ಸಪ್ತಸಾಗರ ದಾಟಲು ರಕ್ಷಿತ್ ಶೆಟ್ಟಿ ರೆಡಿ
Team Udayavani, Dec 3, 2020, 1:12 PM IST
ಸದ್ಯ ಕಾಶ್ಮೀರದಲ್ಲಿ “777 ಚಾರ್ಲಿ’ ಚಿತ್ರೀಕರಣದಲ್ಲಿರುವ ರಕ್ಷಿತ್ ಶೆಟ್ಟಿ ಆ ಸಿನಿಮಾ ಮುಗಿಸಿಕೊಂಡು “ಸಪ್ತಸಾಗರದಾಚೆ ಎಲ್ಲೋ’ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.
ಈ ಚಿತ್ರವನ್ನು ಹೇಮಂತ್ ರಾವ್ ನಿರ್ದೇಶಿಸುತ್ತಿದ್ದು, ಚಿತ್ರೀಕರಣದ ಪೂರ್ವಭಾವಿ ಕೆಲಸಗಳುಆರಂಭವಾಗಿರುವಕುರಿತು ಟ್ವೀಟ್ ಮಾಡಿದ್ದಾರೆ. ಹಿಂದೆ ಈ ಜೋಡಿ “ಗೋಧಿ ಬಣ್ಣ ಸಾಧಾರಾಣ ಮೈಕಟ್ಟು’ ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡಿತ್ತು.
ನಂದಕಿಶೋರ್ ಭರ್ಜರಿ ವರ್ಕೌಟ್ : “ಪೊಗರು’ ಚಿತ್ರೀಕರಣ ಮುಗಿಸಿ, ಹೊಸ ಸಿನಿಮಾ “ದುಬಾರಿ’ಗೆ ಮುಹೂರ್ತ ಮಾಡಿ, ಸದ್ಯ ಬ್ರೇಕ್ ತೆಗೆದುಕೊಂಡಿರುವ ನಿರ್ದೇಶಕ ನಂದಕಿಶೋರ್ ವರ್ಕೌಟ್‌ನಲ್ಲಿ ಬಿಝಿಯಾಗಿದ್ದಾರೆ.
ತಾವು ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ನಂದಕಿಶೋರ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ನಂದಕಿಶೋರ್, ಧ್ರುವ ಸರ್ಜಾ ನಾಯಕರಾಗಿರುವ “ದುಬಾರಿ’ ಸಿನಿಮಾಕ್ಕೆ ತಯಾರಿ ನಡೆಸುತ್ತಿದ್ದಾರೆ.
ಯಶ್ ಪುತ್ರಿ ಐರಾಗೆ ಹುಟ್ಟುಹಬ್ಬದ ಸಂಭ್ರಮ : ಮೊದಲ ಮಗು ಐರಾ ಎರಡನೇ ವರ್ಷದ ಹುಟ್ಟು ಹಬ್ಬವನ್ನು ಬುಧವಾರ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಸರಳವಾಗಿ, ಕುಟುಂಬದವರೊಂದಿಗೆ ಆಚರಿಸಿದರು. ಕೋವಿಡ್ ಕಾರಣದಿಂದ ಈ ಬಾರಿ ರಾಕಿಂಗ್ ಜೋಡಿ ಸರಳವಾಗಿ ತಮ್ಮ ಮಗಳ ಹುಟ್ಟುಹಬ್ಬವನ್ನು ಆಚರಿಸಿತು.
ತಮ್ಮ ಮಗಳ ಹುಟ್ಟುಹಬ್ಬದ ಸಂದರ್ಭದಲ್ಲಿ, ಮಗಳ ಅಪರೂಪದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ರಾಧಿಕಾ ಪಂಡಿತ್, “ಜೀವನದಲ್ಲಿ ಸಂತೋಷವನ್ನು ಹೊರತುಪಡಿಸಿ ಏನನ್ನು ನೀಡಿಲ್ಲ. ಜನ್ಮ ದಿನದ ಶುಭಾಶಯಗಳು ನಮ್ಮ ಲಿಲ್ ಏಂಜೆಲ್. ಬೇಗನೇ ಬೆಳೆಯಬೇಡ’ ಎಂದು ವಿಶ್ ಮಾಡಿದ್ದಾರೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444