“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” ಯುವ ಜೊತೆಗಿನ ಸಂಬಂಧದ ಬಗ್ಗೆ ಸಪ್ತಮಿಯ ಆಡಿಯೋ ವೈರಲ್

Team Udayavani, Jun 23, 2024, 1:10 PM IST

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” ಯುವ ಜೊತೆಗಿನ ಸಂಬಂಧದ ಬಗ್ಗೆ ಸಪ್ತಮಿಯ ಆಡಿಯೋ ವೈರಲ್

ಬೆಂಗಳೂರು: ನಟ ಯುವರಾಜ್‌ ಕುಮಾರ್‌ ಪತ್ನಿ ಶ್ರೀದೇವಿ ಭೈರಪ್ಪ ಅವರಿಗೆ ವಿಚ್ಚೇದನ ನೋಟಿಸ್‌ ನೀಡಿದ ಬಳಿಕ ಎರಡೂ ಕಡೆಯಿಂದ ಗಂಭೀರವಾದ ಆರೋಪ- ಪ್ರತ್ಯಾರೋಪಗಳು ಕೇಳಿ ಬಂದಿತ್ತು.

ವಿಚ್ಚೇದನ ನೋಟಿಸ್‌ ನೀಡಿದ ಬಳಿಕ ಯುವರಾಜ್‌ ಕುಮಾರ್‌ ಅವರ ಪರ ವಕೀಲ ಸಿರಿಲ್‌ ಪ್ರಸಾದ್‌ ಸುದ್ದಿಗೋಷ್ಠಿ ನಡೆಸಿ ಶ್ರೀದೇವಿ ಭೈರಪ್ಪ ಅವರಿಗೆ ರಾಧಯ್ಯ ಎಂಬ ವ್ಯಕ್ತಿ ಜತೆ ಅಕ್ರಮ ಸಂಬಂಧ ಇದೆ ಎಂದು ಶ್ರೀದೇವಿ ವಿರುದ್ಧ ಗಂಭೀರವಾದ ಆರೋಪಗಳನ್ನು ಮಾಡಿದ್ದರು.

ಆ ಬಳಿಕ ಯುವ ವಿರುದ್ಧ ಶ್ರೀದೇವಿ ಸಪ್ತಮಿ ಗೌಡ ಜತೆ ಯುವ ಸಂಬಂಧ ಹೊಂದಿದ್ದಾರೆ ಎನ್ನುವ ಗಂಭೀರ ಆರೋಪವನ್ನು ಮಾಡಿದ್ದರು. ಇದಾದ ನಂತರ ಶ್ರೀದೇವಿ ವಿರುದ್ಧ ಸಪ್ತಮಿ ಗೌಡ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಇದೀಗ ಯುವರಾಜ್‌ ಬಗ್ಗೆ ಸಪ್ತಮಿ ಗೌಡ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಪ್ತಮಿ ಗೌಡ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗುತ್ತಿದ್ದು, ಈ ಆಡಿಯೋದಲ್ಲಿ ಅವರು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಆಡಿಯೋದಲ್ಲಿ ಏನಿದೆ?:

“ಹಾಯ್ ಸರ್ ನಿಮಗೆ ಈಗಾಗ್ಲೇ ವಿಷಯ ಗೊತ್ತಿರುತ್ತೆ ಏನಾಗಿದೆ ಏನು ಅಂತ. ನನ್ನ ಸೈಡ್ ಆಫ್ ದಿ ಸ್ಟೋರಿನೂ ಕೇಳಿ. ನನ್ನಿಂದ ತಪ್ಪಾಗಿಲ್ಲ ಎಂದು ನಾನು ಹೇಳ್ತಿಲ್ಲ. ಖಂಡಿತ ನನ್ನಿಂದ ತಪ್ಪಾಗಿದೆ. ನನ್ನ ಅಮ್ಮನ ಮೇಲೆ ಆಣೆ ಮಾಡಿ ಹೇಳ್ತೀನಿ ಸರ್ ನಾನು ಎಂದಿಗೂ ಸಹ ಗುರುನ (ಯುವ ಮೂಲ ಹೆಸರು) ಮದ್ವೆ ಬಿಟ್ಟು ಬಾ ಅಂತ ಯಾವತ್ತೂ ಹೇಳಿಲ್ಲ. ನೀವು ಬೇಕಿದ್ದರೆ ಅವನನ್ನು ಕೇಳಬಹುದು. ಯಾರನಾದರೂ ಕೇಳಬಹುದು. ಇದನ್ನು ವರ್ಕೌಟ್ ಮಾಡು ಇದು ತಪ್ಪಾಗುತ್ತೆ ಬೇಡ ಎಂದು ನಾನು ತುಂಬಾ ಸಲ ಹೇಳಿದ್ದೀನಿ. ಹೌದು ಇದು ನಿಮ್ಮ ಸೆಟ್‌ನಲ್ಲಿ ಆಯ್ತು ಅದಕ್ಕೆ ನಿಮಗೆ ನಮ್ಮ ಮೇಲೆ ಎಷ್ಟೇ ಕೋಪ ಇರಬಹುದು ಸರ್ ಪರವಾಗಿಲ್ಲ ಆದರೆ ನನ್ನ ಸೈಡ್ ಆಫ್ ದಿ ಸ್ಟೋರಿಯನ್ನೂ ಕೇಳಿ” ಎನ್ನುವ ಮಾತು ಆಡಿಯೋದಲ್ಲಿದೆ.

ʻʻಗುರುದು ಫಸ್ಟ್ ಸಿನಿಮಾ. ನಿಮಗೂ ಸಹ ಬಹಳ ಮುಖ್ಯವಾದ ಸಿನಿಮಾ. ಎಲ್ಲರೂ ಕಷ್ಟ ಪಟ್ಟು ಮಾಡಿರುವ ಸಿನಿಮಾ. ನಾನು ಮಧ್ಯೆ ಬರಲ್ಲ ಸರ್. ನಾನು ಇದನ್ನು ಇನ್ನಷ್ಟು ಕಾಂಪ್ಲೆಕ್ಸ್ ಮಾಡುವುದಿಲ್ಲ. ಬೈಯ್ಯುವುದಾದರೆ ಬೈಯ್ಯಿರಿ ಆದರೆ ನನ್ನ ಸೈಡ್ ಆಫ್ ದಿ ಸ್ಟೋರಿ ಸಹ ದಯವಿಟ್ಟು ಕೇಳಿಸಿಕೊಳ್ಳಿ. ಯಾವತ್ತಾದರೂ ಸಪ್ತಮಿ ಇಷ್ಟು ಕೆಟ್ಟವಳ ಎಂದು ಅಂದುಕೊಳ್ಳುವ ಮುಂಚೆ ಏನಾಯಿತು ಎಂದು ನನ್ನಿಂದ ಒಮ್ಮೆ ಕೇಳಿಸಿಕೊಳ್ಳಿ. ಸರ್. ನನ್ನಿಂದ ಇನ್ನೊಬ್ಬರಿಗೆ ನೋವಾಗಿದೆ. ಆದರೆ ನಿಜವಾಗಿಯೂ ನಾನು ನಂಬಿ ಮಾಡಿದ್ದು ಸರ್ ಅದನ್ನು. ಗುರು ಬಂದು ನನ್ನ ಹತ್ರ ಅಷ್ಟು ಹೇಳಿದ ಮೇಲೆಯೇ ನಾನು ಮುಂದುವರಿದೆ. ಇಲ್ಲಾಂದ್ರೆ ನಾನು… ಸಾರಿ ಸರ್, ಜಸ್ಟ್ ಚಾನ್ಸ್ ಕೇಳ್ತಿದ್ದೀನಿ ಅಷ್ಟೇʼʼ ಎಂದು ಆಡಿಯೋದಲ್ಲಿ ಹೇಳಿದ್ದಾರೆ.

ಸಪ್ತಮಿ ಜೊತೆ ಯುವ ಸಂಬಂಧ ಹೊಂದಿರುವ ವಿಚಾರ ತಿಳಿದ ಬಳಿಕ ʼಯುವʼ ಸೆಟ್‌ ಗೆ ಬಂದು ಶ್ರೀದೇವಿ ಜಗಳ ಮಾಡಿದ್ದರು ಎನ್ನಲಾಗಿದ್ದು,ಇದರಿಂದ ಯುವ ಹಾಗೂ ಸಪ್ತಮಿ ಇಬ್ಬರನ್ನೂ ನಿರ್ಮಾಪಕ ವಿಜಯ್‌ ಕಿರಂದೂರು ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ.

ಇದೇ ಸಮಯದಲ್ಲಿ ಸಪ್ತಮಿ ನಿರ್ಮಾಪಕರಿಗೆ ಕಳಿಸಿದ್ದ ಆಡಿಯೋ ಇದು ಎನ್ನಲಾಗುತ್ತಿದೆ. ಸದ್ಯ ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಯುವ- ಶ್ರೀದೇವಿ ಹಾಗೂ ಸಪ್ತಮಿ ಗೌಡ ವಿಚಾರ ಮತ್ತೆ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಟಾಪ್ ನ್ಯೂಸ್

Jammu: ಸೇನಾ ನೆಲೆ ಮೇಲೆ ಉಗ್ರರ ದಾಳಿ, ಯೋಧರಿಂದ ಪ್ರತಿದಾಳಿ ದಾಳಿ, ಕಾರ್ಯಾಚರಣೆ ಮುಂದುವರಿಕೆ

Jammu: ಬೆಳ್ಳಂಬೆಳಗ್ಗೆ ಸೇನಾ ನೆಲೆ ಮೇಲೆ ಉಗ್ರರ ದಾಳಿ… ಭದ್ರತಾ ಪಡೆಗಳಿಂದ ಪ್ರತಿದಾಳಿ

3-bng

Bengaluru: ನೀರು ಹಾರಿದ್ದಕ್ಕೆ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿದ ಆಟೋ ಚಾಲಕ

2-bng

Bengaluru: ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಬೈಕ್‌: ಸವಾರ ಸಾವು‌

Fake Stock Market: ಫೇಸ್‌ಬುಕ್‌ನಲ್ಲೇ ಗಾಳ; ಕೋಟ್ಯಂತರ ರೂ. ದೋಖಾ!

Fake Stock Market: ಫೇಸ್‌ಬುಕ್‌ನಲ್ಲೇ ಗಾಳ; ಕೋಟ್ಯಂತರ ರೂ. ದೋಖಾ!

Paris-olympics

Olympics 2024 ಆತಿಥ್ಯಕ್ಕೆ ಪ್ಯಾರಿಸ್‌ ಸಜ್ಜು

Basrur: ಇಂಡಿಯನ್‌ ಪೈಂಟೆಡ್‌ ಫ್ರಾಗ್‌ ಪತ್ತೆ; ಬಣ್ಣದ ಚಿತ್ತಾರ ಹೊಂದಿರುವ ವಿಶಿಷ್ಟ ಕಪ್ಪೆ

Basrur: ಇಂಡಿಯನ್‌ ಪೈಂಟೆಡ್‌ ಫ್ರಾಗ್‌ ಪತ್ತೆ; ಬಣ್ಣದ ಚಿತ್ತಾರ ಹೊಂದಿರುವ ವಿಶಿಷ್ಟ ಕಪ್ಪೆ

1-24–monday

Daily Horoscope: ಹೆಚ್ಚಿನ ಕ್ಷೇತ್ರಗಳಲ್ಲಿ ಯಶಸ್ಸು, ವ್ಯವಹಾರದಲ್ಲಿ ಉತ್ತಮ ಲಾಭ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tharun Sudhir:‌ ತನ್ನ ಜೀವನದ ಹೀರೋಯಿನ್ ಪರಿಚಯಿಸಲು ರೆಡಿಯಾದ ತರುಣ್‌ ಸುಧೀರ್

Tharun Sudhir:‌ ತನ್ನ ಜೀವನದ ಹೀರೋಯಿನ್ ಪರಿಚಯಿಸಲು ರೆಡಿಯಾದ ತರುಣ್‌ ಸುಧೀರ್

“ದರ್ಶನ್‌ ಫ್ಯಾನ್ಸ್‌ ಮಗಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ..” ದಿವ್ಯಾ ತಾಯಿ ಕಣ್ಣೀರು

“ದರ್ಶನ್‌ ಫ್ಯಾನ್ಸ್‌ ಮಗಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ..” ದಿವ್ಯಾ ತಾಯಿ ಕಣ್ಣೀರು

Renukaswamy Case: ದರ್ಶನ್‌ ಹಲ್ಲೆ ನಡೆಸುವ ವಿಡಿಯೋ ಲಭ್ಯ?

Renukaswamy Case: ದರ್ಶನ್‌ ಹಲ್ಲೆ ನಡೆಸುವ ವಿಡಿಯೋ ಲಭ್ಯ?

Rakshit Shetty: ಕಾಪಿ ರೈಟ್ಸ್‌ ಉಲ್ಲಂಘನೆ ಆರೋಪ; ನ‌ಟ ರಕ್ಷಿತ್‌ ಶೆಟ್ಟಿಗೆ ಬಂಧನ ಭೀತಿ!

Rakshit Shetty: ಕಾಪಿ ರೈಟ್ಸ್‌ ಉಲ್ಲಂಘನೆ ಆರೋಪ; ನ‌ಟ ರಕ್ಷಿತ್‌ ಶೆಟ್ಟಿಗೆ ಬಂಧನ ಭೀತಿ!

Ragini Prajwal; ಶ್ಯಾನುಭೋಗರ ಮಗಳು ತೆರೆಗೆ ಸಿದ್ದ

Ragini Prajwal; ಶ್ಯಾನುಭೋಗರ ಮಗಳು ತೆರೆಗೆ ಸಿದ್ದ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Jammu: ಸೇನಾ ನೆಲೆ ಮೇಲೆ ಉಗ್ರರ ದಾಳಿ, ಯೋಧರಿಂದ ಪ್ರತಿದಾಳಿ ದಾಳಿ, ಕಾರ್ಯಾಚರಣೆ ಮುಂದುವರಿಕೆ

Jammu: ಬೆಳ್ಳಂಬೆಳಗ್ಗೆ ಸೇನಾ ನೆಲೆ ಮೇಲೆ ಉಗ್ರರ ದಾಳಿ… ಭದ್ರತಾ ಪಡೆಗಳಿಂದ ಪ್ರತಿದಾಳಿ

3-bng

Bengaluru: ನೀರು ಹಾರಿದ್ದಕ್ಕೆ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿದ ಆಟೋ ಚಾಲಕ

2-bng

Bengaluru: ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಬೈಕ್‌: ಸವಾರ ಸಾವು‌

Fake Stock Market: ಫೇಸ್‌ಬುಕ್‌ನಲ್ಲೇ ಗಾಳ; ಕೋಟ್ಯಂತರ ರೂ. ದೋಖಾ!

Fake Stock Market: ಫೇಸ್‌ಬುಕ್‌ನಲ್ಲೇ ಗಾಳ; ಕೋಟ್ಯಂತರ ರೂ. ದೋಖಾ!

Paris-olympics

Olympics 2024 ಆತಿಥ್ಯಕ್ಕೆ ಪ್ಯಾರಿಸ್‌ ಸಜ್ಜು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.