾಜು

udayavani youtube

ಗಿಫ್ಟ್ ಕೊಡುವ ನೆಪದಲ್ಲಿ ಮಹಿಳಾ ಸಿಬ್ಬಂದಿಗೆ ಮಚ್ಚಿನಿಂದ ಹಲ್ಲೆ

udayavani youtube

ರಸ್ತೆ ದಾಟುವ ವೇಳೆ ಕಾರಿನಡಿ ಬಿದ್ದರೂ ಪವಾಡಸದೃಶವಾಗಿ ಪಾರಾದ ಬಾಲಕ

ಹೊಸ ಸೇರ್ಪಡೆ

ಅಜ್ಜಿ ಆಪರೇಷನ್‌ ನೆರವಿಗೆ ಮೊಮ್ಮಗನ ಮೊರೆ

ಅಜ್ಜಿ ಆಪರೇಷನ್‌ ನೆರವಿಗೆ ಮೊಮ್ಮಗನ ಮೊರೆ

ಹೃದ್ರೋಗ ಆಸ್ಪತ್ರೆಗಳ ಸುಧಾರಣೆ ಅಗತ್ಯ: ಡಾ| ಜವಳಿ

ಹೃದ್ರೋಗ ಆಸ್ಪತ್ರೆಗಳ ಸುಧಾರಣೆ ಅಗತ್ಯ: ಡಾ| ಜವಳಿ

fbdfgtre

ಕೋವಿಡ್ : 8 ಜಿಲ್ಲೆಯಲ್ಲಿ ಶೂನ್ಯ ಪ್ರಕರಣ | ರಾಜ್ಯದಲ್ಲಿಂದು 677 ಹೊಸ ಕೇಸ್ ಪತ್ತೆ

ಅನುಕಂಪ ಹುದ್ದೆ ಆಕಾಂಕ್ಷಿಗಳಿಗೆ ಹೊಸಗನಸು!

ಅನುಕಂಪ ಹುದ್ದೆ ಆಕಾಂಕ್ಷಿಗಳಿಗೆ ಹೊಸಗನಸು!

ಸುಳ್ಳು ಪ್ರಚಾರವೇ ಬಿಜೆಪಿ ಅಜೆಂಡಾ

ಸುಳ್ಳು ಪ್ರಚಾರವೇ ಬಿಜೆಪಿ ಅಜೆಂಡಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.